ಸುಳ್ಯ ನಗರ ಪಂಚಾಯತ್ ವತಿಯಿಂದ ಕೊರೋನ ವೈರಸ್ಸಿನ ಜನಜಾಗೃತಿ | ಬೀದಿ ಬರಹದ ಸ್ಲೋಗನ್

ಜಿಲ್ಲಾಡಳಿತದ ಆದೇಶ ಮತ್ತು ಸಹಾಯಕ ಕಮಿಷನರ್ ಅವರ ನಿರ್ದೇಶನದಂತೆ ಸುಳ್ಯ ನಗರದ ಸುಮಾರು 16 ಕಡೆಗಳಲ್ಲಿ ಕೊರೋನಾ ವೈರಸ್ ಜಾಗೃತಿ ಮೂಡಿಸುವ ಸ್ಲೋಗನ್ ಗಳನ್ನು ರಸ್ತೆಯಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ನಗರ ಪಂಚಾಯತ್ ಮುಂದಾಗಿದ್ದಾರೆ. ಎಲ್ಲೋ ಮೈಮರೆತು ಬೀದಿಗೆ ಬಂದಾಗ ಕೂಡಾ ಈ ಬರಹ ನೋಡಿ, ಮನಸ್ಸಲ್ಲಿ ಕೊರೋನಾ ವೈರಸ್ ಹರಡುವ ತೀವ್ರತೆಯ ಪ್ರಜ್ಞೆ ಮೂಡಿ ಮತ್ತೆ ಮನೆಗೆ ಹೋಗುವಂತಾಗಲಿ ಎಂದು ಈ ಬರಹದ ಉದ್ದೇಶ.


Ad Widget

Ad Widget

Ad Widget

Ad Widget
Ad Widget

Ad Widget

ಈ ಕಾರ್ಯಕ್ರಮದ ಅಂಗವಾಗಿ ಬೀದಿಗಳಲ್ಲಿ ಬೀದಿ ಬರಹಗಳನ್ನು ಮಾಡಲಾಗುತ್ತಿದೆ. ಈ ವಿನೂತನ ಕಾರ್ಯಕ್ರಮಕ್ಕೆ ಊರವರಿಂದ ಶ್ಲಾಘನೆ ವ್ಯಕ್ತವಾಗಿದೆ.


Ad Widget

ಏನದು ಸ್ಲೋಗನ್ ?

ಕೊರೋನಾ ವೈರಸ್ ಜನರಿಗೆ ಹೇಳುತ್ತದೆ. ” ಬಂದರೆ ನೀ ಬೀದಿಗೆ, ಬರುವೆ ನಾ ನಿಮ್ಮನೆಗೆ ”
ಇದೆ ರೀತಿಯ ಇನ್ನೊಂದು ಸ್ಲೋಗನ್ ” ಬೀದಿಗೆ ಬಂದರೆ ನೀನು, ಬರುವೆ ನಿಮ್ಮನೆಗೆ ನಾನು ”

ಇದರ ಅಂಗವಾಗಿ ಪೈಚಾರು ಜ್ಯೋತಿ ವೃತ್ತ ಗಾಂಧಿನಗರ ಕೆವಿಜಿ ಕುರುಂಜಿಭಾಗ್ ಜಟ್ಟಿಪಳ್ಳ ಮುಂತಾದ ಕಡೆಗಳಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ನಗರ ಪಂಚಾಯತ ಮುಖ್ಯಾಧಿಕಾರಿ ಮತ್ತಡಿ ಹಾಗೂ ಸ್ವಚ್ಛ ಸುಳ್ಯದ ರುವಾರ ಲಸ್ರಾದೋ ಹಾಗೂ ಸಿಬ್ಬಂದಿ ವರ್ಗ ಇದ್ದರು.

error: Content is protected !!
Scroll to Top
%d bloggers like this: