Day: February 16, 2020

ಬಿಳಿನೆಲೆ ಸಿ.ಎ.ಬ್ಯಾಂಕ್ ಚುನಾವಣೆ ಸಹಕಾರ ಭಾರತಿ ಕ್ಲೀನ್ ಸ್ವೀಪ್

 ಕಡಬ : ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಎಲ್ಲ 12 ಅಭ್ಯರ್ಥಿಗಳ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಫಲಿತಾಂಶ ವಿವರ : ಸಾಲಗಾರ ಸಾಮಾನ್ಯ* ಅನಿತಾ ವಿಜಯಕುಮಾರ್ ಸಣ್ಣಾರ(560), ಚೆನ್ನಕೇಶವ ಕೈಂತಿಲ(579), ದಾಮೋಧರ ಗುಂಡ್ಯ(470), ವೆಂಕಟ್ರಮಣ(473), ಹರಿಪ್ರಸಾದ್ ಕಳಿಗೆ(529), *ಸಾಲಗಾರ ಮಹಿಳಾ ಮೀಸಲು* ಉಮಾವತಿ ಕಳಿಗೆ ಸೂಡ್ಲು(598), ಶಶಿಲೇಖಾ ಬಾಲಕೃಷ್ಣ ಗೌಡ(529), *ಸಾಲಗಾರ ಹಿಂದುಳಿದ ವರ್ಗ ಎ* ಉದಯಕುಮಾರ್ …

ಬಿಳಿನೆಲೆ ಸಿ.ಎ.ಬ್ಯಾಂಕ್ ಚುನಾವಣೆ ಸಹಕಾರ ಭಾರತಿ ಕ್ಲೀನ್ ಸ್ವೀಪ್ Read More »

ನಿನ್ನೆಯಿಂದ ಇದು ನಾಲ್ಕನೆಯ ದುರಂತ ! : ಬಿಸಿ ರೋಡ್ ಬಳಿ ಎರಡು ಬಸ್ಸುಗಳ ಡಿಕ್ಕಿ, 20 ಜನರಿಗೆ ಗಾಯ, ಮೂವರು ಗಂಭೀರ

ಬಂಟ್ವಾಳ: ಬಿಸಿರೋಡ್ ನಿಂದ ಪೊಳಲಿಗೆ ಹೋಗುವ ಕಲ್ಪನೆ ತಿರುವಿನಲ್ಲಿ 2 ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಗೊಂಡ ಮೂವರ ಸ್ಥಿತಿ ಗಂಭೀರವಾಗಿದೆ. ದಿನಂಪ್ರತಿ ಹೋಗುವ ರೂಟ್ ಬಸ್ಸು ಮತ್ತು ಮದುವೆ ಮನೆಯ ದಿಬ್ಬಣದ ಬಸ್ಸು ಎರಡೂ ಬಿಸಿರೋಡ್ ನಿಂಡ ಪೊಳಲಿ ಕಡೆಗೆ ಚಲಿಸುತ್ತಿದ್ದವು. ಒಂದು ತಿರುವಿನಲ್ಲಿ ಹಿಂದಿನಿಂದಲೂ ಬರುತ್ತಿದ್ದ ಮದುವೆ ಬಸ್ಸು ಮುಂದಿನ ಬಸ್ಸಿಗೆ ಡಿಕ್ಕಿ ಹೊಡೇದು ಮೋರಿಗೆ ಬಿದ್ದಿದೆ. ಹಿಂದಿನಿಂದ ಬಂದು ಡಿಕ್ಕಿಯಾದ ರಭಸಕ್ಕೆ ಮುಂದಿದ್ದ ರೂಟ್ ಬಸ್ಸು …

ನಿನ್ನೆಯಿಂದ ಇದು ನಾಲ್ಕನೆಯ ದುರಂತ ! : ಬಿಸಿ ರೋಡ್ ಬಳಿ ಎರಡು ಬಸ್ಸುಗಳ ಡಿಕ್ಕಿ, 20 ಜನರಿಗೆ ಗಾಯ, ಮೂವರು ಗಂಭೀರ Read More »

ಇಂದಿನಿಂದ ಪುರಾಣ ಪ್ರಸಿದ್ಧ ಕಾಣಿಯೂರು ಜಾತ್ರೆ

ಕಾಣಿಯೂರು : ಇಲ್ಲಿನ ಉಡುಪಿ ಶ್ರೀ ಕಾಣಿಯೂರು ರಾಮತೀರ್ಥ ಮಠದ ಜಾತ್ರೆ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಫೆ. 21ರಿಂದ 25ರ ವರೆಗೆ ನಡೆಯಲಿದೆ. ಫೆ. 21ರ ರಾತ್ರಿ ಭಂಡಾರ ತೆಗೆದು ಧ್ವಜಾರೋಹಣ, 22ರಂದು ಬೆಳಗ್ಗೆ ಅಮ್ಮನವರ ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ ,ಗಣಪತಿ ಹೋಮ,ಮಹಾಪೂಜೆ, ಉಳ್ಳಾಕುಲು ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ,ಗಣಪತಿ ಹೋಮ, ಮಹಾ ಪೂಜೆ, ಗಣೇಶ್ ಮ್ಯೂಸಿಕಲ್ಸ್ ಸುಳ್ಯ ಇವರಿಂದ ಭಕ್ತಿ ಗಾನ ಸುಧೆ,ಮಾಯ ಲೋಕ ಕಲ್ಲಡ್ಕ ಅವರಿಂದ ಮಿಮಿಕ್ರಿ ನಡೆಯಲಿದೆ. ಫೆ. 23ರಂದು ಬೆಳಗ್ಗೆ …

ಇಂದಿನಿಂದ ಪುರಾಣ ಪ್ರಸಿದ್ಧ ಕಾಣಿಯೂರು ಜಾತ್ರೆ Read More »

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ,ಬೆಳ್ಳಾರೆ ಬೆಡಿ

ಇಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ,ಬೆಳ್ಳಾರೆ ಬೆಡಿ ಸುಳ್ಯ : ಇತಿಹಾಸ ಪ್ರಸಿದ್ಧ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಬ್ರಹ್ಮ ಶ್ರೀ ವೇ.ಮೂ.ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13 ರಂದು ಪ್ರಾರಂಭಗೊಂಡಿದ್ದು ಫೆ.17ರ ವರೆಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಫೆ.16ರಂದು ಬೆಳಿಗ್ಗೆ ಗಣಪತಿ ಹವನ,ಉಷಾ ಪೂಜೆ, ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶಿವೇಲಿ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭೂತ ಬಲಿ,ಸೇವೆ ಸುತ್ತು,ಪೇಟೆ ಸವಾರಿ,(ಪಳ್ಳಿ ಬೇಟೆ) ಸಿಡಿಮದ್ದು ಪ್ರದರ್ಶನ ನಡೆಯಿತು.ರಾತ್ರಿ …

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ,ಬೆಳ್ಳಾರೆ ಬೆಡಿ Read More »

ಮಾ.31ರೊಳಗೆ ಆಧಾರ್‌‌ಗೆ PAN ಲಿಂಕ್‌ ಮಾಡದಿದ್ದರೆ PAN ನಿಷ್ಕ್ರಿಯ

ನವದೆಹಲಿ : ಪ್ಯಾನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್ ಅನ್ನು ಮಾ.31ರೊಳಗೆ ಲಿಂಕ್‌ ಮಾಡದಿದ್ದರೆ ಅಂಥ PANಗಳನ್ನು ನಿಷ್ಕ್ರಿಯಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ. ಆಧಾರ್‌ ಲಿಂಕ್‌ ಮಾಡಲು ಎಂಟು ಬಾರಿ ಗಡುವು ನೀಡಿದ್ದ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು, ಮಾ.31ರೊಳಗೆ ಆಧಾರ್‌ ಲಿಂಕ್‌ ಮಾಡದಿದ್ದರೆ ಶಾಶ್ವತ ಖಾತೆ ಸಂಖ್ಯೆ(ಪ್ಯಾನ್‌)ಯನ್ನು ನಿಷ್ಕ್ರಿಯಗೊಳಿಸುವ ಎಚ್ಚರಿಕೆ ನೀಡಿದೆ. ಮಾ.31ರ ನಂತರ PAN ಮತ್ತು ಆಧಾರ್‌ ಅನ್ನು ಲಿಂಕ್‌ ಮಾಡಿದರೆ, ನಿಮ್ಮ PAN- ಆಧಾರ್‌ ಸಂಖ್ಯೆ ಲಿಂಕ್‌ ಮಾಡಿದ ದಿನಾಂಕದಿಂದ …

ಮಾ.31ರೊಳಗೆ ಆಧಾರ್‌‌ಗೆ PAN ಲಿಂಕ್‌ ಮಾಡದಿದ್ದರೆ PAN ನಿಷ್ಕ್ರಿಯ Read More »

ಕೊಳವೆ ಬಾವಿ ಕೊರೆಯುತ್ತಿದ್ದ ವೇಳೆ ಭೂಕುಸಿತ : 15 ಅಡಿ ಆಳದಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

ಬೋರ್‌ವೆಲ್ ಕೊರೆಯುತ್ತಿದ್ದ ವೇಳೆ ಭೂಕುಸಿತ: 15 ಅಡಿ ಆಳದಲ್ಲಿ ಸಿಲುಕಿರುವ ವ್ಯಕ್ತಿ ಉಡುಪಿ : ಕೊಳೆವೆ ಬಾವಿ ಕೊರೆಯುತ್ತಿದ್ದ ವೇಳೆ ಉಂಟಾದ ಭೂಕುಸಿತದಲ್ಲಿ ಸಿಲುಕಿದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಹಾಯದಿಂದ ರಕ್ಷಿಸಲಾಗಿದೆ ಈ ಘಟನೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ಫೆ.16ರಂದು ಮಧ್ಯಾಹ್ನ ನಡೆದಿದೆ. ಮರವಂತೆಯ ನಿವಾಸಿ ರೋಹಿತ್ ಖಾರ್ವಿ ಭೂ ಕುಸಿತದಲ್ಲಿ ಸಿಲುಕಿದ ವ್ಯಕ್ತಿಯಾಗಿದ್ದಾರೆ. ಘಟನೆಯಲ್ಲಿ ಅವರ ಕಂಠಮಟ್ಟ ಮಣ್ಣು ಮುಚ್ಚಿಕೊಂಡಿತು. ಇನ್ನೊಂದು ಅಡಿ ಮಣ್ಣು ಬಿದ್ದಿದ್ದರೆ ತಲೆ ಮುಚ್ಚಿ ಹೋಗುತ್ತಿತ್ತು. ರಕ್ಷಣಾ ಕಾರ್ಯಾಚರಣೆಸಿ ಅವರನ್ನು ರಕ್ಷಿಸಲಾಗಿದೆ. …

ಕೊಳವೆ ಬಾವಿ ಕೊರೆಯುತ್ತಿದ್ದ ವೇಳೆ ಭೂಕುಸಿತ : 15 ಅಡಿ ಆಳದಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ Read More »

ಕೋಡಿಂಬಾಳ ಮಜ್ಜಾರು ದೈವಸ್ಥಾನದಲ್ಲಿ ರಾಜನ್ ದೈವದ ನೇಮೋತ್ಸವ

ಕೋಡಿಂಬಾಳ ಮಜ್ಜಾರು ದೈವಸ್ಥಾನದಲ್ಲಿ ರಾಜನ್ ದೈವದ ನೇಮೋತ್ಸವ ನಡೆಯಿತು. ಕಡಬ: ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಮಜ್ಜಾರು ಶ್ರೀ ಉಳ್ಳಾಕ್ಲು ರಾಜನ್ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಅಂಗವಾಗಿ ಫೆ.16ರಂದು ಬೆಳಿಗ್ಗೆ ರಾಜನ್ ದೈವದ ನೇಮೋತ್ಸವ, ದೈವದಲ್ಲಿ ಪ್ರಾರ್ಥನೆ, ಹರಕೆ ಸಲ್ಲಿಕೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಕೆ.ಪ್ರಸಾದ ಕೆದಿಲಾಯ, ಮೊಕ್ತೇಸರ ಕೆ.ಕೃಷ್ಣಪ್ರಸಾದ್ ಭಟ್ ಎಡಪತ್ಯ ಸೇರಿದಂತೆ ಭಕ್ತಾಧಿಗಳು ಹಾಜರಿದ್ದರು.

ದೇಶಕ್ಕಾಗಿ ಮಡಿದ ಸೈನಿಕ ಗುರುವಿನ ಪತ್ನಿಯ ದೇಶ ದ್ರೋಹದ ವರ್ತನೆ | ಪತಿಯ ದುಡ್ಡು ಬೇಕು,ಪತಿಯ ನೆನಪು ಬೇಡ !!

ಮಂಡ್ಯದ ಮದ್ದೂರಿನಿಂದ ಮನಸ್ಸು ನೋಯುವಂತಹ ಸುದ್ದಿ ಬಂದಿದೆ. ಮೊನ್ನೆ ಫೆಬ್ರವರಿ 14 ರಂದು ಆ ದಿನ ಪುಲ್ವಾಮಾ ದಾಳಿಯಲ್ಲಿ ಹತನಾದ ಗುರುವಿನ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಪೂಜೆ ಮತ್ತು ಸ್ಮರಣ ಕಾರ್ಯಕ್ರಮವನ್ನು ಆತನ ಗೆಳೆಯರು ಮತ್ತು ಕುಟುಂಬಸ್ಥರು ಇಟ್ಟುಕೊಂಡಿದ್ದರು. ಆದರೆ ದುರದಷ್ಟವಶಾತ್ ಹುತಾತ್ಮ ಗುರುವಿನ ಪತ್ನಿ ಅಲ್ಲಿಗೆ ಬರಲಿಲ್ಲ ! ಅವತ್ತು ಪುಲ್ವಾಮ ದಾಳಿಯಲ್ಲಿ ನಲ್ವತ್ತು ಸೈನಿಕರಲ್ಲಿ ಒಬ್ಬನಾಗಿ ತೀರಿಕೊಂಡಾಗ ಇಡೀ ರಾಜ್ಯ ಆತನ ಸಾವಿಗೆ ಮರುಗಿತ್ತು. ಅದಕ್ಕಿಂತ ಹೆಚ್ಚೇ ಅನ್ನುವಂತೆ ಇಡೀ ರಾಜ್ಯ ಸ್ಪಂದಿಸಿ ಒಟ್ಟು …

ದೇಶಕ್ಕಾಗಿ ಮಡಿದ ಸೈನಿಕ ಗುರುವಿನ ಪತ್ನಿಯ ದೇಶ ದ್ರೋಹದ ವರ್ತನೆ | ಪತಿಯ ದುಡ್ಡು ಬೇಕು,ಪತಿಯ ನೆನಪು ಬೇಡ !! Read More »

ಮಾ.15ಕ್ಕೆ ವಿಟ್ಲದಲ್ಲಿ ಹಿಂದೂ ಸಮಾವೇಶ: ಕಾರ್ಯಾಲಯ ಉದ್ಘಾಟನೆ

ಮಾ.15ಕ್ಕೆ ವಿಟ್ಲದಲ್ಲಿ ಹಿಂದೂ ಸಮಾವೇಶ: ಕಾರ್ಯಾಲಯ ಉದ್ಘಾಟನೆ ಬಂಟ್ವಾಳ : ವಿಟ್ಲದಲ್ಲಿ ಮಾ. 15ಕ್ಕೆ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಾಲದ ಉದ್ಘಾಟನೆ ಸತೀಶ್ ಆಳ್ವ, ಹರೀಶ್ ನಾಯಕ್, ಡಾ. ಜ್ಯೋತಿ ಭಟ್, ಜಗನ್ನಾಥ್ ಕಾಸರಗೋಡು, ಗೋವರ್ಧನ್, ರಾಮದಾಸ್ ಶೆಣೈ ಅವರ ಸಮ್ಮುಖದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಬಿ ಜೆ ಪಿ ಮುಖಂಡರಾದ ಹರಿಪ್ರಸಾದ್ ಯಾದವ್, ಅರುಣ್ ವಿಟ್ಲ, ಬಜರಂಗದಳ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ, ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ಚರಣ್ ಕಾಪುಮಜಲು, …

ಮಾ.15ಕ್ಕೆ ವಿಟ್ಲದಲ್ಲಿ ಹಿಂದೂ ಸಮಾವೇಶ: ಕಾರ್ಯಾಲಯ ಉದ್ಘಾಟನೆ Read More »

ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಬ್ರಹ್ಮಕಲಶ ಪೂರ್ವಭಾವಿ ಸಭೆ

ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಬ್ರಹ್ಮಕಲಶ ಪೂರ್ವಭಾವಿ ಸಭೆ ಬಂಟ್ವಾಳ: ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಮೇ ತಿಂಗಳಲ್ಲಿ ಐದು ದಿನ ನಡೆಯುವ ಪುನರ್ ಪ್ರತಿಷ್ಟ. ಅಷ್ಟಭಂಧ ಬ್ರಹ್ಮಕಲಶದ ಬಗ್ಗೆ ಚರ್ಚೆ ನಡೆಸಲಾಯಿತು. ಸುಮಾರು ನಾಲ್ಕು ನೂರು ಮನೆಗಳು ಇರುವ ಈ ಊರಿನಲ್ಲಿ 50 ಲಕ್ಷ ಸಂಗ್ರಹಿಸಿ ಬ್ರಹ್ಮಕಲಶ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಸಭೆಯಲ್ಲಿ ಅಶೋಕ್ ಬರಿಮಾರ್,ರಾಮಚಂದ್ರ ಶೆಟ್ಟಿ ದಂಡೆ,ನಳಿನಿ ಶೆಟ್ಟಿ ದಂಡೆ,ಧರ್ಣಪ್ಪ …

ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಬ್ರಹ್ಮಕಲಶ ಪೂರ್ವಭಾವಿ ಸಭೆ Read More »

error: Content is protected !!
Scroll to Top