ಹಸಿವು ಮುಕ್ತ ಕರ್ನಾಟಕದ ಕಡೆ ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ನ ನಡೆ

ದೇಶ ಸೇವೆ ಮಾಡಬೇಕು ಎಂದುಕೊಂಡವರು ಸೈನಿಕನಾಗಿ ದೇಶದ ಗಡಿಯಲ್ಲಿ ಹೋರಾಡಬೇಕೆಂದಿಲ್ಲ. ಸೈನಿಕನಾಗದೆ ದೇಶದ ಒಳಗೆ ಸಮಾಜ ಸೇವೆ ಮಾಡುವ ಪ್ರತಿಯೊಬ್ಬ ನಾಗರಿಕನು ಒಬ್ಬ ಸೈನಿಕನೇ ಸರಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹೀಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ತನಗೆ ಬರುವ ಒಂದಿಷ್ಟು ಆದಾಯವನ್ನು ಬಡಜನರಿಗಾಗಿ ಮೀಸಲಿಟ್ಟು, ಹಗಲು-ರಾತ್ರಿಯೆನ್ನದೆ ಬಡಜನರಿಗಾಗಿ ದುಡಿಯುವ, ಬಡ ಜನರ ಕಷ್ಟಗಳಿಗೆ ಸ್ಪಂದಿಸುವ ಒಂದು ಸಂಸ್ಥೆ ಜನಸ್ನೇಹಿ ಚಾರಿಟಬಲ್ ಟ್ರಸ್ಟ್.


Ad Widget

ಯಾವುದೇ ರೀತಿಯ ಪ್ರಚಾರವಿಲ್ಲದೆ ಸಾವನ್ನು ತನ್ನ ಕೈಯಲ್ಲಿ ಇಟ್ಟುಕೊಂಡು ಶ್ರಮಿಸುತ್ತಿರುವ ನನ್ನ ಗೆಳೆಯ ಮತ್ತು ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕರು ಮತ್ತು. ಅಧ್ಯಕ್ಷರಾದಂತಹ ಯೋಗೇಶ್ ರವರ ಒಂದು ಕಿರು ಪರಿಚಯ.

Ad Widget

Ad Widget

Ad Widget

ಯೋಗೇಶ್ ಟ್ಯಾಕ್ಸಿ ಚಾಲಕರು ಅನಾಡ್ಗು ಗ್ರಾಮ
ಊರು : ಅನಾಡ್ಗು ಗ್ರಾಮ, ಜಡೆ ಮಾಯಸಂದ್ರ ಹೋಬಳಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆಯ ಗಂಗಪ್ಪ ಮತ್ತು ಗೌರಮ್ಮ ದಂಪತಿಗಳ ಸುಪುತ್ರ . ಗಂಗಪ್ಪ ಮತ್ತು ಗೌರಮ್ಮ ಇಬ್ಬರೂ ಸಹ ರಸ್ತೆಬದಿ ವ್ಯಾಪಾರಸ್ಥರು. ಕಡುಬಡತನದಲ್ಲಿ ಹುಟ್ಟಿದ ಯೋಗೀಶ್ ಚಿಕ್ಕವಯಸ್ಸಿನಲ್ಲೇ ಹೋಟೆಲ್ನಲ್ಲಿ ಕ್ಲೀನರ್ ಆಗಿ

ಯೋಗೇಶ್ ರವರ ಕುಟುಂಬದಲ್ಲಿ ಹುಟ್ಟಿನಿಂದಲೇ ಕಡು ಬಡತನ ಹಾಗಾಗಿ ಇವರು ಚಿಕ್ಕ ವಯಸ್ಸಿನಲ್ಲಿಯೇ ಹೋಟೆಲ್ ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಾ , ಇನ್ನು ಹಲವು ಕಷ್ಟದ ಕೆಲಸಗಳನ್ನು ಮಾಡುತ್ತಾ ,ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ,ಅನುಭವಿಸಿ ಮೇಲೆ ಬಂದವರು .

ಉಳ್ಳವರು ಆಸ್ತಿ,ಅಂತಸ್ತು,ಅಧಿಕಾರ,ಸುಖ,ಆಡಂಬರಗಳೊಂದಿಗೆ ನಾನು ನನ್ನ ಸಂಸಾರ ಎಂದು ಮಾನವೀಯತೆಯನ್ನು ಬಿಟ್ಟು ಮೆರೆಯುತ್ತಿರುವ ಇಂತಹ ಕಾಲದಲ್ಲಿ ,ಯೋಗೇಶ್ ರವರು ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಬೇಕೆಂಬ ಹಂಬಲದೊಂದಿಗೆ ತನ್ನ ಸ್ನೇಹಿತರ ಜೊತೆಗೂಡಿ ಜನಸ್ನೇಹಿ ಚಾರಿಟಬಲ್ ಟ್ರಸ್ಟನ್ನು ಪ್ರಾರಂಭಿಸಿ ಎರಡು ಮೂರು ವರ್ಷಗಳು ಸಂದಿವೆ . ಕಳೆದ 2- 3 ವರ್ಷಗಳಿಂದ ವರ್ಷಗಳಿಂದ ಯಾವ ಪ್ರಚಾರವೂ ಇಲ್ಲದೇ ಮತ್ತು ದಾನಿಗಳು ಸ್ವ ಅಸಕ್ತಿಯಿಂದ ಕೊಟ್ಟ ಹಣವನ್ನಲ್ಲದೇ ಯಾರಲ್ಲಿಯೂ ಹಣಕ್ಕಾಗಿ ಗೋಗರೆದು ಅಂಗಲಾಚದೆ ತನ್ನ ಟ್ಯಾಕ್ಸಿಯ ಕೆಲಸದಿಂದ ಬಂದ ಹಣ ಮತ್ತು ಸ್ನೇಹಿತರ ಹಣದಿಂದ ಅನ್ನದಾನ,ಅನಾಥಾಶ್ರಮ,ಮಕ್ಕಳಾಶ್ರಮ, ಮತ್ತು ತುರ್ತು ರಕ್ತದ ಸಂದರ್ಭದಲ್ಲಿ ಕೂಡ ರಕ್ತದ ಅರೆಂಜ್ ಮಾಡುತ್ತಾರೆ.
ಇನ್ನೊಂದು ಬಹು ಮುಖ್ಯ ಪುಣ್ಯ ಕಾರ್ಯವೇನೆಂದರೆ ಆ ದೇವನ ದಯೆಯಿಂದ ಸಾವಿನ ಅಂಚಿನಲ್ಲಿ ಇದ್ದ 1200 ಕ್ಕೂ ಜನರ ಪ್ರಾಣವನ್ನು ಕಾಪಾಡಿದ್ದಾರೆ. ಅಲ್ಲದೆ ಪ್ರತಿದಿನ 600-700 ಹಸಿದ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಯಾವುದೇ ಒಂದು ಪ್ರಚಾರಕ್ಕಾಗಿ ಆಸೆ ಪಡದೆ ಹಾಗೂ ಟ್ರಸ್ಟ್ ನ ಹೆಸರಿನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಲ್ಲಿ ಹಣಕ್ಕಾಗಿ ಅಂಗಲಾಚದೆ ಇವರದೇ ಒಂದು ಸ್ನೇಹಿತ ವೃಂದವನ್ನು ಕಟ್ಟಿಕೊಂಡು ಸಾವನ್ನೇ ತನ್ನ ತೆಕ್ಕೆಯಲ್ಲಿ ಕೂರಿಸಿಕೊಂಡು ಹಸಿವು ಮುಕ್ತ ಕರ್ನಾಟಕಕ್ಕಾಗಿ ಶ್ರಮಿಸುತ್ತಿರುವ ಈ ನನ್ನ ಹೆಮ್ಮೆಯ ಗೆಳೆಯ ಯೋಗೇಶ್ ಮತ್ತು ತಂಡದವರಿಗೆ ನನ್ನ ಹೃದಯಂತರಾಳದ ಹೃತ್ಪೂರ್ವಕ ಅಭಿನಂದನೆಗಳು .

ಹಾಗೆ ಹಸಿದವರ ಹೊಟ್ಟೆ ತುಂಬಿಸೋ ಈ ನನ್ನ ಗೆಳೆಯನಿಗೆ ಆ #ದೇವನು ಅವರ ಹೊಟ್ಟೆಯನ್ನು ತಣ್ಣಗಿರಿಸಿ ನೂರ್ಕಾಲ ಕಾಪಾಡಲಿ. ಗೆಳೆಯ #ಯೋಗೇಶ್ ಮತ್ತು ತಂಡದವರಿಗೆ ನನ್ನ ಹೃದಯಂತರಾಳದ #ಸಲಾಮ್.
ಸಹೋದರ ಬಂಧುಗಳೇ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ನಮ್ಮ ಮನೆ ಮಗ ಯೋಗೇಶ್ ರವರಿಗೆ ನೀವುಗಳು ನಿಮ್ಮ ತನು,ಮನ,ಧನಗಳಿಂದ ಸಹಕರಿಸಬೇಕಾಗಿ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಸಹೋದರರೇ.

ದಯೇ ಇಲ್ಲದ ಧರ್ಮ ಯಾವುದಯ್ಯಾ ದಯೆಯೇ ಧರ್ಮದ ಮೂಲವಯ್ಯ.

ಕಾರಣಾಂತರಗಳಿಂದ ಟ್ರಸ್ಟ್ ನ ಖಾತೆ ಚಾಲ್ತಿಯಲ್ಲಿರುವುದಿಲ್ಲ ಹಾಗಾಗಿ ಯೋಗೇಶ್ ರವರ ಫೋನ್ ಪೇ ನಂಬರ್ ಮತ್ತು ಇವರನ್ನು ಸಂಪರ್ಕಿಸಬಹುದಾದ ನಂಬರ್
9686879752

ಹೆಚ್ಚಿನ ಮಾಹಿತಿಗಾಗಿ https://www.facebook.com/yogi.yogendra.3979

ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ನ ಆಫೀಶಲ್ ಪೇಜ್:https://www.facebook.com/108153280666528/posts/165607151587807/?sfnsn=wiwspwawes&extid=XfMxtnyy6SpTLbGM&d=w&vh=e

ಸ್ನೇಹಿತರೇ ಹಸಿವು ಮುಕ್ತ ಕರ್ನಾಟಕಕ್ಕಾಗಿ ವೀರಯೋಧ ನಂತೆ ಪಣತೊಟ್ಟು ನಿಂತಿರುವ ಯೋಗೇಂದ್ರ ಮತ್ತು ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ಅವರಿಗೆ ನಮ್ಮ ಬೆಂಬಲ ಬೇಕಾಗಿದೆ.
ಫೇಸ್ ಬುಕ್ಕಲ್ಲಿ ಅವರನ್ನು ಲೈಕ್ ಮಾಡಿ. ಯೂಟ್ಯೂಬಲ್ಲಿ ಅವರ ಚಾನಲನ್ನು ಸಬ್ಸ್ಕ್ರೈಬ್ ಮಾಡಿ. ಅವರ ಸಮಾಜಸೇವೆಯನ್ನು ನೋಡಿ ನಾವುಗಳು ಕೂಡ ನಮ್ಮನ್ನು ಇಂತಹ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಆಗಲಿ

ಮೊಹಮ್ಮದ್ ಸುಹೇಲ್

error: Content is protected !!
Scroll to Top
%d bloggers like this: