Home Entertainment Ration Card : ಈಗ ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸೋದು ಮತ್ತಷ್ಟು ಸುಲಭ!

Ration Card : ಈಗ ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸೋದು ಮತ್ತಷ್ಟು ಸುಲಭ!

Hindu neighbor gifts plot of land

Hindu neighbour gifts land to Muslim journalist

ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ . ಜನತೆಯ ಆರ್ಥಿಕ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸಿ ಅದರಂತೆ ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ, ಪಡಿತರ ಚೀಟಿ ವಿತರಣೆ ಮಾಡಿ ನೆರವಾಗುತ್ತಿವೆ. ಇದೀಗ ಪಡಿತರ ಕುರಿತಾದ ಮುಖ್ಯ ಮಾಹಿತಿ ನೀವು ತಿಳಿದುಕೊಳ್ಳುವುದು ಉತ್ತಮ.

ಪಡಿತರ ಚೀಟಿ ಹೊಂದಿರುವ ಮೂರು ಸದಸ್ಯರಿರುವ ಕುಟುಂಬ (Family) ಕ್ಕೆ ಸರ್ಕಾರ 35 ಕೆಜಿ ಮತ್ತು ಮೂರಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಪಡಿತರ ಚೀಟಿ ಪಡಿತರ ಪಡೆಯಲು ಮಾತ್ರವಲ್ಲದೆ (Benefitದಾಖಲೆ ರೂಪದಲ್ಲಿ ಕೂಡ ನೆರವಾಗುತ್ತಿವೆ. ಅನೇಕ ಸರ್ಕಾರಿ ಸೇವೆಗಳನ್ನು ಪಡೆಯಲು ರೇಷನ್ ಕಾರ್ಡನ್ನು ದಾಖಲೆಯಾಗಿ ಬಳಕೆ ಮಾಡಬಹುದಾಗಿದ್ದು, ಮನೆಯಲ್ಲಿರುವ ಮಗುವಿನ ಹೆಸರನ್ನು ಕೂಡ ರೇಷನ್ ಕಾರ್ಡಿನಲ್ಲಿ ಸೇರಿಸುವುದು ಅವಶ್ಯಕ.

ಹೌದು !!!ಪಡಿತರ ಚೀಟಿಯಲ್ಲಿ ಮನೆಯ ಎಲ್ಲ ಸದಸ್ಯರ ಹೆಸರು ಸೇರಿಸಬೇಕಾಗಿದ್ದು, ಮನೆಯಲ್ಲಿರುವ ಮಕ್ಕಳ ಹೆಸರನ್ನು ರೇಷನ್ ಕಾರ್ಡಿನಲ್ಲಿ ಸೇರಿಸೋದು ಹೇಗೆ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದ್ದರೆ ಉತ್ತರ ಇಲ್ಲಿದೆ.

ಪಡಿತರ ಚೀಟಿಯಲ್ಲಿ ಮಕ್ಕಳ ಹೆಸರನ್ನು ಸೇರಿಸುವುದು ತುಂಬಾ ಸರಳ ಹಾಗೂ ಸುಲಭ ವಿಧಾನವಾಗಿದ್ದು, ನೀವು ಆನ್ಲೈನ್ (Online) ಮೂಲಕ ಹಾಗೂ ಆಫ್‌ಲೈನ್‌ (Offline) ಮೂಲಕ ಎರಡೂ ರೀತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆನ್ಲೈನ್ ಮೂಲಕ ರೇಷನ್ ಕಾರ್ಡ್ ಗೆ ಹೆಸರು ಸೇರಿಸುವ ವಿಧಾನ :

ಆನ್‌ಲೈನ್‌ನಲ್ಲಿ ಮಗುವಿನ ಹೆಸರನ್ನು ಸೇರಿಸಲು ಇಚ್ಛಿಸಿದರೆ , ನಿಮ್ಮ ರಾಜ್ಯದ ಆಹಾರ ಇಲಾಖೆ ವೆಬ್ ಸೈಟ್ ಗೆ ಹೋಗುವ ಮೂಲಕ ನೀವು ಹೆಸರು ಸೇರಿಸಬೇಕಾಗಿದ್ದು, ನೀವು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವವರಾಗಿದ್ದಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಫ್ರಿಂಟ್ ತೆಗೆದುಕೊಳ್ಳಲು ಅವಕಾಶವಿದೆ.
ಅರ್ಜಿಯ ಜೊತೆಗೆ ಅಗತ್ಯ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸಲು ಪಾಲಕರ ಆಧಾರ್ ಕಾರ್ಡ್ ನಕಲನ್ನು ನೀಡಬೇಕಾಗುತ್ತದೆ. ಮಗುವಿನ ಜನನ ಪ್ರಮಾಣಪತ್ರ, ಮಗುವಿನ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ, ಮೊಬೈಲ್ ನಂಬರ್ ಬೇಕಾಗುತ್ತದೆ. ಮಕ್ಕಳ ಹೆಸರನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡುವುದರಿಂದ ಕುಟುಂಬಕ್ಕೆ ನೆರವಾಗುವ ಜೊತೆಗೆ ಪಡಿತರ ಕೊರತೆ ಎದುರಾಗದು.

ಪಡಿತರ ಚೀಟಿಯಲ್ಲಿ ಮಕ್ಕಳ ಹೆಸರು ಸೇರಿಸಲು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ

ನಿಮ್ಮ ಹತ್ತಿರದ ಆಹಾರ ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಪಡಿತರ ಚೀಟಿಯಲ್ಲಿ ಸದಸ್ಯರ ಹೆಸರನ್ನು ಸೇರಿಸಲು ಅರ್ಜಿ ತೆಗೆದುಕೊಂಡು ಫಾರ್ಮ್ ಭರ್ತಿ ಮಾಡಬೇಕಾಗಿದೆ.ಆ ಬಳಿಕ ಅರ್ಜಿಯಲ್ಲಿ ಕೇಳಿದ ಎಲ್ಲ ವಿವರವನ್ನು ಭರ್ತಿ ಮಾಡಬೇಕಾಗಿದ್ದು, ಅದಕ್ಕೆ ಅಗತ್ಯವಿರುವ ದಾಖಲೆಯನ್ನು ಲಗತ್ತಿಸಬೇಕಾಗುತ್ತದೆ. ಈ ಎಲ್ಲ ಕೆಲಸ ಪೂರ್ಣಗೊಂಡ ಮೇಲೆ ನೀವು ಫಾರ್ಮನ್ನು ಆಹಾರ ಸರಬರಾಜು ಕೇಂದ್ರಕ್ಕೆ ಸಲ್ಲಿಕೆ ಮಾಡಬೇಕಾಗಿದ್ದು ಫಾರ್ಮ್ ಪಡೆದ ಸಿಬ್ಬಂದಿ ನೀಡುವ ರಸೀದಿಯನ್ನುಪಡೆಯಬಹುದು. ಈ ರಸೀದಿಯನ್ನು ನೀವು ಸುರಕ್ಷಿತವಾಗಿಟ್ಟುಕೊಂಡರೆ ಪಡಿತರ ಚೀಟಿಯ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.