Home Interesting OMG : ಪವಾಡ | ಮೃತಪಟ್ಟ ಶಿಶುವಿಗೆ ಮರುಜೀವ ತುಂಬಿದ ವೈದ್ಯರು!!!

OMG : ಪವಾಡ | ಮೃತಪಟ್ಟ ಶಿಶುವಿಗೆ ಮರುಜೀವ ತುಂಬಿದ ವೈದ್ಯರು!!!

Hindu neighbor gifts plot of land

Hindu neighbour gifts land to Muslim journalist

ಸಣ್ಣ ಆರೋಗ್ಯ ಸಮಸ್ಯೆ ಕಂಡುಬಂದರೂ ಕೂಡ ವೈದ್ಯರನ್ನು ಭೇಟಿಯಾಗುವುದು ವಾಡಿಕೆ. ಅವರು ಹೇಳಿದ ಮಾತನ್ನು ಪಾಲಿಸುವುದು ಕ್ರಮ. ಹಾಗಾಗಿಯೇ ವೈದ್ಯರನ್ನು ‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತಿನಂತೆ ಗೌರವ ಕೊಟ್ಟು ದೇವರ ಪ್ರತಿರೂಪ ದಂತೆ ಕಾಣುವುದು ಸಹಜ. ಇದಕ್ಕೆ ನಿದರ್ಶನವೆಂಬಂತಹ ಘಟನೆಯೊಂದು ನಡೆದಿದೆ.

ಆಸ್ಪತ್ರೆಗೆ ದಾಖಲಾದ ರೋಗಿಗೆ ಇನ್ಮುಂದೆ ಔಷಧಿಯ ಅಗತ್ಯವಿಲ್ಲ ಕೇವಲ ಪ್ರಾರ್ಥನೆಯ ಅಗತ್ಯವಿದೆ ಎಂದು ವೈದ್ಯರು ಟಿವಿ ಸಿನಿಮಾಗಳಲ್ಲಿ ಹೇಳುವುದನ್ನು ಕಂಡಿರಬಹುದು . ಆದರೆ, ನೈಜ ಜೀವನದಲ್ಲಿ ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ ಎಂದರೆ ಅಚ್ಚರಿಯಾಗುತ್ತದೆ.

ಹೌದು. ವಾಸ್ತವದಲ್ಲಿ ಬ್ರಿಟನ್ ನಲ್ಲಿ ವಿಶೇಷವಾದ ಘಟನೆಯೊಂದು ಮುನ್ನಲೆಗೆ ಬಂದಿದೆ. ಬ್ರಿಟನ್ ನ ಮಹಿಳೆಯ ಅಕಾಲಿಕ ಹೆರಿಗೆ ವೇಳೆ ಪವಾಡ ಸದೃಶ ಘಟನೆ ನಡೆದಿದೆ. ಮಗು ಹೆರಿಗೆಯ ನಿಗದಿತ ಸಮಯಕ್ಕಿಂತ 10 ವಾರಗಳ ಮೊದಲು ಜನಿಸಿದ್ದು, ಮಗು (ನ್ಯೂ ಬಾರ್ನ್ ಬೇಬಿ) ಹುಟ್ಟಿದ ತಕ್ಷಣವೇ ಉಸಿರಾಟವನ್ನು ನಿಲ್ಲಿಸಿ ಬಿಟ್ಟಿದೆ.

ಈ ಮಗುವಿಗೆ ಹುಟ್ಟಿದ 17 ನಿಮಿಷಗಳ ಕಾಲ ಉಸಿರಾಡಲು ಸಾಧ್ಯವಾಗಲಿಲ್ಲ ಎಂದು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು.. ಈ ಸಂದರ್ಭ ಮಗುವಿನ ಉಸಿರನ್ನು ಮರಳಿ ತರಲು ವೈದ್ಯರು ನಿರಂತರವಾಗಿ ಹರಸಾಹಸ ಪಡಬೇಕಾಯಿತು. ಮತ್ತೊಂದೆಡೆ ಹುಟ್ಟಿದ ಕೂಡಲೇ ತಾಯಿಯ ಮಡಿಲು ಖಾಲಿಯಾಗುತ್ತಿರುವ ವಿಚಾರ ಕೇಳಿ ಕುಟುಂಬಸ್ಥರ ಧೈರ್ಯ ಕುಗ್ಗಿ, ಅಳಲು ತೋಡಿಕೊಳ್ಳುವ ಮೂಲಕ ಎಲ್ಲರೂ ದುಃಖದ ಛಾಯೆ ಆವರಿಸಿದೆ .

ಅಕಾಲಿಕವಾಗಿ ಜನಿಸಿದ ಶಿಶುವನ್ನು ಕೂಡಲೇ ವೈದ್ಯರ ತಂಡ ಲ್ಯಾಬ್‌ಗೆ ಕರೆದೊಯ್ಯುವ ಮೂಲಕ ಚಿಕಿತ್ಸೆ ಆರಂಭಿಸಿದ್ದಾರೆ. ಇದ್ದಕ್ಕಿದ್ದಂತೆ ಪವಾಡ ಸದೃಶ ರೀತಿಯಲ್ಲಿ ಮಗುವಿನ ಉಸಿರು ಮರುಕಳಿಸಿದೆ. ಮಗು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿದ್ದು, ಆ ಮಗುವನ್ನು ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು.

ವೈದ್ಯರ ಶತ ಪ್ರಯತ್ನ ಹಾಗೂ ದೇವರ ದಯೆಯಿಂದ ಮಗುವಿನ ಜೀವ ಉಳಿದಿದೆ. ಆದರೆ, ಮಗು ತುಂಬಾ ದುರ್ಬಲವಾಗಿದ್ದು, ಮಗುವಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅದಕ್ಕೆ ರಕ್ತವನ್ನು ನೀಡಲಾಗಿದೆ. ಇದರ ಜೊತೆಗೆ ಸಲಹೆ ನೀಡಿರುವ ವೈದ್ಯರು ಆಕ್ಸಿಜನ್ ಸಪೋರ್ಟ್ ನಲ್ಲಿ ಮಗುವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಿದ್ದಾರೆ.

ಇದರ ಜೊತೆಗೆ ಉಸಿರು ನಿಂತಿದ್ದರಿಂದ ಮಗುವಿನ ಮೆದುಳಿನ ಮೇಲೆ ಯಾವುದೇ ಪರಿಣಾಮ ಬೀರದಿರುವುದು ನಿಜಕ್ಕೂ ವಿಸ್ಮಯ ಎಂದರೆ ತಪ್ಪಾಗದು. 17 ನಿಮಿಷಗಳಲ್ಲಿ ಉಸಿರಾಟ ನಿಲ್ಲಿಸಿದ್ದ ಮಗು ವೈದ್ಯರ ಪ್ರಯತ್ನದಿಂದ ತಾಯಿಯ ಆಶ್ರಯ ಪಡೆಯುವಂತಾಗಿದೆ. ಈ ಮೂಲಕ ಪುಟ್ಟ ಹಸುಳೆಯ ಜೀವ ಉಳಿಸಿದ ವೈದ್ಯರ ತಂಡಕ್ಕೆ ಮನೆಯವರು ಧನ್ಯವಾದ ಸಲ್ಲಿಸಿದ್ದಾರೆ.