Bramhavara

ಬ್ರಹ್ಮಾವರ:ಅರೆಕ್ಷಣದಲ್ಲಿ ಸುಟ್ಟುಹೋದ ಹಲವು ವರ್ಷಗಳ ಪ್ರೀತಿ!! | ಕಾರಿನಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

ಅವರಿಬ್ಬರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮುಂದೆ ಮದುವೆಯಾಗಿ ಖುಷಿಯಲ್ಲಿ ಜೀವನ ಸಾಗಿಸಬೇಕೆಂಬ ಕನಸನ್ನೂ ಹೊತ್ತಿದ್ದ ಆ ಜೋಡಿಯ ಕನಸು ಅಕ್ಷರಶಃ ಸುಟ್ಟು ಬೂದಿಯಾಗಿದೆ. ಮನೆಯವರ ವಿರೋಧದ ನಡುವೆಯೂ ಮದುವೆಯಾದ ನವ ಜೋಡಿಯು ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾದ ಕೂಡಲೇ ದಿಕ್ಕು ತೋಚದೆ ಆತ್ಮಹತ್ಯೆಯ ದಾರಿ ಹಿಡಿದಿದ್ದು, ಹಲವು ವರ್ಷಗಳ ಪ್ರೀತಿ ಅರೆಘಳಿಗೆಯಲ್ಲೇ ಸುಟ್ಟುಹೋಗಿದೆ. ಹೌದು, ಮೇ 22 ರ ಮುಂಜಾನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸುಟ್ಟು ಕರಕಲಾದ ಕಾರೊಂದರಲ್ಲಿ ಜೋಡಿಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು …

ಬ್ರಹ್ಮಾವರ:ಅರೆಕ್ಷಣದಲ್ಲಿ ಸುಟ್ಟುಹೋದ ಹಲವು ವರ್ಷಗಳ ಪ್ರೀತಿ!! | ಕಾರಿನಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು Read More »

ಕಾರಿನಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣ | ಗುರುತು ಪತ್ತೆ,ಕುಟುಂಬ ಸದಸ್ಯರ ಆಗಮನ

ಉಡುಪಿಯಲ್ಲಿ ಕಾರಿನೊಳಗೆ ಬೆಂಕಿಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ಓರ್ವ ಸದಸ್ಯ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬ್ರಹ್ಮಾವರ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮೃತದೇಹಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಯಶವಂತ ಮತ್ತು ಜ್ಯೋತಿ ಮಂಗಳೂರಿನಲ್ಲಿ ಮೂರು ದಿನಗಳ ಹಿಂದೆ ಬಾಡಿಗೆ ಮನೆ ಮಾಡಿದ್ದರು ಎಂದು ಹೇಳಲಾಗಿದೆ.5000 ರೂಪಾಯಿ ಪಾವತಿಸಿ ಆಧಾರ್ ಕಾರ್ಡ್ ದಾಖಲೆ ಕೊಟ್ಟು ಬಾಡಿಗೆ …

ಕಾರಿನಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣ | ಗುರುತು ಪತ್ತೆ,ಕುಟುಂಬ ಸದಸ್ಯರ ಆಗಮನ Read More »

ಬ್ರಹ್ಮಾವರ : ಸುಟ್ಟು ಕರಕಲಾದ ಕಾರಿನಲ್ಲಿ ಪತ್ತೆಯಾಯ್ತು ಸಜೀವ ದಹನವಾಗಿದ್ದ ನವ ಜೋಡಿಯ ಶವ

ಬ್ರಹ್ಮಾವರ: ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡು ಸಜೀವ ದಹನವಾಗಿರುವ ಘಟನೆ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬೆಂಗಳೂರಿನ ಆರ್.ಟಿ.ನಗರದ ಯಶವಂತ್ (23) ಮತ್ತು ಜ್ಯೋತಿ (23) ಎಂದು ಗುರುತಿಸಲಾಗಿದೆ. ಮೃತರು ನಿನ್ನೆ ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರು ಬಾಡಿಗೆ ಪಡೆದು ಉಡುಪಿಗೆ ಬಂದಿದ್ದರು. ಆದರೆ, ಮುಂಜಾನೆ 3 ಗಂಟೆ ಸುಮಾರಿಗೆ ಸುಡುತ್ತಿದ್ದ ಕಾರು ಪತ್ತೆಯಾಗಿದೆ. ಸ್ಥಳೀಯರು ಬೆಂಕಿ …

ಬ್ರಹ್ಮಾವರ : ಸುಟ್ಟು ಕರಕಲಾದ ಕಾರಿನಲ್ಲಿ ಪತ್ತೆಯಾಯ್ತು ಸಜೀವ ದಹನವಾಗಿದ್ದ ನವ ಜೋಡಿಯ ಶವ Read More »

ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ಹೋಟೆಲ್ ರೂಮ್ ನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ನೌಕರ ಆತ್ಮಹತ್ಯೆ

ಬ್ರಹ್ಮಾವರ:ಹೋಟೆಲ್ ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನೌಕರ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಚ್ಚುಲು ಗ್ರಾಮದ ಕೊಳವಿನ ಬಾಗಿಲಿನಲ್ಲಿ ನಡೆದಿದೆ. ಆತ್ಮಹತ್ಯೆ ಗೆ ಶರಣಾದ ವ್ಯಕ್ತಿಯನ್ನು 34 ವರ್ಷದ ಭಾಸ್ಕರ್ ಪೂಜಾರಿ ಎಂದು ಗುರುತಿಸಲಾಗಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಏಪ್ರಿಲ್ 26 ರ ಬೆಳಗ್ಗೆ ತಾನು ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬ್ರಹ್ಮಾವರದ ಆಶ್ರಯ ಹೋಟೆಲ್ ನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಬಂಧ …

ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ಹೋಟೆಲ್ ರೂಮ್ ನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ನೌಕರ ಆತ್ಮಹತ್ಯೆ Read More »

ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವು!

ಬ್ರಹ್ಮಾವರ :ಆಕಸ್ಮಿಕವಾಗಿ ಕಾಲು ಜಾರಿ ವ್ಯಕ್ತಿಯೊಬ್ಬರುಬಾವಿಗೆ ಬಿದ್ದು ಮೃತಪಟ್ಟ ಘಟನೆ ಯಡ್ತಾಡಿ ಗ್ರಾಮದ ಸಾಯಿಬ್ರಕಟ್ಟೆ ಎಂಬಲ್ಲಿ ನಡೆದಿದೆ. ಮೃತರನ್ನು ಶುಕ್ರ ಪೂಜಾರಿ(65) ಎಂದು ಗುರುತಿಸಲಾಗಿದೆ. ಮೃತರಾದ ಶುಕ್ರ ಪೂಜಾರಿಯವರು ಕೂಲಿ ಕೆಲಸ ಮಾಡಿಕೊಂಡಿದ್ದರು.ಗೋಪಾಲಕೃಷ್ಣ ಸೋಮಯಾಜಿ ಎಂಬುವರ ತೋಟದ ಬಾವಿಯಲ್ಲಿರುವ ಒಣಗಿದ ಮಡಲುಗಳನ್ನು ತೆಗೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು,ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ನ್ನು ಹಿಂದಿಕ್ಕುವ ಭರದಲ್ಲಿ ಕೆಟ್ಟು ನಿಂತಿದ್ದ ಈಚರ್ ಲಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರರು|ಭೀಕರ ಅಪಘಾತದಲ್ಲಿ ಪಾದಚಾರಿ ಸಾವು-ಸವಾರರಿಬ್ಬರಿಗೆ ಗಂಭೀರ ಗಾಯ

ಬ್ರಹ್ಮಾವರ: ಈಚರ್ ಲಾರಿ ಹಾಗೂ ದ್ವಿಚಕ್ರ ವಾಹನ ಮಧ್ಯೆ ತಾಲೂಕಿನ ಕೋಟ ಮಣೂರು ಬೊಬ್ಬರ್ಯ ಕಟ್ಟೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕೋಟ ಮಣೂರು ಬೊಬ್ಬರ್ಯ ಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಯೊಂದು ಕೆಟ್ಟು ನಿಂತಿತ್ತು. ಅದೇ ದಾರಿಯಾಗಿ ಕೋಟದಿಂದ ಕುಂಬಾಸಿ ಕಡೆಗೆ ಹೋಗುತ್ತಿದ್ದ ಬೈಕ್ ಸವಾರರು ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಕೆಟ್ಟು ನಿಂತ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ …

ಬಸ್ ನ್ನು ಹಿಂದಿಕ್ಕುವ ಭರದಲ್ಲಿ ಕೆಟ್ಟು ನಿಂತಿದ್ದ ಈಚರ್ ಲಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರರು|ಭೀಕರ ಅಪಘಾತದಲ್ಲಿ ಪಾದಚಾರಿ ಸಾವು-ಸವಾರರಿಬ್ಬರಿಗೆ ಗಂಭೀರ ಗಾಯ Read More »

ಬ್ರಹ್ಮಾವರ: ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದ ಕಾರು ಅಪಘಾತ | ಒಂದೇ ಕುಟುಂಬದ ನಾಲ್ವರಿಗೆ ಗಾಯ, ಕಾರು ಸಂಪೂರ್ಣ ನಜ್ಜುಗುಜ್ಜು

ಬ್ರಹ್ಮಾವರ: ಒಂದೇ ಕುಟುಂಬದ ನಾಲ್ವರಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗುಪ್ರದೇಶಕ್ಕೆ ಉರುಳಿಬಿದ್ದ ಘಟನೆ ಉಳ್ಳೂರು ಕೆ.ಜಿ. ರೋಡ್ ಬಳಿ ನಡೆದಿದೆ. ಕುಟುಂಬ ಸಮೇತರಾಗಿ ಕುಂದಾಪುರದ ದೇವಸ್ಥಾನಕ್ಕೆ ಭೇಟಿ ನೀಡಿ ಉಡುಪಿಗೆ ವಾಪಾಸಾಗುದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆದ್ದಾರಿಯಿಂದ ಉರುಳಿ ಬಿದ್ದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ .ಬ್ರಹ್ಮಾವರ ಪೋಲಿಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!
Scroll to Top