ಚೆನ್ನಾವರ ಅಭ್ಯುದಯ ಯುವಕ ಮಂಡಲದ ವತಿಯಿಂದ 25 ಮನೆಗಳಿಗೆ ಅಗತ್ಯ ಆಹಾರ ಪೂರೈಕೆ

ಕಡಬ : ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಚೆನ್ನಾವರ ಬೈಲು,ಬೇರಿಕೆ ,ಅಂಕತ್ತಡ್ಕ, ಪೆರುವಾಜೆಯ ಮುಕ್ಕೂರು ಕುಂಡಡ್ಕ ,ಕೊಳ್ತಿಗೆ ಗ್ರಾಮದ ಪಾಲ್ತಾಡು ವ್ಯಾಪ್ತಿಯಲ್ಲಿರುವ ಬಡ ಜನರಿಗೆ ಅಭ್ಯುದಯ ಯುವಕ ಮಂಡಲ ಚೆನ್ನಾವರ ಇವರು ಅಶಕ್ತರಿಗೆ ಊಟದ ವ್ಯವಸ್ಥೆಯ ಅಳಿಲು ಸೇವೆಗೆ ಮುಂದಾಗಿದ್ದಾರೆ.

ಪಾಲ್ತಾಡಿ ಗ್ರಾಮದ ಚೆನ್ನಾವರ ಅಭ್ಯುದಯ ಯುವಕಮಂಡಲದ ಪದಾಧಿಕಾರಿಗಳು ಅಕ್ಕಿ, ಉಪ್ಪು, ಈರುಳ್ಳಿ,ಮೆಣಸು ಮುಂತಾದ ಅಗತ್ಯವಸ್ತುಗಳನ್ನು ಸಂಗ್ರಹಿಸಿ ಕೊರೋನಾದ ಲಾಕ್ ಡೌನ್ ಅಶಕ್ತರಿಗೆ ಊಟದ ವ್ಯವಸ್ಥೆಯ ಸಹಾಯ ಹಸ್ತ ಚಾಚಲಾಯಿತು.

ವಿಶೇಷವೆಂದರೆ, ಹತ್ತಾರು ಮನೆಗಳಿಗೆ ಸಹಾಯ ಮಾಡೋಣ ಅಂದುಕೊಂಡದ್ದು , ಒಂದೇ ದಿನದಲ್ಲಿ 25 ಮನೆಗಳಿಗೆ ಅಗತ್ಯವಸ್ತುಗಳ ಹಂಚಿಕೆ ಮಾಡಲಾಯಿತು. ಮುಂದಿನ ಮೂರು ತಿಂಗಳು ಆವಶ್ಯಕತೆ ನೋಡಿ ಅಗತ್ಯ ವಸ್ತುಗಳನ್ನು ನೀಡುವುದೆಂದು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಯುವಕಮಂಡಲದ ಅಧ್ಯಕ್ಷರು, ಸದಸ್ಯರು ಮತ್ತು ಹಾಜರಿದ್ದರು.

ಒಂದು ಕಿಟ್‌ನಲ್ಲಿ 10kg ಕುಚ್ಚಲು ಅಕ್ಕಿ, 1 kg ಉಪ್ಪು, 1 kg ಈರುಳ್ಳಿ,1/2 kg ಮೆಣಸು,ಹುರುಳಿ ಒಳಗೊಂಡಿದೆ.

ಅವಶ್ಯಕತೆ ಇರುವ ಕುಟುಂಬಗಳು ನಿಮ್ಮ ಗಮನಕ್ಕೆಬಂದರೆ 9902459543 ,9535730580 ಗೆ ಮಾಹಿತಿ ನೀಡುವಂತೆ ಕೋರಿಕೆ.

Leave A Reply

Your email address will not be published.