Aracanut

ವಿಟ್ಲ: ಮನೆಯ ಜಗಲಿಯಲ್ಲಿಟ್ಟಿದ್ದ ಅಡಿಕೆ ಚೀಲ ಎತ್ತಾಕೊಂಡು ಹೋದ ಕಳ್ಳ !! | ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಕಳ್ಳನೊಬ್ಬ ಮನೆಯೊಂದರಿಂದ ಅಡಿಕೆ ಕಳವುಗೈದು ಪರಾರಿಯಾದ ಘಟನೆ ವಿಟ್ಲದಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಡಹಗಲೇ ಅಪರಿಚಿತ ವ್ಯಕ್ತಿಯೊಬ್ಬ ದ್ವಿಚಕ್ರದಲ್ಲಿ ಬಂದು ಮನೆಯ ಜಗಲಿಯಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ಅಡಿಕೆ ಚೀಲವನ್ನು ಎಗರಿಸಿ ಪರಾರಿಯಾಗುತ್ತಾನೆ. ಕಳ್ಳನ ಈ ಕೈಚಳಕದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂತಹ ಘಟನೆಗಳು ಕರಾವಳಿಯಲ್ಲಿ ಮರುಕಳಿಸುತ್ತಿರುವುದರಿಂದ ಅಡಿಕೆ ಬೆಳೆಗಾರರು ತುಂಬಾನೇ ಜಾಗರೂಕರಾಗಿರುವುದು ಅವಶ್ಯಕ.

ಮಂಗಳೂರು : ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕದ್ದೊಯ್ದ ಕಳ್ಳರು, ದೂರು ದಾಖಲು

ಇತ್ತೀಚಿಗೆ ಅಡಿಕೆ ಬೆಲೆ ಏರಿಕೆಯಾದ ನಂತರ ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅಂತೆಯೇ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕಳವು ಮಾಡಿರುವ ಘಟನೆ ಮಂಗಳೂರಿನ ಕೊಣಾಜೆ ಗ್ರಾಮದ ನಾಟೆಕಲ್ ಸೈಟ್ ಎಂಬಲ್ಲಿ ನಡೆದಿದೆ. ನಾಟೆಕಲ್ ಸೈಟ್ ನಿವಾಸಿ ಮಹಮ್ಮದ್ ಎ.ಎಸ್ ಎಂಬವರ ಮನೆಯಿಂದ ಈ ಕಳ್ಳತನ ನಡೆದಿದೆ. ಸುಮಾರು 60 ಕೆಜಿ ಅಡಿಕೆ ಕಳವು ಮಾಡಲಾಗಿದೆ ಎಂದು ಮನೆಯವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಡಿಕೆ ಕುರಿತು ವದಂತಿ ಹಬ್ಬಬೇಡಿ -ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು :ಯಾರೂ ಅಡಿಕೆ‌ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡಬಾರದು, ಇದರಿಂದ ಬೆಳೆಗಾರರಿಗೆ ತೊಂದರೆಯಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ಹೇಳಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು,ಅಡಿಕೆ‌ ಬ್ಯಾನ್ ಮಾಡುವ ವದಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ದೆಹಲಿಗೆ ರಾಜ್ಯದಿಂದ ನಿಯೋಗ ತೆರಳಿತ್ತು. ಕೇಂದ್ರ‌ ಸಚಿವರನ್ನ ಭೇಟಿಯಾಗಿ ಮಾತುಕತೆ‌ ನಡೆಸಲಾಗಿತ್ತು. ಸರ್ಕಾರದಿಂದ ವಿಶೇಷವಾಗಿ ಹೋರಾಟ ಮಾಡಿ‌ ರೈತರ ಹಿತ ಕಾಯುತ್ತೇವೆ ಎಂದರು. ವದಂತಿಗಳಿಂದ ಅಡಿಕೆ‌ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಸವಾಗಲಿದೆ, ಇದರಿಂದ ಅಡಿಕೆ‌ ಬೆಳೆಗಾರರು ಸಂಕಷ್ಟಕ್ಕೆ‌ ಸಿಲುಕಲಿದ್ದಾರೆ. …

ಅಡಿಕೆ ಕುರಿತು ವದಂತಿ ಹಬ್ಬಬೇಡಿ -ಗೃಹ ಸಚಿವ ಆರಗ ಜ್ಞಾನೇಂದ್ರ Read More »

ದ.ಕ ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ !! | ಬೆಳ್ಳಂಬೆಳಗ್ಗೆ ಸುರಿದ ಮಳೆಗೆ ಅಡಿಕೆ ಕೃಷಿಕರು ಕಂಗಾಲು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ವಿವಿಧೆಡೆ ಇಂದು ಬೆಳಗ್ಗೆ ಅಕಾಲಿಕ ಮಳೆಯಾಗಿದ್ದು, ಅಡಿಕೆ ಕೃಷಿಕರು ತತ್ತರಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ವಿಟ್ಲ, ಈಶ್ವರಮಂಗಲ, ಇಡಿದು ಮೊದಲಾದ ಕಡೆ ಮಳೆಯಾಗಿದೆ. ಅಡಕೆ ಕೃಷಿಕರ ಅಂಗಳದಲ್ಲಿ ಅಡಿಕೆ ಒಣಗಲು ಹಾಕಿರುವುದರಿಂದ ಅದು ಮಳೆಗೆ ಒದ್ದೆಯಾಗಿದೆ. ಎರಡು ದಿನಗಳ ಹಿಂದೆ ಸುಬ್ರಹ್ಮಣ್ಯ, ಬೆಳ್ಳಾರೆ, ಉಪ್ಪಿನಂಗಡಿ ಮೊದಲಾದ ಕಡೆ ಏಕಾಏಕಿ ರಾತ್ರಿ ವೇಳೆ ಮಳೆಯಾಗಿತ್ತು. ಇದೀಗ ಈ ಅಕಾಲಿಕ ಮಳೆ ಜಿಲ್ಲೆಯ ಕೃಷಿಕರನ್ನು ಆತಂಕಕ್ಕೆ ತಳ್ಳಿದೆ.

ಅಡಿಕೆಯ ಜತೆಗೆ ಪರ್ಯಾಯ ಬೆಳೆಗೆ ಒತ್ತು , ಸರಕಾರ ಗಂಭೀರ ಚಿಂತನೆ -ಎಸ್.ಅಂಗಾರ

ಪುತ್ತೂರು : ಡಿಕೆ ಹಳದಿ ರೋಗ ಪೀಡಿತ ಪ್ರದೇಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಜೆಟ್‌ನಲ್ಲಿ ಘೋಷಿಸಲಾಗಿರುವ 25 ಕೋ.ರೂ. ಪ್ಯಾಕೇಜ್‌ ಮೊತ್ತದಲ್ಲಿ ಪರ್ಯಾಯ ಬೆಳೆಗೆ ಉತ್ತೇಜನ ನೀಡಲು ತೋಟಗಾರಿಕೆ ಇಲಾಖೆ ಸಚಿವರ ಉಪಸ್ಥಿತಿಯಲ್ಲಿ ಮುಂದಿನ 15 ದಿನಗಳಲ್ಲಿ ಜಿಲ್ಲೆಯಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಹೇಳಿದ್ದಾರೆ. ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಸುಳ್ಯ, ಪುತ್ತೂರು ತಾಲೂಕಿನಲ್ಲಿ ಹಳದಿ ರೋಗದಿಂದ ಅಡಿಕೆ ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗಿದೆ. ಹಾಗಾಗಿ ಅಡಿಕೆಯ ಜತೆಗೆ ಪರ್ಯಾಯ …

ಅಡಿಕೆಯ ಜತೆಗೆ ಪರ್ಯಾಯ ಬೆಳೆಗೆ ಒತ್ತು , ಸರಕಾರ ಗಂಭೀರ ಚಿಂತನೆ -ಎಸ್.ಅಂಗಾರ Read More »

ಬೆಳ್ತಂಗಡಿ: ಅಡಿಕೆ ಮರದಿಂದ ಬಿದ್ದು ಗಾಯಗೊಂಡಿದ್ದ ಕೃಷಿಕ ಚಿಕಿತ್ಸೆ ಫಲಕಾರಿಯಾಗದೆ ಸಾವು

ಅಡಿಕೆ ಮರದಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಪ್ರಗತಿಪರ ಕೃಷಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ನಿಧನ ಹೊಂದಿದ ಘಟನೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿ ನಡೆದಿದೆ. ಮರೋಡಿ ಗ್ರಾಮದ ಕಿಂಜಾಲು ಮನೆಯ ಶೇಖರ್ ಪೂಜಾರಿ (52) ಮೃತರು. ಪ್ರಗತಿಪರ ಕೃಷಿಕರಾಗಿದ್ದ ಶೇಖರ್ ಪೂಜಾರಿಯವರು ಡಿ.11 ರಂದು ತಮ್ಮ ತೋಟದಲ್ಲಿ ಅಡಿಕೆ ಮರದಿಂದ ಅಡಿಕೆ ತೆಗೆಯುವ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ಅವರ ತಲೆಗೆ ಹಾಗೂ ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ತಕ್ಷಣ …

ಬೆಳ್ತಂಗಡಿ: ಅಡಿಕೆ ಮರದಿಂದ ಬಿದ್ದು ಗಾಯಗೊಂಡಿದ್ದ ಕೃಷಿಕ ಚಿಕಿತ್ಸೆ ಫಲಕಾರಿಯಾಗದೆ ಸಾವು Read More »

ಅಕಾಲಿಕ ಮಳೆಗೆ ತತ್ತರಿಸಿ ಹೋದ ಕರಾವಳಿಯ ಅಡಿಕೆ ಬೆಳೆಗಾರರು!! | ಅಂಗಳದಲ್ಲೇ ಕೊಳೆತು ಹೋಗುತ್ತಿದೆ ಕ್ವಿಂಟಾಲ್ ಗಟ್ಟಲೆ ಅಡಿಕೆ

ನವೆಂಬರ್ ತಿಂಗಳ ಅಕಾಲಿಕ ಮಳೆಗೆ ಇಡೀ ದಕ್ಷಿಣ ಭಾರತವೇ ತತ್ತರಿಸಿಹೋಗಿದೆ. ಅದೆಷ್ಟೋ ಜನ ಸೂರು ಕಳೆದುಕೊಂಡು, ಅನ್ನ ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಹಲವೆಡೆ ಪ್ರವಾಹದ ಪರಿಸ್ಥಿತಿಯೇ ಎದುರಾಗಿದೆ. ಹೀಗಿರುವಾಗ ರೈತರ ಸ್ಥಿತಿ ನೋಡಲಸಾಧ್ಯ. ಬೆಳೆದ ಬೆಳೆಗಳೆಲ್ಲ ನೀರಲ್ಲಿ ನೀರಾಗಿ ಹೋಗಿದೆ. ಅದರಲ್ಲೂ ಅಡಿಕೆ ಬೆಳೆಗಾರರ ಸ್ಥಿತಿ ಕೇಳಲೇಬೇಡಿ. ಅಕಾಲಿಕ ಮಳೆ ಕರಾವಳಿ ಭಾಗದ ಕೃಷಿಕರ ನೆಮ್ಮದಿ ಕೆಡಿಸಿದೆ. ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಬಂಪರ್ ಬೆಲೆಯಿದ್ದರೂ, ಭಾರೀ ಮಳೆ ಸುರಿಯುತ್ತಿರುವುದು ಅಡಿಕೆ ಬೆಳೆಗಾರರಿಗೆ ನಿರಾಸೆ ಮೂಡಿಸಿದೆ. ದಕ್ಷಿಣ …

ಅಕಾಲಿಕ ಮಳೆಗೆ ತತ್ತರಿಸಿ ಹೋದ ಕರಾವಳಿಯ ಅಡಿಕೆ ಬೆಳೆಗಾರರು!! | ಅಂಗಳದಲ್ಲೇ ಕೊಳೆತು ಹೋಗುತ್ತಿದೆ ಕ್ವಿಂಟಾಲ್ ಗಟ್ಟಲೆ ಅಡಿಕೆ Read More »

ಕಾರ್ಕಳ : ರಿಕ್ಷಾದಲ್ಲಿ ಬಂದು ತೋಟದಿಂದ ಅಡಿಕೆ ಕಳ್ಳತನ, ಓರ್ವನ ಬಂಧನ

ಉಡುಪಿ : ಕಾರ್ಕಳ ತಾಲೂಕಿನ ಕುಂಟಾಡಿಯ ತೋಟವೊಂದರಿಂದ ಅಡಿಕೆಯನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆಟೋ ಚಾಲಕನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನನ್ನು ನಿಟ್ಟೆ ಅಂಬಡೆಕಲ್ಲಿನ ಕಾರ್ತಿಕ್(21) ಎಂದು ಗುರುತಿಸಲಾಗಿದೆ. ಈತ ಕುಂಟಾಡಿಯ ಹರೀಶ್ ಅಮೀನ್ ಎಂಬುವವರ ತೋಟದಿಂದ ಸನೋಜ್ ಹಾಗೂ ಇನ್ನೊಬ್ಬನ ಜತೆ ಸೇರಿಕೊಂಡು ಅಡಿಕೆ ಕಳವು ಮಾಡಿದ್ದರು. ಆಟೋ ಮೂಲಕ ಬಂದು ತೋಟದಲ್ಲಿ ಕಳವು ಮಾಡಿ ಹೋಗಿದ್ದರು. ಬಂಧಿತ ಆರೋಪಿಯಿಂದ ಸುಮಾರು 25 ಸಾವಿರ ಮೌಲ್ಯದ ಅಡಿಕೆಯ ಹಾಗೂ …

ಕಾರ್ಕಳ : ರಿಕ್ಷಾದಲ್ಲಿ ಬಂದು ತೋಟದಿಂದ ಅಡಿಕೆ ಕಳ್ಳತನ, ಓರ್ವನ ಬಂಧನ Read More »

ಸುಳ್ಯ: ಅಡಿಕೆ ಕದ್ದಿದ್ದಾನೆ ಎಂಬ ಆರೋಪದಲ್ಲಿ ಬಾಲಕನ ಮೇಲೆ ಹಲ್ಲೆ, ಹತ್ತು ಮಂದಿಯ ಮೇಲೆ ಎಫ್ಐಆರ್ ದಾಖಲು

ಕಳೆದ ವಾರ ಹಣ್ಣು ಅಡಿಕೆ ಕದ್ದಿದ್ದಾನೆ ಎಂಬ ಆರೋಪದಲ್ಲಿ ಬಾಲಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುತ್ತಿಗಾರಿನ ಸಮೀಪದ ಪುರ್ಲುಮಕ್ಕಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಬಾಲಕ ಮಕ್ಕಳ ಕಲ್ಯಾಣ ಸಮಿತಿಗೆ ಈ ಬಗ್ಗೆ ದೂರು ನೀಡಿದ್ದು, ಹಲ್ಲೆ ನಡೆಸಿದ 10 ಮಂದಿ ಮೇಲೆ ಎಫ್ ಐ ಆರ್ ಕೂಡ ದಾಖಲಾಗಿದೆ. ಗುತ್ತಿಗಾರಿನ 16 ವರ್ಷದ ಬಾಲಕನಿಗೆ ಅಡಿಕೆ ಕದ್ದ ಆರೋಪದಲ್ಲಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮಾತ್ರವಲ್ಲದೆ ಹಲ್ಲೆ ನಡೆಸಿದ ವಿಡಿಯೋ ಕೂಡ ಗ್ರೂಪ್‌ಗಳಲ್ಲಿ ಹರಿಯಬಿಡಲಾಗಿದೆ. ಇದರ …

ಸುಳ್ಯ: ಅಡಿಕೆ ಕದ್ದಿದ್ದಾನೆ ಎಂಬ ಆರೋಪದಲ್ಲಿ ಬಾಲಕನ ಮೇಲೆ ಹಲ್ಲೆ, ಹತ್ತು ಮಂದಿಯ ಮೇಲೆ ಎಫ್ಐಆರ್ ದಾಖಲು Read More »

ಉಪ್ಪಿನಂಗಡಿ | ತೋಟದಲ್ಲಿ ಅಡಿಕೆ ಕದಿಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳ, ಕಳ್ಳನನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ತೋಟವೊಂದರಲ್ಲಿ ಅಡಿಕೆ ಕದಿಯುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿದ ಕಳ್ಳನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಉಪ್ಪಿನಂಗಡಿಗೆ ಸಮೀಪದ ಬಾರ್ಯ ಗ್ರಾಮದ ಸರಳಿಕಟ್ಟೆಯಲ್ಲಿ ನಡೆದಿದೆ. ಕಳ್ಳನನ್ನು ಪುತ್ತೂರು ಮೂಲದ ಪ್ರಕಾಶ್ ಎಂದು ಗುರುತಿಸಲಾಗಿದೆ. ಸರಳಿಕಟ್ಟೆಯ ಉಸ್ಮಾನ್ ಎಂಬವರ ತೋಟದಿಂದ ಅಡಿಕೆಗಳನ್ನು ಕದಿಯುತ್ತಿದ್ದಾಗ, ಅಡಿಕೆ ಸಮೇತ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ತಿಂಗಳ ಹಿಂದೆ ಇದೇ ಪರಿಸರದಲ್ಲಿ ಮನೆಯೊಂದರಲ್ಲಿ ದರೋಡೆ ಮಾಡಿ ಲಕ್ಷಾಂತರ ಬೆಳೆ ಬಾಳುವ ಚಿನ್ನ ಮತ್ತು ಹಣವನ್ನು ದೋಚಿದ ಕಳ್ಳರ ಕೃತ್ಯದಿಂದ ಭಯಭೀತರಾಗಿದ್ದಂತಹ ಸಂದರ್ಭದಲ್ಲಿಯೇ, ಅಡಿಕೆ …

ಉಪ್ಪಿನಂಗಡಿ | ತೋಟದಲ್ಲಿ ಅಡಿಕೆ ಕದಿಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳ, ಕಳ್ಳನನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು Read More »

error: Content is protected !!
Scroll to Top