New Delhi: ಕುಂಭಮೇಳಕ್ಕೆ ತೆರಳುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

Share the Article

New Delhi: ಮಹಾ ಕುಂಭಮೇಳಕ್ಕೆಂದು ಭಕ್ತರನ್ನು ಕೊಂಡೊಯ್ಯುತ್ತಿದ್ದ ತಪತಿ ಗಂಗಾ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮಹಾರಾಷ್ಟ್ರದ ಜಲ್ಗಾಂವ್‌ ನಿಲ್ದಾಣದ ಬಳಿ ಭಾನುವಾರ ಕಲ್ಲು ತೂರಾಟ ನಡೆದಿರುವ ಘಟನೆ ನಡೆದಿದೆ.

ಬಿ ಬೋಗಿಯ ಕಿಟಕಿಗೆ ಹಾನಿಯಾಗಿದ್ದು, ಈ ಸಂದರ್ಭದಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಯ ಕುರಿತು ರೈಲ್ವೇ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಸೂರತ್‌-ಛಾಪ್ರಾ ತಪತಿ ಗಂಗಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕೆಲವು ಪ್ರಯಾಣಿಕರು ಕಲ್ಲು ತೂರಾಟ ಮಾಡಿದ್ದರು ಎಂದು ಹೇಳಲಾಗಿದೆ. ಕುಂಭಮೇಳಕ್ಕೆ ಪ್ರಯಾಗ್ರಾಜ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಜಲ್ಗಾಂವ್‌ ನಿಲ್ದಾಣದಿಂದ ಹೊರಟ ರೈಲು ಮೂರು ಕಿಲೋ ಮೀಟರ್‌ ದಾಟಿದ ನಂತರ ಕಲ್ಲು ಎಸೆಯಲಾಗಿರುವ ಕುರಿತು ಪೊಲೀಸರು ಹೇಳಿದ್ದಾರೆ.

Comments are closed.