Home Breaking Entertainment News Kannada ಪರೀಕ್ಷಾ ಪತ್ರಿಕೆಯಲ್ಲಿ ಮತ್ತೆ ಕಾಂತಾರ ಪ್ರಶ್ನೆ | ನಟಿ ಸಪ್ತಮಿ ಗೌಡ ಹಾಕಿದ ಈ ಫೋಟೋ...

ಪರೀಕ್ಷಾ ಪತ್ರಿಕೆಯಲ್ಲಿ ಮತ್ತೆ ಕಾಂತಾರ ಪ್ರಶ್ನೆ | ನಟಿ ಸಪ್ತಮಿ ಗೌಡ ಹಾಕಿದ ಈ ಫೋಟೋ ವೈರಲ್‌

Hindu neighbor gifts plot of land

Hindu neighbour gifts land to Muslim journalist

ಕಾಂತಾರ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ವಿವರಿಸಬೇಕಾಗಿಲ್ಲ!! ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ಗಮನ ಹರಿಸುವಂತೆ ಮಾಡಿದ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲ, ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಸಿನಿಮಾ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇಂದಿಗೂ ಕನ್ನಡದ ಕಾಂತಾರ ಆರ್ಭಟ ಕಮ್ಮಿ ಆಗಿಲ್ಲ.

ಈ ಸಿನಿಮಾದಲ್ಲಿ ಅಡಕವಾಗಿರುವ ಅನೇಕ ಸೂಕ್ಷ್ಮ ವಿಚಾರಗಳು ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅದರಲ್ಲಿ ಕೂಡ ದೈವದ ಪಾತ್ರ ನೋಡುಗರ ಮೈ ಮನವೆಲ್ಲ ಪುಳಕಗೊಳ್ಳುವಂತೆ ಜೊತೆಗೆ ಅರಿವಿಲ್ಲದೆ ದೈವದ ಮೇಲಿನ ಭಕ್ತಿಯನ್ನು ಬಿಂಬಿಸುತ್ತದೆ. ಈ ಸಿನೆಮಾದ ಬಗ್ಗೆ ಮಕ್ಕಳಲ್ಲಿ ಕೂಡ ಪ್ರಭಾವ ಬೀರಿದೆ ಎಂದರೆ ತಪ್ಪಾಗದು.

ಹೌದು!!.. ಇತ್ತೀಚೆಗೆ ಪರೀಕ್ಷೆ ಪತ್ರಿಕೆಯೊಂದರಲ್ಲಿ ಕಾಂತಾರನಿಗೆ ಸಂಬಂಧಿತ ಪ್ರಶ್ನೆ ಕೇಳಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ದ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ರಿಷಬ್ ಶೆಟ್ಟಿ ನಿರ್ದೇಶನ, ಚಿತ್ರಕಥೆ ಮತ್ತು ಅಭಿನಯದ ಕಾಂತಾರ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಈ ಚಿತ್ರ ಭಾರೀ ಕಲೆಕ್ಷನ್ ಮಾಡಿದ್ದು, ಸದ್ಯ ಈ ಸಿನಿಮಾ ಎಲ್ಲೆಡೆ ಚರ್ಚೆಯಾಗುತ್ತಿದೆ.

ಕಾಂತಾರ ಹವಾ ಈಗ ಶಿಕ್ಷಣ ಕ್ಷೇತ್ರಕ್ಕೂ ಪಸರಿಸಿದ್ದು, ಇತ್ತೀಚೆಗಷ್ಟೇ ಪರೀಕ್ಷಾ ಪತ್ರಿಕೆಯಲ್ಲಿ ಕಾಂತಾರ ಪ್ರಶ್ನೆಯೊಂದು ವೈರಲ್ ಆಗುತ್ತಿದೆ. ಈ ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದು, ಕರ್ನಾಟಕ ಹಾಲು ಮಹಾಮಂಡಳ ಇಲಾಖೆ ಇತ್ತೀಚೆಗೆ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕಾಂತಾರ ಸಿನೆಮಾದ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ.

ಅದರಲ್ಲಿ ಇತ್ತೀಚೆಗೆ ಬಿಡುಗಡೆಯಾದ ಕಾಂತಾರ ಸಿನಿಮಾ ಯಾವ ವಿಷಯವನ್ನು ಆಧರಿಸಿದೆ ಎಂಬ ಪ್ರಶ್ನೆ ಕೇಳಲಾಗಿದ್ದು, ಜಲ್ಲಿಕಟ್ಟು, ಭೂತಕೋಲ, ಯಕ್ಷಗಾನ, ದಮ್ಮಾಮಿ ಎಂಬ ಆಯ್ಕೆಯನ್ನು ಕೂಡ ನೀಡಲಾಗಿದೆ. ಈ ಕುರಿತಾದ ಚಿತ್ರವನ್ನು ಕಾಂತಾರ ನಾಯಕಿ ಸಪ್ತಮಿ ಗೌಡ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶದಾದ್ಯಂತ ಸಂಚಲನ ಮೂಡಿಸಿದ ಕಾಂತಾರ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಇನ್ನು ಹಿಂದಿಯಲ್ಲಿ 75 ಕೋಟಿ ಹಾಗೂ ತೆಲುಗಿನಲ್ಲಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಪ್ರತಿಯೊಬ್ಬರ ಮನದಲ್ಲಿ ಕೂಡ ತನ್ನದೇ ಛಾಪು ಮೂಡಿಸಿರುವುದಂತು ಸ್ಪಷ್ಟ.