Home Interesting Airtel Offer | ಏರ್ ಟೆಲ್ ಗ್ರಾಹಕರೇ ನಿಮಗೊಂದು ಮುಖ್ಯವಾದ ಮಾಹಿತಿ

Airtel Offer | ಏರ್ ಟೆಲ್ ಗ್ರಾಹಕರೇ ನಿಮಗೊಂದು ಮುಖ್ಯವಾದ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ಟೆಲಿಕಾಮ್ ಕಂಪೆನಿಗಳು ಬಳಕೆದಾರರಿಗೆ ಹೊಸ ಹೊಸ ಆಫರ್ ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಸಿದ್ಧವಾಗುತ್ತಿದೆ. ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪೆನಿ ಏರ್‌ಟೆಲ್ ಅತ್ಯುತ್ತಮ ಟೆಲಿಕಾಂ ಸೇವೆಗಳನ್ನು ಒದಗಿಸುತ್ತಿದ್ದು, ಜಿಯೋ. ಮತ್ತು ಏರ್ಟೆಲ್ ಜಿದ್ದಿಗೆ ಬಿದ್ದಂತೆ ಹೊಸ ಹೊಸ ಆಫರ್ ನೀಡುತ್ತಿದೆ.

ಏರ್‌ಟೆಲ್ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಯೋಜನೆಗಳ ಬೆಲೆಗಳು ಕೊಂಚ ಹೆಚ್ಚೆಂದು ಹೇಳಿದರು ಕೂಡ ನೆಟ್‌ವರ್ಕ್ ವಿಷಯದಲ್ಲಿ ಏರ್‌ಟೆಲ್ ಕಂಪೆನಿಯು ಹಲವರ ನೆಚ್ಚಿನ ಬ್ರಾಂಡ್ ಆಗಿದೆ. ನೀವು ಏರ್‌ಟೆಲ್ ಬಳಕೆದಾರರಾಗಿದ್ದರೆ, ಇದೀಗ ಪ್ರತಿದಿನ ಕೇವಲ 9.15 ರೂ. ಬೆಲೆಯಲ್ಲಿ ಪ್ರತಿದಿನ 1.5GB, ಅನಿಯಮಿತ ಕರೆಗಳು ಹಾಗೂ 100 SMS ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

519 ರೂ. ಬೆಲೆಯ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆ

ಏರ್‌ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದ್ದು, ನೀವು ಏರ್‌ಟೆಲ್‌ ಗ್ರಾಹಕರಾಗಿದ್ದರೆ 519 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಗೆ ಚಂದಾದಾರರಾಗಬಹುದು. ಈ ಯೋಜನೆಯು ಭರ್ಜರಿ 60 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ. ಈ ಅವದಿಯಲ್ಲಿ ಪ್ರತಿದಿನ 1.5GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಹಾಗೂ ಪ್ರತಿದಿನ 100 SMSಗಳ ಪ್ರಯೋಜನಗಳನ್ನೂ ಪಡೆಯಬಹುದಾಗಿದೆ.

ಇಷ್ಟೇ ಅಲ್ಲದೇ, ಈ ಯೋಜನೆಯಲ್ಲಿ Apollo 24/7 Circle, 100 ರೂಪಾಯಿಗಳ FASTag ಕ್ಯಾಶ್‌ಬ್ಯಾಕ್, ಉಚಿತ Hellotunes ಮತ್ತು Wynk Music ನಂತಹ ಹೆಚ್ಚುವರಿ ಪ್ರಯೋಜನಗಳನ್ನೂ ಆನಂದಿಸಬಹುದು. ಈ ಯೋಜನೆಯು ನೀಡುವ 1.5GB ದೈನಂದಿನ ಡೇಟಾವನ್ನು ಬಳಸಿದ ಬಳಿಕ ಇಂಟರ್‌ನೆಟ್ ವೇಗವು 64 Kbps ಗೆ ಕಡಿಮೆಯಾಗುತ್ತದೆ ಎಂದು ಕಂಪೆನಿ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.

ದೇಶದ ಟೆಲಿಕಾಂನಲ್ಲಿ 60 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ರೀಪೇಡ್ ಯೋಜನೆಗಳು ಕಡಿಮೆ ಎಂದರೆ ತಪ್ಪಾಗದು. ಪ್ರತಿದಿನ 1.5GB ದೈನಂದಿನ ಡೇಟಾ ಮಾತ್ರ ಸಾಕು ಎನ್ನುವ ಗ್ರಾಹಕರಿಗೆ ಈ ರೀತಿಯ ಯೋಜನೆ ಸಿಗುವುದು ತುಸು ಕಷ್ಟವೇ.

ಈ ಏರ್‌ಟೆಲ್‌ನ 519 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯ ಲಾಭಗಳನ್ನು ಪರಾಮರ್ಶೆ ಮಾಡಿ ನೋಡುವುದಾದರೆ, ಈ ಯೋಜನೆಗೆ ಚಂದಾದಾರರಾಗುವ ಮುಖೇನ ಗ್ರಾಹಕರು ಪ್ರತಿದಿನ 9.15 ರೂ.ಗೆ ಅನೇಕ ಪ್ರಯೋಜನಗಳ ಸದುಪಯೋಗ ಪಡಿಸಿಕೊಳ್ಳಬಹುದು. ಈ ಯೋಜನೆಯಲ್ಲಿ ಪ್ರತಿ GB ಡೇಟಾಗೆ 5.76 ರೂ ವೆಚ್ಚ ತಗುಲುತ್ತದೆ. ಅಂದರೆ, ದೇಶದಲ್ಲಿ 4G ಡೇಟಾಗೆ ಪಾವತಿಸಲು ಸೂಕ್ತ ಮೊತ್ತ ಎಂದು ಅಂದಾಜಿಸಲಾಗಿದೆ.