ಹೋಂ ಕ್ವಾರಂಟೈನ್ ನ 100% ನಿಗಾಕ್ಕೆ ಹೊಸ ಆಪ್ | ಇದು ದೇಶದಲ್ಲೇ ಮೊದಲು | ಸ್ಪೀಡ್ ಅಂದರೆ ಹರೀಶ್ ಪೂಂಜಾ !

ಯುದ್ದ ಕಾಲದಲ್ಲಿ- ನಮಗೆ ಬಿಡುವಿಲ್ಲ, ಹೊಸದನ್ನು ಎತ್ತಿಕೊಂಡು ಬರಲು ಆಗುವುದಿಲ್ಲ, ಮುಖ್ಯವಾಗಿ ಅದಕ್ಕೆ ಸಮಯವಿರುವುದಿಲ್ಲ, ಅದಕ್ಕೆ ಜಾಸ್ತಿ ಖರ್ಚಾಗುತ್ತದೆ ಇಂತಹಾ ಸಾಮಾನ್ಯ ಆಲೋಚನೆಗಳ ಮಧ್ಯೆಯೇ, ತನ್ನ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಟೆಕ್ನಾಲಜಿಯನ್ನ ಬಳಸಿಕೊಂಡು ದೇಶದ ಇವತ್ತಿನ ಬಹು ದೊಡ್ಡ ಸಮಸ್ಯೆಯಾದ ಹೋಂ ಕ್ವಾರಂಟೈನ್ ಮ್ಯಾನೇಜ್ಮಂಟ್ ಮಾಡಲು ಹೊಸ ಆಪ್ ತಂದಿದ್ದಾರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು. ಇವತ್ತು ನಾವು ಭಾರತದಲ್ಲಿ ಸೋಲುತ್ತಿರುವುದು ಕೊರೋನಾವನ್ನು ಟ್ರೀಟ್ ಮಾಡುವುದರಲ್ಲಿ ಅಲ್ಲ. ಕೊರೋನಾ ಸೋಂಕು ತಗಲಿರಬಹುದಾದ, ಸೋಂಕಿತರೊಂದಿಗೆ ವ್ಯವಹರಿಸಿದ, ಸೋಂಕಿತ ಅಥವಾ ಬೇರೆ ರಾಷ್ಟ್ರಗಳಿಂದ ವಾಪಸ್ಸಾದ, ಸೋಂಕು ತಗಲುವ ಎಲ್ಲ ಸಾಧ್ಯತೆ ಇರುವ ವ್ಯಕ್ತಿಗಳನ್ನು ಹಿಡಿದಿಡುವುದರಲ್ಲಿ ನಾವು ಸೋಲುತ್ತಿರುವುದು.

ಅದನ್ನು ಮನಗಂಡ ಹರೀಶ್ ಪೂಂಜಾ ಅವರು ಕ್ಷಿಪ್ರವಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಕೊರೋನಾ ಸೋಂಕಿತರಿರಬಹುದಾದ ಜನರನ್ನು ನೂರಕ್ಕೆ ನೂರು ಮೊನಿಟರ್ ಮಾಡಬಲ್ಲ ಆಪ್ ಅನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಯಾರೂ ಯೋಚಿಸದ್ದನ್ನು, ಊಹಿಸಲು ಅಸಾಧ್ಯವಾದ ಸ್ಪೀಡಿನಲ್ಲಿ ಎತ್ತಿಕೊಂಡು ಬರುವವರು ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾ ಅವರು. ಅದನ್ನು ಎತ್ತಿಕೊಂಡು ಬರುವುದಷ್ಟೇ ಅಲ್ಲ, ಹಾಗೆ ಎತ್ತಿಕೊಂಡು ಬಂದ ಟೆಕ್ನೋಲೊಜಿಯನ್ನು ಗಾಣದೆತ್ತಿನಂತೆ ದುಡಿಸುವವರು ! ಅದನ್ನು ನಾವು ಈ ಹಿಂದೆ ಎಷ್ಟೋ ಬಾರಿ ನೋಡಿದ್ದೇವೆ. ಈ ಬಾರಿ ಇಡೀ ದೇಶ ನಮ್ಮತ್ತ ನೋಡುವಂತೆ ಆಗಿದೆ. ಇದು ದೇಶದಲ್ಲೇ ಮೊದಲು. ಬೆಳ್ತಂಗಡಿ ತಾಲೂಕು ಮತ್ತು ದಕ್ಷಿಣ ಕನ್ನಡ ಆ ಹೆಮ್ಮೆಗೆ ಪಾತ್ರವಾಗುತ್ತಿದೆ. ಅದಕ್ಕೆ ಅವರಿಗೆ ಅಭಿನಂದನೆ ಸಲ್ಲದೆ ಇದ್ದರೆ ಹೇಗೆ ?

ಕೊರೋನಾ ಸೋಂಕು ಹೊಂದಿರುವರ ಜೊತೆ ಸಂಪರ್ಕ ಹೊಂದಿ, ವೈರಸ್ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವ ಶಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಹೀಗೆ ಪರಿವೀಕ್ಷಣೆಯಲ್ಲಿರುವವರ ಮಾಹಿತಿಗೆ ಜಿಪಿಎಸ್ ಆಧಾರಿತ ಆಪ್ ಬಳಕೆಗೆ ಬೆಳ್ತಂಗಡಿ ಈಗ ಸಜ್ಜು. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕೇಂದ್ರ ರಾಜ್ಯ ಸರಕಾರಗಳು ಆತಂಕಕ್ಕೆ ಒಳಗಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಸಾವಿರಾರು ಮಂದಿ ಹೋಮ್ ಕ್ವಾರಂಟೈನ್ ಅಂದರೆ ಮನೆಯಲ್ಲೇ ನಿಗಾ ವ್ಯವಸ್ಥೆ ಮೂಲಕ ಇದ್ದಾರೆ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಹೀಗೆ ಹೋಮ್ ಕ್ವಾರಂಟೈನ್ ಆಗಿರುವ ಕೆಲವು ಶಂಕಿತರು ಸ್ಟ್ಯಾಂಪ್ ಹಾಕಿದ್ದೂ ಓಡಾಟ ನಡೆಸುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ.

ಇವರನ್ನು ಮನೆಯಲ್ಲೇ ನಿಗಾ ಇರಿಸಲು ಕುಟುಂಬ, ಪೊಲೀಸರು, ಆಶಾ ಕಾರ್ಯಕರ್ತರು, ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಹಿನ್ನೆಲೆಯಲ್ಲಿ ಐಸರ್ಚ್ ಎಂಬ ಸಂಸ್ಥೆಯ ನೆರವಿನಿಂದ ಹೊಸ ಆಪ್ ಬಿಡುಗಡೆ ಮಾಡಲಾಗಿದೆ. COVID19 BLT DATABASE ಅನ್ನುವ ಈ ಆಪ್ ಬೆಳ್ತಂಗಡಿ ತಾಲೂಕು ಆಡಳಿತ, ತಹಶೀಲ್ದಾರರು, ಪೊಲೀಸ್ ಇಲಾಖೆ, ಆರೋಗ್ಯ, ಕಂದಾಯ, ನಾಗರೀಕ ಸರಬರಾಜು ಇಲಾಖೆ, ಶ್ರಮಿಕ ಬೆಳ್ತಂಗಡಿ ಶಾಸಕರ ಕಚೇರಿ ಹಾಗೂ ಐಸರ್ಚ್ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಜಿಪಿಎಸ್ ಆಧಾರಿತ ಆಪ್ ಬಳಸಿ ಸೋಂಕಿತರ ಮೇಲೆ ನಿಗಾ ಇಡುವ ಕಾರ್ಯಕ್ಕೆ ಮುಂದಾಗಿದೆ. ಇನ್ನು ಅವರ ಬದಲು ಟೆಕ್ನೋಲಾಜಿ ಹೋಂ ಕ್ವಾರಂಟೈನ್ ವ್ಯಕ್ತಿಗಳ ಬೆನ್ನು ಬೀಳಲಿದೆ. ಅವರನ್ನು ನೆರಳಿನಂತೆ ಬೆನ್ನು ಹತ್ತಲಿದೆ. ಈ ಪ್ರಯತ್ನ ದೇಶದಲ್ಲೇ ಮೊದಲನೆಯದಾಗಿದೆ.

ಈಗಾಗಲೇ ಇದರ ಪೂರ್ವ ಸಿದ್ಧತೆ ಮುಗಿದಿದ್ದು, ಈಗಷ್ಟೇ ಇಲಾಖೆಗಳ ಉಪಯೋಗಕ್ಕೆ ನೀಡಲಾಗುತ್ತದೆ. ತಾಲೂಕಿನ ತಣ್ಣೀರುಪಂಥ ಗ್ರಾಮದಲ್ಲಿ ಒಂದು ಕೋವಿಡ್ 19 ಪ್ರಕರಣ ಬೆಳಕಿಗೆ ಬಂದ ಬಳಿಕ ಈ ತಂತ್ರಜ್ಞಾನ ಬಳಸಲು ಯೋಜನೆ ಮಾಡಲಾಯಿತು.

ಹೋಮ್ ಕ್ವಾರಂಟೈನ್ ಆಗಿರುವವರ ಮೇಲೆ ಅಧಿಕಾರಿಗಳಿಗೆ ನಿಗಾ ಇರಿಸಲು ಈ ವ್ಯವಸ್ಥೆ ನೆರವಾಗಲಿದೆ. ಜಿಪಿಎಸ್ ಆಧಾರಿತ ಆಪ್ ಮೂಲಕ ವಾರ್ ರೂಮಲ್ಲಿ ಕೂತು ಹೋಮ್ ಕ್ವಾರಂಟೈನ್ ಆಗಿರುವವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂದು ಅವರ ಭಾವಚಿತ್ರ ಸಹಿತ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ.

ಈ ಅಪ್ ಕೋವಿಡ್ 19 (ಕೊರೊನಾ ವೈರಸ್) ಶಂಕಿತರನ್ನು ಟ್ರಾಕ್ ಮಾಡುವ ಮುಖಾಂತರ ಸೋಂಕು ಇತರರಿಗೆ ಹರಡುವುದನ್ನು ತಡೆಗಟ್ಟಲು ಸಹಕರಿಸಲಿದೆ.

ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ

2 Comments
  1. Vignesh Kotian says

    Good thought,and great idea for safe for us ?????

  2. hosakannada says

    Thanks for reading hosakannada.

Leave A Reply

Your email address will not be published.