Home Business ಪಡಿತರ ಚೀಟಿದಾರರೇ ಇಂದಿನಿಂದ ಈ ಯೋಜನೆಯಡಿ ಉಚಿತ ಆಹಾರ ಧಾನ್ಯ ಲಭ್ಯ

ಪಡಿತರ ಚೀಟಿದಾರರೇ ಇಂದಿನಿಂದ ಈ ಯೋಜನೆಯಡಿ ಉಚಿತ ಆಹಾರ ಧಾನ್ಯ ಲಭ್ಯ

Hindu neighbor gifts plot of land

Hindu neighbour gifts land to Muslim journalist

ಕೇಂದ್ರವು ಇಂದಿನಿಂದ ಒಂದು ವರ್ಷದವರೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ(NFSA) ಅಡಿಯಲ್ಲಿ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ತೀರ್ಮಾನ ಕೈಗೊಂಡಿದೆ.

ಸರ್ಕಾರ ರೈತರಿಗೆ ನೆರವಾಗಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಆರ್ಥಿಕ ಸಂಕಷ್ಟ ಎದುರಿಸಲು ಸಾಲ ಸೌಲಭ್ಯ, ಉಳಿತಾಯ ಯೋಜನೆ , ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡು ನೆರವಾಗುತ್ತಿದೆ. ಇದರ ಜೊತೆಗೆ ಪಡಿತರ ವಿತರಣೆ ಕೂಡ ಮಾಡುತ್ತಿದೆ.ಕೇಂದ್ರ ಸರ್ಕಾರವು ಜಾರಿಗೆ ತಂದ ಹಲವಾರು ಯೋಜನೆಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ಒಂದಾಗಿದ್ದು, ರೈತರಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ಉದ್ದೇಶದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಕೂಡ ಆರಂಭಿಸಿ ನೆರವಾಗುತ್ತಿವೆ.

2023 ರ ಅವಧಿಯಲ್ಲಿ 81 ಕೋಟಿ ಫಲಾನುಭವಿಗಳಿಗೆ NFSA ಅಡಿಯಲ್ಲಿ ಧಾನ್ಯಗಳನ್ನು ಉಚಿತವಾಗಿ ನೀಡಲು ಕ್ಯಾಬಿನೆಟ್ ನಿರ್ಣಯ ಕೈಗೊಂಡಿದೆ.ಈ ಯೋಜನೆಯಡಿಯಲ್ಲಿ, ಅಂತ್ಯೋದಯ ಯೋಜನಾ ಕುಟುಂಬಗಳು ಹಾಗೂ ಆದ್ಯತೆಯ ಮನೆಯ ವ್ಯಕ್ತಿಗಳು ಸೇರಿದಂತೆ ಎಲ್ಲಾ NFSA ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಉಚಿತ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಲಿದೆ.

ದೇಶದಾದ್ಯಂತ ಐದು ಲಕ್ಷಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳ ಮುಖಾಂತರ ಆಹಾರಧಾನ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ. ಒಂದು ವರ್ಷದಲ್ಲಿ ಎರಡು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಹಾರ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡಲು ತೀರ್ಮಾನ ಕೈಗೊಂಡಿದೆ.

ಗ್ರಾಹಕರ ವ್ಯವಹಾರಗಳ ಸಚಿವಾಲಯದ ಅನುಸಾರ, ಸರ್ಕಾರವು ರಾಷ್ಟ್ರದ ಜನರಿಗೆ ಸಾಮಾಜಿಕ ಮತ್ತು ಕಾನೂನುಬದ್ಧ ಬದ್ಧತೆಯ ಮೂಲಕ ಗುಣಮಟ್ಟದ ಆಹಾರ ಧಾನ್ಯಗಳ ಲಭ್ಯತೆಯನ್ನು ಖಚಿತ ಪಡಿಸಿಕೊಂಡು ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಖಾತ್ರಿ ಮಾಡಲು ಮುಂದಾಗಿದೆ.

ಈ ಯೋಜನೆಯು ಕಾಯಿದೆಯನ್ನು ಕಟ್ಟುನಿಟ್ಟಾಗಿ ಏಕರೂಪದ ಅನುಷ್ಠಾನವನ್ನು ಮಾಡಲಿದ್ದು, ಉಚಿತ ಆಹಾರ ಧಾನ್ಯಗಳು ಏಕಕಾಲದಲ್ಲಿ ದೇಶಾದ್ಯಂತ ಒನ್ ನೇಷನ್ ಒನ್ ಪಡಿತರ ಚೀಟಿಯ ಅಡಿಯಲ್ಲಿ ಪೋರ್ಟಬಿಲಿಟಿಯ ಏಕರೂಪದ ಅನುಷ್ಠಾನ ಮಾಡಲಾಗುತ್ತದೆ.