ಅಜ್ಜಾವರ ಗ್ರಾಮದ ಮುಳ್ಯ | ಧನಂಜಯ ಅಡ್ಪಂಗಾಯರವರ ನೇತೃತ್ವದಲ್ಲಿ ಆಹಾರ ಸಾಮಗ್ರಿ ವಿತರಣೆ

ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಮುಳ್ಯ ಪ.ಜಾತಿ ಕಾಲನಿಯ 50 ಮನೆಗಳಿಗೆ ಆಹಾರ ಸಾಮಗ್ರಿಯ ಕಿಟ್ ಗಳನ್ನು ಮೇ 31 ರಂದು ವಿತರಿಸಲಾಯಿತು. ಕೃಷಿಕರಾದ ರಾಜೇಶ್ ಭಟ್ ಎಲಿಮಲೆ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಜ್ಜಾವರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಸುಧೀರ್ ರೈ ಮೇನಾಲ, ಮಾಜಿ ಉಪಾಧ್ಯಕ್ಷ ಹಸೈನಾರ್ ಹಾಜಿ ಗೋರಡ್ಕ, ಮಾಜಿ ಸದಸ್ಯ ಮೋಹನ ಮುಳ್ಯ, ರಂಜಿತ್ ರೈ ಮೇನಾಲ, ರಾಧಾಕೃಷ್ಣ ಕಾಂತಮಂಗಲ, ವೆಂಕಟರಮಣ ಭಟ್ ಮುಳ್ಯ, ಶ್ರೀ ರಾಮ್ ಮುಳ್ಯ, ರಾಘವ ಮುಳ್ಯ, ಸುಂದರ ನೆಹರೂ ನಗರ, ವಿಶ್ವನಾಥ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.