ಬೋರ್‌ವೆಲ್ ಕೊರೆಯುತ್ತಿದ್ದ ವೇಳೆ ಭೂಕುಸಿತ: 15 ಅಡಿ ಆಳದಲ್ಲಿ ಸಿಲುಕಿರುವ ವ್ಯಕ್ತಿ
ಉಡುಪಿ : ಕೊಳೆವೆ ಬಾವಿ ಕೊರೆಯುತ್ತಿದ್ದ ವೇಳೆ ಉಂಟಾದ ಭೂಕುಸಿತದಲ್ಲಿ ಸಿಲುಕಿದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಹಾಯದಿಂದ ರಕ್ಷಿಸಲಾಗಿದೆ
ಈ ಘಟನೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ಫೆ.16ರಂದು ಮಧ್ಯಾಹ್ನ ನಡೆದಿದೆ.
ಮರವಂತೆಯ ನಿವಾಸಿ ರೋಹಿತ್ ಖಾರ್ವಿ ಭೂ ಕುಸಿತದಲ್ಲಿ ಸಿಲುಕಿದ ವ್ಯಕ್ತಿಯಾಗಿದ್ದಾರೆ. ಘಟನೆಯಲ್ಲಿ ಅವರ ಕಂಠಮಟ್ಟ ಮಣ್ಣು ಮುಚ್ಚಿಕೊಂಡಿತು. ಇನ್ನೊಂದು ಅಡಿ ಮಣ್ಣು ಬಿದ್ದಿದ್ದರೆ ತಲೆ ಮುಚ್ಚಿ ಹೋಗುತ್ತಿತ್ತು.
ರಕ್ಷಣಾ ಕಾರ್ಯಾಚರಣೆಸಿ ಅವರನ್ನು ರಕ್ಷಿಸಲಾಗಿದೆ. ಕೊಳವೆಬಾವಿ ಕೊರೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಅದರ ಸುತ್ತ ಭಾರೀ ಕುಸಿತವಾಗಿ ಈ ಘಟನೆ ನಡೆದಿತ್ತು.
ರೋಹಿತ್ ಖಾರ್ವಿ ಅವರಿಗೆ ಯಾವುದೇ ಅಪಾಯ ಇಲ್ಲ. ಸುರಕ್ಷಿತವಾಗಿ ಹೊರಗೆ ತೆಗೆಯಲಾಯಿತು.
You must log in to post a comment.