ಕೊರಗಜ್ಜ

ಮಂಗಳೂರು : ಆಜಾನ್ ಗೆ ವಿರುದ್ಧವಾಗಿ ಮೊಳಗಿದ ಕೊರಗಜ್ಜನ ಭಕ್ತಿ ಗೀತೆ

ಮಂಗಳೂರು: ರಾಜ್ಯದಲ್ಲಿ ಆಜಾನ್ ವಿಚಾರದಲ್ಲಿಶ್ರೀರಾಮ ಸೇನೆ ಸೇರಿ ಕೆಲ ಹಿಂದೂ ಪರ ಸಂಘಟನೆಗಳು ಸುಪ್ರಭಾತ ಮೊಳಗಿಸುವ ಪಣ ತೊಟ್ಟಿದ್ದವು. ಹಾಗಾಗಿ ಇಂದು ಸೋಮವಾರ ಮೂಡುಶೆಡ್ಡೆ ಗ್ರಾಮದಲ್ಲಿರುವ ಶಿವಾಜಿ ಪ್ರತಿಮೆ ಬಳಿ ಇರುವ ಅಯ್ಯಪ್ಪ ಭಕ್ತ ವೃಂದದ ತಾತ್ಕಾಲಿಕ ಶೆಡ್ ಮುಂಭಾಗದಲ್ಲಿ ಮೈಕ್ ಅಳವಡಿಸಿ, ಬೆಳಗ್ಗೆ 5 ಗಂಟೆಯಿಂದ 6 ಗಂಟೆಯವರೆಗೆ ಕೊರಗಜ್ಜನ ಭಕ್ತಿ ಗೀತೆಗಳನ್ನು ಹಾಕಿದ್ದಾರೆ. ಮೂಡುಶೆಡ್ಡೆಯಲ್ಲಿರುವ ಮಸೀದಿಯಿಂದ ಸುಮಾರು 250 ಮೀಟರ್ ದೂರದಲ್ಲಿ ಅಯ್ಯಪ್ಪ ಸ್ವಾಮಿ ಶೆಡ್ ಇದೆ. ಇದರ ನೇತೃತ್ವವನ್ನು ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷ …

ಮಂಗಳೂರು : ಆಜಾನ್ ಗೆ ವಿರುದ್ಧವಾಗಿ ಮೊಳಗಿದ ಕೊರಗಜ್ಜನ ಭಕ್ತಿ ಗೀತೆ Read More »

ಕೊರಗಜ್ಜನ ಈ ಕ್ಷೇತ್ರದ ನೆಲದಲ್ಲಿ ಮೂಡಿಬರುತ್ತಿದೆ ನಾಗರ ಹಾವಿನ ಚಿತ್ರ ; ಈ ಪವಾಡ ನೋಡಲು ದಂಡೋಪಾದಿಯಾಗಿ ಬರುತ್ತಿರುವ ಜನ ಸಾಗರ!

ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ಹೇಗೆ ನಾನಾ ದೇವರುಗಳ ತೀರ್ಥಕ್ಷೇತ್ರ ಗಳಿಗೆ ಹೆಸರುವಾಸಿಯಾಗಿದೆಯೋ, ಅದೇ ರೀತಿ ಅಲ್ಲಿನ ತುಳುನಾಡಿನ ಜನ ಅಷ್ಟೇ ಭೂತಾರಾಧನೆಯನ್ನೂ ನಂಬುತ್ತಾರೆ ಮತ್ತು ಬಹಳ ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಹಾಗಾಗಿ ಅಲ್ಲಿನ ಬಹುತೇಕರ ಮನೆಯ ಅಂಗಳದಲ್ಲಿ ಇಂದಿಗೂ ಈ ರೀತಿಯ ಅನೇಕ ಸ್ಥಳೀಯ ದೈವಗಳ ಸಣ್ಣ ಸಣ್ಣ ಗುಡಿಗಳನ್ನು ಕಾಣಬಹುದಾಗಿದೆ. ಅಂತಹ ನಂಬಿಕೆಗಳಲ್ಲಿ ಬಹಳ ಪ್ರಸಿದ್ಧವಾಗಿರುವುದೇ ಕೊರಗಜ್ಜ ಎಂಬ ದೈವ. ಈ ಕೊರಗಜ್ಜನನ್ನು ಭಾರೀ ಶ್ರದ್ಧಾ, ಭಕ್ತಿಗಳಿಂದ ಪೂಜಿಸುವುದಲ್ಲದೇ, ದಕ್ಷಿಣ …

ಕೊರಗಜ್ಜನ ಈ ಕ್ಷೇತ್ರದ ನೆಲದಲ್ಲಿ ಮೂಡಿಬರುತ್ತಿದೆ ನಾಗರ ಹಾವಿನ ಚಿತ್ರ ; ಈ ಪವಾಡ ನೋಡಲು ದಂಡೋಪಾದಿಯಾಗಿ ಬರುತ್ತಿರುವ ಜನ ಸಾಗರ! Read More »

ಕೊರಗಜ್ಜನ ದೈವಸ್ಥಾನದ ಮುಂದೆ ವ್ಯಕ್ತಿಯೋರ್ವನ ಅನುಮಾನಾಸ್ಪದ ಓಡಾಟ!

ಮಂಗಳೂರು ಇಲ್ಲಿನ ಶಿವನಗರದಲ್ಲಿರುವ ಕೊರಗಜ್ಜನ ದೈವಸ್ಥಾನದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪಾಂಡೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಚಿಕ್ಕ ಡಂಡರಗಲ್ ಗ್ರಾಮದ ಹನುಮಂತ ಎನ್. ತಟ್ಟಿ (25) ಎಂಬಾತನೇ ಬಂಧಿತ ಆರೋಪಿ. ಎಸೈ ಅನಂತ ಮುರುಡೇಶ್ವರ್ ಅವರು ಸಿಬ್ಬಂದಿ ಪ್ರಕಾಶ್ ನಾಯ್ಕ ವಿ. ರೊಂದಿಗೆ ಗಸ್ತಿನಲ್ಲಿದ್ದ ವೇಳೆ ಹನುಮಂತ ತಟ್ಟಿ ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ್ದ. ಪೊಲೀಸರು ವಿಚಾರಿಸಿದಾಗ ಆತ ಉತ್ತರಿಸಲು ತಡಬಡಾಯಿಸಿದ್ದಾನೆ. ಈ ಹಿನ್ನೆಲೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ತುಳುನಾಡಿನ ನಂಬಿಕೆಯ ಕೊರಗಜ್ಜನ ಪವಾಡ ಮತ್ತೊಮ್ಮೆ ಸಾಬೀತು | ಮಲಗಿದ್ದಲ್ಲೇ ಇದ್ದ ಮಗು ಎದ್ದು ಓಡಾಡೋಕೆ ಶುರು !

ಸುಳ್ಯ: ತುಳುನಾಡಿನಲ್ಲಿ ಕೊರಗಜ್ಜ ಅಂದರೆ ಪವಾಡ. ತುಳುನಾಡ ಜನತೆ ಮಾತ್ರವಲ್ಲ ಎಲ್ಲರೂ ಈ ದೈವದ ಪವಾಡ ನಂಬುತ್ತಾರೆ. ಈ ಪವಾಡಗಳು ನಿಜ ಎಂದು ಸಾಬೀತಾಗುತ್ತಿರುವುದರಿಂದ ಈ ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢವಾಗುತ್ತಲೇ ಇದೆ. ಕೊರಗಜ್ಜನ ಮೂಲ ಸ್ಥಾನ ಮಂಗಳೂರಿನ ಕುತ್ತಾರು. ಆದರೂ ಕರಾವಳಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕೊರಗಜ್ಜನ ದೈವಸ್ಥಾನಗಳಿವೆ. ಅದರಲ್ಲಿ ತನ್ನ ಕಾರ್ಣಿಕ ಹಾಗೂ ಪವಾಡದ ಮೂಲಕ ಭಕ್ತರನ್ನು ಸೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕದ ದೊಡ್ಡಡ್ಕದಲ್ಲಿರುವ ಕೊರಗಜ್ಜನ ಕ್ಷೇತ್ರ. …

ತುಳುನಾಡಿನ ನಂಬಿಕೆಯ ಕೊರಗಜ್ಜನ ಪವಾಡ ಮತ್ತೊಮ್ಮೆ ಸಾಬೀತು | ಮಲಗಿದ್ದಲ್ಲೇ ಇದ್ದ ಮಗು ಎದ್ದು ಓಡಾಡೋಕೆ ಶುರು ! Read More »

ಕಾರ್ಕಳ: ಕೊರಗಜ್ಜನ ವೇಷ ಹಾಕಿ ಅವಮಾನ ಎಸಗಿದ ಹಿಂದೂ ಯುವಕ!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋ-ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಕಾರ್ಕಳ: ಸ್ಥಳೀಯ ವ್ಯಕ್ತಿಯೊಬ್ಬರು ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ನಡೆಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚೇತನ್ ಎಂಬವರು ನೀಡಿದ ದೂರಿನಲ್ಲಿ ರವೀಂದ್ರ ಎಂಬವರ ಮೇಲೆ ಪ್ರಕರಣ ದಾಖಲಾಗಿದ್ದು, ಜನವರಿ 18 ರಂದು ಸ್ನೇಹಿತರೊಬ್ಬರ ವಾಟ್ಸಪ್ ಸ್ಟೇಟಸ್ ನಲ್ಲಿ ರವೀಂದ್ರ ಎಂಬವರು ಕೊರಗಜ್ಜನ ವೇಷ ಹಾಕಿ ಅವಮಾನ ಎಸಗಿರುವ ವೀಡಿಯೋ ಹರಿದಾಡಿದೆ. ಕೂಡಲೇ ಚೇತನ್ ರವೀಂದ್ರನನ್ನು ಪ್ರಶ್ನಿಸಿದಾಗ ಉದ್ರೇಕದ ಮಾತುಗಳನ್ನು ಆಡಿದಲ್ಲದೇ, ಮುಂದೆಯೂ ಈ ರೀತಿಯ ಹಲವು ವೀಡಿಯೋ …

ಕಾರ್ಕಳ: ಕೊರಗಜ್ಜನ ವೇಷ ಹಾಕಿ ಅವಮಾನ ಎಸಗಿದ ಹಿಂದೂ ಯುವಕ!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋ-ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು Read More »

error: Content is protected !!
Scroll to Top