ಅನೈತಿಕ ಸಂಬಂಧ ಮುಂದುವರಿಸಲು ತನ್ನ ಪ್ರಿಯಕರನ ಜೊತೆ ಮಗಳ ವಿವಾಹ ಮಾಡಿದ ತಾಯಿ | ಅನೈತಿಕ ಸಂಬಂಧದ ಆಯುಷ್ಯ ಎಷ್ಟು ?!

ಹೈದರಾಬಾದ್ : ಅಳಿಯನ ಜೊತೆ ತನ್ನ ತಾಯಿಯೊಬ್ಬಳು ಅಕ್ರಮ ಸಂಬಂಧ ಇಟ್ಟುಕೊಂಡ ತಾಯಿಯ ನಡವಳಿಕೆಯನ್ನು ಸಹಿಸಲಾಗದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಹೈದರಾಬಾದಿನಲ್ಲಿ ನಡೆದಿದೆ.


Ad Widget

Ad Widget

ಅನೈತಿಕ ಅನಿತಾಳ ಕಥೆ


Ad Widget

ಅನಿತಾಗೆ ಇಬ್ಬರು ಮಕ್ಕಳು. ಒಬ್ಬಾಕೆ ಹತ್ತೊಂಬತ್ತು ವರ್ಷ ವಯಸ್ಸಿನ ವಂದನಾ, ಮತ್ತೊಬ್ಬಾಕೆ ಚಿಕ್ಕವಳು ಸಂಜನಾ. ಅನಿತಾ ಇನ್ನೂ ನಲವತ್ತರ ಆಸುಪಾಸಿನ ವಳು. ಅದೇನು ಕಾರಣವಾಯಿತೋ, ಆಕೆ ಗಂಡನಿಂದ ಪ್ರತ್ಯೇಕವಾಗಿ ಮಕ್ಕಳೊಂದಿಗೆ ವಾಸಿಸುತ್ತಿದ್ದಳು.

ಇಂತಹ ಸಂದರ್ಭದಲ್ಲಿ ಅನಿತಾಗೆ ಪರಿಚಯವಾದವನೇ ಪ್ರೇಮ್ ನವೀನ್ ಕುಮಾರ್. ಆತ ಇನ್ನೂ 25 ರ ಆಸುಪಾಸಿನ ಯವ್ವನದ ಹುಡುಗ. ಅವರ ಪರಿಚಯ ಸ್ನೇಹವಾಗಿ ಮುಂದುವರಿದು ಎಲ್ಲರ ಥರ ಇದ್ದಿದ್ದರೆ ಆತ ‘ ಆಂಟಿ ಆಂಟಿ ‘ ಅಂತ ವಿಶ್ವಾಸದಿಂದ ಕರೆಡಿರುತ್ತಿದ್ದ. ಆಕೆ ಕೂಡ ಆತನಿಗಿಂತ ಒಂದಿಷ್ಟು ಹೆಚ್ಚಿಗೆನೇ ಅಕ್ಕರೆ ತೋರಿಸುತ್ತಿದ್ದಳು.

Ad Widget

Ad Widget

Ad Widget

ಆದರೆ ಆಕೆಯಲ್ಲಿ ಇನ್ನಿಲ್ಲದ ಉನ್ಮಾದವಿತ್ತು. ಎಲ್ಲರಂತೆ ಕೇವಲ ಆಂಟಿಯಾಗಿ ಅಕ್ಕರೆ ತೋರಲು, ಸಲಹೆ ಕೊಡುತ್ತ ಹಿರಿಯಕ್ಕನಂತೆ ಇರಲು ಆಕೆಗೆ ಮನಸ್ಸಿರಲಿಲ್ಲ. ಆಕೆಗೆ ಅರ್ಜೆಂಟಾಗಿ ಒಂದು ಗಂಡು ಬೇಕಿತ್ತು. ಅದು ಆಕೆಗೆ ತನ್ನ ನಲವತ್ತರ ಪ್ರಾಯ ಘಟ್ಟದಲ್ಲಿ ಉಂಟಾದ ಬದಲಾವಣೆ. ಆ ಹೊತ್ತಿಗಾಗಲೇ ಆಕೆಯಲ್ಲಿ ವಿಚಿತ್ರವಾದ ಬಯಕೆಗಳು ಬೇಡಿಕೆ ಇಟ್ಟು ಧರಣಿ ಕೂತಿದ್ದವು. ಆಕೆಯ ರಾತ್ರಿಗಳು ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದವು.

ಆತನ ಪರಿಚಯದಿಂದ ಸ್ನೇಹವಾಗಿ, ಆ ಸ್ನೇಹದ ಜತೆ ನಿಧಾನವಾಗಿ ಸಲಿಗೆ ಬೆಳೆಸಿಕೊಂಡಳು. ಅದೊಂದು ದಿನ ಆಕೆಯ ಮಕ್ಕಳಿಬ್ಬರನ್ನು ನೆಂಟರ ಮನೆಗೆ ಕಳುಹಿಸಿದ್ದಳು. ತೀರ ಕೊನೆಯ ಗಳಿಗೆಯಲ್ಲಿ ಇಳಿಸಂಜೆಯ ಹೊತ್ತಲ್ಲಿ ಆತನಿಗೆ ಕಾಲ್ ಮಾಡಿ ಮನೆಗೆ ಬರ ಹೇಳಿದ್ದಳು. ಮೊದಲು ಚಹಾ ಕುಡಿಯಲು ಕೊಟ್ಟಳು. ಆನಂತರ ಊಟ ಮಾಡಿಯೇ ಒತ್ತಾಯ ಹೇರಿದ್ದಳು. ಊಟದ ತಯಾರಿಯನ್ನು ಉದ್ದೇಶ ಪೂರ್ವಕಾಗಿಯೇ ಡಿಲೇ ಮಾಡಿದಳು. ಅಂತೂ ಇಂತೂ ರಾತ್ರಿ ಹನ್ನೊಂದಕ್ಕೆ ಊಟ ಆಯಿತು. ಆತ ಹೊರಡಲು ಅನುವಾದ. ಆಗ ಆಕೆ, ” ರಾತ್ರಿ ಮನೆಯಲ್ಲಿ ಯಾರೂ ಇಲ್ಲ. ಒಬ್ಲಿಗೆ ಮನೇಲಿ ಮಲಗೋಕೆ ಭಯ ಆಗುತ್ತೆ. ಇಲ್ಲೇ ಇರು, ಬೆಲ್ಗೆ ಹೋಗೋ… ” ಸಡನ್ನಾಗಿ ಏಕವಚನಕ್ಕೆ ಆಕೆ ತಿರುಗಿದ್ದಳು. ಅವಳ ಕೇರಿಂಗ್ ಆತನಿಗೂ ಹಿತವೆನಿಸಿತ್ತು. ಹಾಗೆ ಅವತ್ತು ಅವಳ ಮನೆಯಲ್ಲಿ ಅನಿತಾ ಆಂಟಿಗೆ ಸಹಾಯಕ್ಕಾಗಿ ನಿಂತ ಪ್ರೇಮ್ ನವೀನ್ ಕುಮಾರ್. ಅನಿತಾಳ ಹುನ್ನಾರಗಳಿಗೆ ನವೀನ್ ಕುಮಾರ್ ಅದ ದಿನ ಬಲಿ ಬಿದ್ದಿದ್ದ. ಆತನ ಸಂಯಮ ಕೈಕೊಟ್ಟಿತ್ತು. ಮುಂದಿನದು ಅದೊಂದು ‘ ಅನೈತಿಕ ಸಂಬಂಧ ‘ ಎಂದು ಈ ಸಮಾಜ ಹೇಳಿಕೊಳ್ಳುವ ಸಂಬಂಧವನ್ನು ಅವರಿಬ್ಬರೂ ಕೂಡಿ ರೂಪಿಸಿಕೊಂಡಿದ್ದರು.

ನವೀನ್ ಕುಮಾರ್, ಅನಿತಾ ಆಂಟಿಯ ಮನೆಗೆ ಭೇಟಿ ನೀಡುವುದು ಹೆಚ್ಚಾಯಿತು. ಆಂಟಿಯ ಅಕ್ಕರೆ, ಅವಳ ಕೈಯಡುಗೆ ಮತ್ತು ಆಕೆಯೊಂದಿಗಿನ ಪುಕ್ಕಟೆ ಯಥೇಚ್ಛ ಸೆಕ್ಸ್ ಆತನನ್ನು ಮುದಗೊಳಿಸಿತ್ತು.

ಆದರೆ ಅನಿತಾಳ ಆಲೋಚನೆಯೇ ಬೇರೆ ಇತ್ತು. ಹೇಗಾದರೂ ಮಾಡಿ ಈ ಸಂಬಂಧವನ್ನು ಕಡೆಯ ತನಕ ಕೊಂಡೊಯ್ಯಲು ಆಕೆ ಬಯಸಿದ್ದಳು. ಆಕೆಗೆ ಈ ಹುಡುಗರ ಮನಸ್ಥಿತಿ ಗೊತ್ತಿತ್ತು. ಪ್ರೇಮ್ ನವೀನ್ ಕುಮಾರ್ ತನಗೆ ನೀಡುತ್ತಿರುವ ಈ ಪ್ರೇಮವು ಆತನ ಮದುವೆ ಆಗುವವರಿಗೆ ಮಾತ್ರ ಎಂದು ಆಕೆ ಬಲವಾಗಿ ನಂಬಿದ್ದಳು. ಅನೈತಿಕ ಸಂಬಂಧಗಳು ಅಶಾಶ್ವತ ಎಂಬುದು ಅವಳಿಗೆ ಅರಿವಿತ್ತು. ಈ ಸಂಬಂಧವನ್ನು ನಿರಂತರಗೊಳಿಸಲು ಆಕೆ ಒಂದು ಅದ್ಭುತ ಮಾಸ್ಟರ್ ಪ್ಲಾನ್ ನ್ನೇ ರೂಪಿಸಿ ದಳು.

ಏನದು ಮಾಸ್ಟರ್ ಪ್ಲಾನ್ ?

ಇತ್ತ ಪ್ರೇಮ ನವೀನ್ ಕುಮಾರ ತನಗೆ ಶಾಶ್ವತವಾಗಿ ಸುಖ ನೀಡುತ್ತಾ ಇರಬೇಕು ಮತ್ತು ಆತನಿಗೂ ಮದುವೆಯಾಗಬೇಕು. ಈ ಎರಡನ್ನೂ ಏಕಕಾಲದಲ್ಲಿ ಪೂರೈಸಲು ಆಕೆ ಒಂದು ನಿರ್ಧಾರಕ್ಕೆ ಬಂದಿದ್ದಳು. ಬಂದ ಕೂಡಲೇ ಅದನ್ನು ಕಾರ್ಯಗತಗೊಳಿಸಿದಳು. ಆಗ ಅವಳಿಗೆ ದಾಳವಾಗಿ ಸಿಕ್ಕಿದ್ದು ತನ್ನ ಸ್ವಂತ ಮಗಳು ವಂದನಾ.

ತನ್ನ ಅನೈತಿಕ ಸಂಬಂಧ ಮುಂದುವರಿಸಲು ಅನಿತಾ ತನ್ನ ಹಿರಿಯ ಮಗಳು ವಂದನಾ ಜೊತೆ ಅನಿಲ್ ಕುಮಾರ್ ಮದುವೆ ಮಾಡಿಸಲು ಪ್ಲಾನ್ ಮಾಡಿದಳು. ವಂದನಾ ಆಗಿನ್ನೂ ಹೈದರಾಬಾದ್‍ನಲ್ಲಿರುವ ಕಾಲೇಜೊಂದರಲ್ಲಿ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದ ಎಳಸು ಹುಡುಗಿ. ಈ ಪ್ಲಾನಿಗೆ ಪ್ರೇಮ್ ನವೀನ್ ಕುಮಾರ್ ತಕ್ಷಣ ತುಂಬಾ ಖುಷಿ ಪಟ್ಟಿದ್ದ. ಯಾರಿಗುಂಟು ಯಾರಿಗಿಲ್ಲ ಎಂದು ಸಂಭ್ರಮಿಸಿದ್ದ.

ಇವರ ಯಾವುದೇ ಲೆಕ್ಕಾಚಾರ ತಿಳಿಯದ ವಂದನಾಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ತಾನು ಅನೈತಿಕ ಸಂಬಂಧ ಹೊಂದಿದ್ದವನ ಜೊತೆ ಮದುವೆ ಮಾಡಿಸಿದ್ದಾಳೆ ತಾಯಿ ಅನಿತಾ.

.

ಮಗಳ ವಿವಾಹದ ನಂತರವೂ ಪ್ರೇಮ್ ನವೀನ್ ಕುಮಾರ್ ಜೊತೆ ಅನಿತಾಳ ಅನೈತಿಕ ಸಂಬಂಧ ಯಾವುದೇ ನಿರ್ಭಂದ ಇಲ್ಲದೇ ಮುಂದುವರಿದಿತ್ತು. ಬೆಳಗಿನ ಸಮಯದಲ್ಲಿ ಮಕ್ಕಳು ಕಾಲೇಜಿಗೆ ಹೋಗುತ್ತಿದ್ದರು. ಆ ಪ್ರಶಸ್ತ ಸಮಯವನ್ನು ಅವರು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದರು

ಪತಿಯೊಂದಿಗೆ ತನ್ನ ತಾಯಿ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ವಂದನಾಗೆ ಗೊತ್ತಾಗಿದೆ. ಬಳಿಕ ಮಗಳು ತನ್ನ ತಾಯಿಗೆ ಪತಿಯಿಂದ ದೂರವಿರುವಂತೆ ಎಚ್ಚರಿಕೆ ಕೊಟ್ಟಿದ್ದಾಳೆ. ಇತ್ತ ಪತಿಯನ್ನು ತಾಯಿಯಿಂದ ದೂರ ಕರೆದುಕೊಂಡು ಹೋಗಲು ವಂದನಾ ನಿರ್ಧರಿಸಿದ್ದಳು. ಆದರೆ ತಾಯಿ ಅನಿತಾ ಮಾತ್ರ ಆತನನ್ನು ನನ್ನಿಂದ ದೂರ ಮಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಂದನಾಗೆ ಬೆದರಿಕೆ ಹಾಕಿದ್ದಳು.

ಇದೇ ವಿಚಾರವಾಗಿ ವಂದನಾ ಮತ್ತು ಪತಿ ನವೀನ್ ಕುಮಾರ್ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು.

ಸ್ವಂತ ತಾಯಿಯೇ ತನಗೆ ಈ ರೀತಿ ಬಗೆದರೆ ಆಕೆಯಾದರೂ ಯಾರ ಬಳಿ ಹೇಳಿಕೊಳ್ಳಲಿ ? ಎಷ್ಟು ಅತ್ತಳೋ, ಅದೆಷ್ಟು ರೋಧಿಸಿದಳೋ, ಪರಿಹಾರ ಕಂಡು ಬಂದಿಲ್ಲ. ತಂಗಿಯಲ್ಲಿ ವಿಷಯ ಹಂಚಿಕೊಳ್ಳಲು ಅಂಜಿಕೆಯಾಗಿದೆ. ಅದೊಂದು ದುರ್ಬಲ ಕ್ಷಣದಲ್ಲಿ ಆಕೆ ಮನೆಯ ಫ್ಯಾನಿಗೆ ಜಗ್ಗಿಕೊಂಡು ನೇತು ಬಿದ್ದಿದ್ದಾಳೆ.

ಸದ್ಯಕ್ಕೆ ತಂಗಿ ಸಂಜನಾ ನೀಡಿದ ದೂರಿನಂತೆ, ತಾಯಿ ಮತ್ತು ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಮ್ಮನ ಕಾಮುಕ ಮನಸ್ಸತ್ವಕ್ಕೆ ಮತ್ತು ದುರಾಸೆಗೆ ಮಗಳು ಬಲಿಯಾಗಿದ್ದಾಳೆ. ಅನೈತಿಕ ಸಂಬಂಧದ ಕೊನೆಯ ಪರಿಣಾಮ ಕಹಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

0 thoughts on “ಅನೈತಿಕ ಸಂಬಂಧ ಮುಂದುವರಿಸಲು ತನ್ನ ಪ್ರಿಯಕರನ ಜೊತೆ ಮಗಳ ವಿವಾಹ ಮಾಡಿದ ತಾಯಿ | ಅನೈತಿಕ ಸಂಬಂಧದ ಆಯುಷ್ಯ ಎಷ್ಟು ?!”

  1. Pingback: ಇಚಿಲಂಪಾಡಿ | ಸ್ನಾನಕ್ಕೆಂದು ತೆರಳಿದ್ದ ಇಬ್ಬರು ನೀರು ಪಾಲು - ಹೊಸ ಕನ್ನಡ

  2. Pingback: ಕಾಣಿಯೂರು ಹಾ.ಉ.ಸ.ಸಂಘದ ವಿಶೇಷ ಸಭೆ |ಜನತಾ ಕರ್ಫ್ಯೂ ಹಿನ್ನಲೆ | ಮಾ 22ರಂದು ಹಾಲು ಸಂಗ್ರಹಣೆ ಸ್ಥಗಿತ - ಹೊಸ ಕನ್ನಡ

  3. Pingback: ದಕ್ಷಿಣ ಕನ್ನಡದಲ್ಲಿ ಮರಳುಗಾರಿಕೆ ಸರಳೀಕರಣಗೊಳಿಸಲು ಶಾಸಕ ಸಂಜೀವ ಮಠ೦ದೂರು ಸದನದಲ್ಲಿ ಆಗ್ರಹ

  4. Pingback: ನಾಳೆಯಿಂದ ಮಾ.31 ರ ವರೆಗೆ ಬಾರ್ ಆಂಡ್ ರೆಸ್ಟೋರೆಂಟ್ ಬಂದ್ | ಮನೇಲೇ ಪೆಗ್ ಹಾಕೋ ಯೋಚ್ನೆ ಮಾಡೋರು ನಿಮ್ಮ ಮನೇಲಿ ಇರುವ

  5. Pingback: ಕರ್ನಾಟಕ- ಕಾಸರಗೋಡು ವಾಹನ ಸಂಚಾರ ಬಂದ್ । ಮಾ. 21 ರಿಂದ ಮಾ. 31 ವರೆಗೆ - ಹೊಸ ಕನ್ನಡ

  6. Pingback: ಅನಗತ್ಯ ತಿರುಗಾಟ | ಬಿಸಿ ಮುಟ್ಟಿಸಿದ ಬೆಳ್ಳಾರೆ ಪೊಲೀಸರು - ಹೊಸ ಕನ್ನಡ

  7. Pingback: ವೆನ್ಲಾಕ್ ಆಸ್ಪತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ | ಪರಿಶೀಲನೆ - ಹೊಸ ಕನ್ನಡ

  8. Pingback: ಕೊರೋನಾ ಕೊಡುಗೆ ನೀಡಿದ ಚೀನಾದಿಂದ ಜಗತ್ತಿಗೆ ಮತ್ತೊಂದು ರೋಗ ' ಹಂಟಾ' ! - ಹೊಸ ಕನ್ನಡ

  9. Pingback: ಯಾವ ದೇಶಗಳಲ್ಲಿ ಎಷ್ಟು ಕೊರೊನಾ ಎಷ್ಟು ಅಗಾಧವಾಗಿ ಎಂಬ ಮಾಹಿತಿ ಒಳಗಿದೆ - ಹೊಸ ಕನ್ನಡ

  10. Pingback: ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವು - ಹೊಸ ಕನ್ನಡ

error: Content is protected !!
Scroll to Top
%d bloggers like this: