ನಿನ್ನೆಯಿಂದ ಇದು ನಾಲ್ಕನೆಯ ದುರಂತ ! : ಬಿಸಿ ರೋಡ್ ಬಳಿ ಎರಡು ಬಸ್ಸುಗಳ ಡಿಕ್ಕಿ, 20 ಜನರಿಗೆ ಗಾಯ, ಮೂವರು ಗಂಭೀರ

ಬಂಟ್ವಾಳ: ಬಿಸಿರೋಡ್ ನಿಂದ ಪೊಳಲಿಗೆ ಹೋಗುವ ಕಲ್ಪನೆ ತಿರುವಿನಲ್ಲಿ 2 ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಗಾಯಗೊಂಡ ಮೂವರ ಸ್ಥಿತಿ ಗಂಭೀರವಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ದಿನಂಪ್ರತಿ ಹೋಗುವ ರೂಟ್ ಬಸ್ಸು ಮತ್ತು ಮದುವೆ ಮನೆಯ ದಿಬ್ಬಣದ ಬಸ್ಸು ಎರಡೂ ಬಿಸಿರೋಡ್ ನಿಂಡ ಪೊಳಲಿ ಕಡೆಗೆ ಚಲಿಸುತ್ತಿದ್ದವು. ಒಂದು ತಿರುವಿನಲ್ಲಿ ಹಿಂದಿನಿಂದಲೂ ಬರುತ್ತಿದ್ದ ಮದುವೆ ಬಸ್ಸು ಮುಂದಿನ ಬಸ್ಸಿಗೆ ಡಿಕ್ಕಿ ಹೊಡೇದು ಮೋರಿಗೆ ಬಿದ್ದಿದೆ. ಹಿಂದಿನಿಂದ ಬಂದು ಡಿಕ್ಕಿಯಾದ ರಭಸಕ್ಕೆ ಮುಂದಿದ್ದ ರೂಟ್ ಬಸ್ಸು ಪಲ್ಟಿಯಾಗಿದೆ.

ಅಪಘಾತಕ್ಕೆ ಎರಡು ಬಸ್ಸುಗಳು ಪರಸ್ಪರ ಸ್ಪರ್ಧೆಗೆ ಬಿದ್ದು ಚಲಿಸಿದ್ದು ಓವರ್ ಟೇಕ್ ಗೆ ಯತ್ನಿಸಿದ್ದು ಎಂದು ವಿಶ್ಲೇಶಿಸಿಸಲಾಗುತ್ತಿದೆ.

ಗಾಯಗೊಂಡವರನ್ನು ತುಂಬೆ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ನಿನ್ನೆಯಿಂದ ಇದು ದಕ್ಷಿಣ ಕನ್ನಡದಲ್ಲಿ ನಡೆದ ನಾಲ್ಕನೆಯ ಬಸ್ಸು ಅಪಘಾತವಾಗಿದೆ.

error: Content is protected !!
Scroll to Top
%d bloggers like this: