Home Interesting ಬಾಲಕಿಯ ಪ್ರಾಣ ತೆಗೆದ ಪೆನ್ಸಿಲ್ ಸಿಪ್ಪೆ!!!

ಬಾಲಕಿಯ ಪ್ರಾಣ ತೆಗೆದ ಪೆನ್ಸಿಲ್ ಸಿಪ್ಪೆ!!!

Hindu neighbor gifts plot of land

Hindu neighbour gifts land to Muslim journalist

ಪೆನ್ಸಿಲ್ ಸಿಪ್ಪೆ ಮುಗ್ಧ ಬಾಲಕಿಯ ಪ್ರಾಣ ಬಲಿ ಪಡೆದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಹುಡುಗಿ ತನ್ನ ಬಾಯಿಯಲ್ಲಿ ಇಟ್ಟುಕೊಂಡು ಪೆನ್ಸಿಲ್ ಸಿಪ್ಪೆ ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸಣ್ಣ ಮಕ್ಕಳು ಕೆಲವೊಮ್ಮೆ ಆಟವಾಡುತ್ತ ಅಪಾಯಕ್ಕೆ ಸಿಲುಕುತ್ತಾರೆ. ಕೆಲವೊಮ್ಮೆ ಮಕ್ಕಳ ಅರಿವಿಗೆ ಬಾರದೆ ಅಚಾತುರ್ಯ ಸಂಭವಿಸಿ ತೊಂದರೆಯ ಸುಳಿಗೆ ಸಿಲುಕಿದ ಪ್ರಸಂಗಗಳು ಇವೆ. ಎಷ್ಟೊ ಬಾರಿ ಪೋಷಕರು ಮುಂಜಾಗ್ರತ ಕ್ರಮವಾಗಿ ಅಪಾಯಕಾರಿ ವಸ್ತುಗಳನ್ನು ಮಕ್ಕಳಿಂದ ದೂರ ಇರಿಸಿದರು ಕೂಡ ವಸ್ತುಗಳಿಂದ ಆಗುವ ಪರಿಣಾಮಗಳ ಅರಿವಿಲ್ಲದೆ ಅಪಾಯಕ್ಕೆ ಎಡೆ ಮಾಡಿಕೊಡುವ ಪ್ರಮೇಯ ಕೂಡ ಇದೆ. ಇದೆ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೆನ್ಸಿಲ್ ಸಿಪ್ಪೆಯಿಂದ ಹೆಣ್ಣು ಮಗು ಸಾವಿನ ದವಡೆಗೆ ಸಿಲುಕಿದ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಇದು ಹಮೀರ್‌ಪುರದ ಕೊತ್ವಾಲಿಯಲ್ಲಿರುವ ಹಳ್ಳಿಯಲ್ಲಿ ನಡೆದಿದ್ದು, ಇಲ್ಲಿ ವಾಸವಾಗಿರುವ ನಂದಕಿಶೋರ್ ಎಂಬವರ ಪುತ್ರ ಹಾಗೂ ಇಬ್ಬರು ಪುತ್ರಿಯರು ತಾರಸಿಯ ಮೇಲೆ ಓದುತ್ತಿದ್ದು, ಈ ವೇಳೆ ಆರು ವರ್ಷದ ಬಾಲಕಿ ಅಚಾತುರ್ಯದಿಂದ ಸಾವಿನ ದವಡೆಗೆ ಸಿಲುಕಿದ್ದಾಳೆ.

ಮಾಧ್ಯಮ ವರದಿಗಳ ಪ್ರಕಾರ, ಹುಡುಗಿ ತನ್ನ ಬಾಯಿಯಲ್ಲಿ ಇಟ್ಟುಕೊಂಡು ಪೆನ್ಸಿಲ್ ಸಿಪ್ಪೆ ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಈ ಬಾಲಕಿಗೆ ಆರು ವರ್ಷ ವಯಸ್ಸಾಗಿದ್ದು, ಮನೆಯ ಟೆರೇಸ್ ಮೇಲೆ ತನ್ನ ಸಹೋದರನೊಂದಿಗೆ ಓದುತ್ತಿದ್ದಳು ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಅವಳು ತನ್ನ ಪೆನ್ಸಿಲ್ ಅನ್ನು ಸಿಪ್ಪೆ ತೆಗೆಯಲು ಪ್ರಾರಂಭಿಸಿದ್ದು, ಬಾಯಿಗೆ ಕಟ್ಟರ್ ಅಂಟಿಸಿ ಪೆನ್ಸಿಲ್ ಸುಲಿಯುತ್ತಿದ್ದಳು ಎನ್ನಲಾಗಿದೆ.

ಆದರೆ, ದುರದೃಷ್ಟವಶಾತ್ ಸಿಪ್ಪೆಯು ಹೆಣ್ಣು ಮಗುವಿನ ಗಂಟಲಿಗೆ ಸಿಲುಕಿಕೊಂಡಿದೆ. ಈ ವೇಳೆ ಬಾಲಕಿಗೆ ಸಿಪ್ಪೆ ಅಂಟಿಕೊಂಡಿದ್ದರಿಂದ ಉಸಿರುಗಟ್ಟಿಸಲಾರಂಭಿಸಿದೆ. ಈ ವೇಳೆ ಮನೆಯವರು ನೋಡಿ, ಆಸ್ಪತ್ರೆಗೆ ಕರೆದೊಯ್ದರು ಕೂಡ ದಾರಿಮಧ್ಯೆ ಹುಡುಗಿ ಮೃತಪಟ್ಟಿದ್ದಾಳೆ . ಪೆನ್ಸಿಲ್ ಸಿಪ್ಪೆಯು ಬಾಲಕಿಯ ಶ್ವಾಸನಾಳದಲ್ಲಿ ಸಿಲುಕಿಕೊಂಡು, ಸಾವನ್ನಪ್ಪಿರುವುದಾಗಿ ವರದಿಯಾಗಿದೆ.