ಕರಾವಳಿಯಲ್ಲಿ ಮೇಘ ಸ್ಫೋಟವಾಗುವ ಸಾಧ್ಯತೆ | ದಡಕ್ಕೆ ಇಂದೇ ಮರಳುವಂತೆ ಮೀನುಗಾರರಿಗೆ ಸೂಚನೆ

ನವದೆಹಲಿ : ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಭಾರೀ ಚಂಡಮಾರುತದಿಂದಾಗಿ ಕರ್ನಾಟಕ ಕರಾವಳಿ ತೀರದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

 

ಕರ್ನಾಟಕ, ಕೇರಳ, ಲಕ್ಷದ್ವೀಪ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಫಾಕ್ಸ್ ಸಂದೇಶ ಕಳುಹಿಸಿ ಕರಾವಳಿ ಭಾಗದಲ್ಲಿ ಕಟ್ಟೆಚ್ಚರದಲ್ಲಿರುವಂತೆ ಕೇಂದ್ರ ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗ ಸೂಚಿಸಿದೆ.

ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪದಲ್ಲಿ ಮೇ 31 ಮತ್ತು 1 ರಂದು ಭಾರೀ ಮಳೆಯಾಗುವ ಸಂಭವ ಇದ್ದರೆ, ಮಹಾರಾಷ್ಟ್ರದಲ್ಲಿ ಜೂನ್ 2 ರಿಂದ 4 ರವರೆಗೆ ಮಳೆಯಾಗಲಿದೆ. ಗುಜರಾತಿನಲ್ಲಿ ಜೂನ್ 3 ರಿಂದ 5 ರವರೆಗೆ ಮಳೆಯಾಗಲಿದೆ ಎಂದು ಹೇಳಿದೆ.

ಕರ್ನಾಟಕದಲ್ಲಿ, ಜೂನ್ 2 ರ ವೇಳೆಗೆ  90 ರಿಂದ100 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು. ಈ ಸಮಯದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಮತ್ತು ಮೀನುಗಾರಿಕೆಗೆ ತೆರಳಿದ ಮೀನುಗಾರು ಇಂದೇ ಮರಳಿ ದಡ ಸೇರಬೇಕು ಎಂದು ಕೇಂದ್ರದಿಂದ ಸೂಚಿಸಲಾಗಿದೆ.

Leave A Reply

Your email address will not be published.