ಸವಣೂರು | ಕುಡಿಯಲು ಮದ್ಯವಿಲ್ಲದೆ ಮದ್ಯ ವ್ಯಸನಿ ಸಾವು

ಕಡಬ : ಕುಡಿಯಲು ಮದ್ಯವಿಲ್ಲದೆ ಮದ್ಯವ್ಯಸನಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಸವಣೂರಿನಿಂದ ವರದಿಯಾಗಿದೆ.

ಸವಣೂರು ಗ್ರಾಮದ ಚಾಪಲ್ಲ ನಿವಾಸಿ ಆನಂದ ಎಂಬವರೇ ಮದ್ಯವಿಲ್ಲದೆ ಮಾನಸಿಕವಾಗಿ ಕುಗ್ಗಿ ಮೃತಪಟ್ಟ ಕುರಿತು ವರದಿಯಾಗಿದೆ.

ಚಾಪಲ್ಲದ ಆನಂದ ಪ್ರತಿದೀನ ಮದ್ಯಪಾನ ಮಾಡುತ್ತಿದ್ದು, ಲಾಕ್‌ಡೌನ್ ಆಗಿದ್ದರಿಂದ ಎಲ್ಲಾ ಮದ್ಯದಂಗಡಿ ಬಂದ್ ಆಗಿದ್ದು, ಮದ್ಯ ದೊರಕದೆ ಸಾವಿಗೀಡಾಗಿದ್ದಾರೆ.

ಮದ್ಯದಂಗಡಿ ಬಂದ್ ಆಗಿದ್ದರೂ ಕೆಲದಿನಗಳ ಹಿಂದೆ ಮದ್ಯದಂಗಡಿ ಎದುರು ಕಾಯುತ್ತಾ ಕುಳಿತ್ತಿರುತ್ತಿದ್ದ ವ್ಯಕ್ತಿ ಎ.2 ರಂದು ಮನೆಯಲ್ಲಿ ಮೃತಪಟ್ಟಿದ್ದಾರೆ.

ಮೊನ್ನೆಯವರೆಗೆ ಕುಡುಕರು ಆತ್ಮಹತ್ಯೆ ಮಾಡಿಕೊಳ್ಳುವ ವರದಿಗಳು ಬರುತ್ತಿತ್ತು. ಈಗ ತನ್ನಿಂದ ತಾನೇ ಸಾಯುತ್ತಿದ್ದಾರೆ. ಸಡನ್ ಆಗಿ ಕುಡಿತ ಬಿಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅಹಿತಕರ ಪರಿಣಾಮ ಬೀರಬಲ್ಲುದು ಎಂಬ ಬಗ್ಗೆ ನಾವು ಸಂಪಾದಕೀಯ ಬರೆದಿದ್ದೆವು. ಇದು ಇವತ್ತು ಸವಣೂರಿನಲ್ಲಿ ನಡೆದಿದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಮುಂದುವರೆಯುತ್ತದೆ. ಬೇಕಾದರೆ ಗಮನಿಸುತ್ತಿರಿ. ಇಲ್ಲಿದೆ ಸಂಪಾದಕೀಯ.

ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ

ಅನೈತಿಕ ಅನಿತಾಳ ಕತೆ ಕೇಳಿ

Leave A Reply

Your email address will not be published.