ಇಂದಿನಿಂದ ಪುರಾಣ ಪ್ರಸಿದ್ಧ ಕಾಣಿಯೂರು ಜಾತ್ರೆ

ಕಾಣಿಯೂರು : ಇಲ್ಲಿನ ಉಡುಪಿ ಶ್ರೀ ಕಾಣಿಯೂರು ರಾಮತೀರ್ಥ ಮಠದ ಜಾತ್ರೆ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಫೆ. 21ರಿಂದ 25ರ ವರೆಗೆ ನಡೆಯಲಿದೆ.

ಫೆ. 21ರ ರಾತ್ರಿ ಭಂಡಾರ ತೆಗೆದು ಧ್ವಜಾರೋಹಣ, 22ರಂದು ಬೆಳಗ್ಗೆ ಅಮ್ಮನವರ ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ ,ಗಣಪತಿ ಹೋಮ,ಮಹಾಪೂಜೆ, ಉಳ್ಳಾಕುಲು ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ,ಗಣಪತಿ ಹೋಮ, ಮಹಾ ಪೂಜೆ, ಗಣೇಶ್ ಮ್ಯೂಸಿಕಲ್ಸ್ ಸುಳ್ಯ ಇವರಿಂದ ಭಕ್ತಿ ಗಾನ ಸುಧೆ,ಮಾಯ ಲೋಕ ಕಲ್ಲಡ್ಕ ಅವರಿಂದ ಮಿಮಿಕ್ರಿ ನಡೆಯಲಿದೆ.

ನಿತಿನ್ ಕಾನಾವು ಅವರ ಕಲಾತ್ಮಕತೆಯಲ್ಲಿ ಜಾತ್ರೆಯ ಸ್ಟಿಕರ್

ಫೆ. 23ರಂದು ಬೆಳಗ್ಗೆ ಮಲ್ಲಾರ ನೇಮ, ದೈಯರ ನೇಮ, ರಾತ್ರಿ ಬಯ್ಯದ ಬಲಿ, ಫೆ. 24ರಂದು ಏಲ್ಯಾರ ನೇಮ, ಮಾಣಿ ದೈವದ ನೇಮ, ನಾಯರ್‌ ದೈವದ ನೇಮ, ಧ್ವಜಾವರೋಹಣ, ಫೆ. 25ರಂದು ಬೆಳಗ್ಗೆ ಕಾಣಿಯೂರು ಮಠದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಅಪರಾಹ್ನ ಅಮ್ಮನವರ ಪೂಜೆ, ಶಿರಾಡಿ ದೈವದ ನೇಮ ನಡೆಯಲಿದೆ ಎಂದು ಶ್ರೀ ಮಠದ ವ್ಯವಸ್ಥಾಪಕ ನಿರಂಜನ್ ಆಚಾರ್ಯ ತಿಳಿಸಿದ್ದಾರೆ.

Leave A Reply