ರಾಮ್ ಸೇನಾ(ರಿ) ಕರ್ನಾಟಕ ಇದರ ನೂತನ ಘಟಕ ಕಾರ್ಕಳದ ಕುಂಟಾಡಿಯಲ್ಲಿ ಉದ್ಘಾಟನೆ

ಕಾರ್ಕಳ: (ಮೇ-30) ಪ್ರಸಾದ್ ಅತ್ತಾವರ್ ನೇತೃತ್ವದ ರಾಮ್ ಸೇನಾ(ರಿ) ಕರ್ನಾಟಕ ಇದರ ನೂತನ ಘಟಕವು ಕಾರ್ಕಳ ತಾಲೂಕಿನ ಕುಂಟಾಡಿಯಲ್ಲಿ ಉಡುಪಿ ಜಿಲ್ಲಾ ರಾಮ್ ಸೇನಾ ಮುಖಂಡರ ನೇತೃತ್ವದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪನಮನ ಮತ್ತು ದೀಪ ಬೆಳಗಿಸುವ ಮುಖಾಂತರ ಊರ ಹಿರಿಯರಾದ ಶ್ರೀ ಶೇಖರ್ ಕೋಟ್ಯಾನ್ ಕುಂಟಾಡಿಯವರು ಉದ್ಘಾಟನೆ ನೆರವೇರಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರಾಮ್ ಸೇನಾ ಕಾನೂನು ಸಲಹೆಗಾರರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ,ಉಡುಪಿ ಜಿಲ್ಲಾ ಮುಖಂಡರಾದ ಯತೀಶ್ ಸಾಲಿಯಾನ್,ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೀಪಕ್ ಮೂಡುಬೆಳ್ಳೆ,ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಹರೀಶ್ ಕಳತ್ತೂರು, ಕಾರ್ಕಳ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ದಿನಕರ್ ನಂದಳಿಕೆ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ ಈ ಕೆಳಗಿನಂತಿವೆ.
ರಾಮ್ ನೂತನ ಕುಂಟಾಡಿ ಘಟಕದ ಅಧ್ಯಕ್ಷರಾಗಿ ರಮೇಶ್ ಕುಂಟಾಡಿ,ಉಪಾಧ್ಯಕ್ಷರಾಗಿ ಚಿರಾಗ್ ಕುಂಟಾಡಿ,ಪ್ರಧಾನ ಕಾರ್ಯದರ್ಶಿಯಾಗಿ ಪ್ರಸನ್ನ ಕೋಟಿಬೆಟ್ಟು,ಸಂಘಟನಾ ಕಾರ್ಯದರ್ಶಿಯಾಗಿ ರಕ್ಷಿತ್ ಎಚ್ ಕೈಕಂಬ,ಜೊತೆ ಕಾರ್ಯದರ್ಶಿಯಾಗಿ ನಿಖಿಲ್ ಕುಂಟಾಡಿ,ಸಾಮಾಜಿಕ ಜಾಲತಾಣ ಪ್ರಮುಖರಾಗಿ ಚೇತನ್ ಕೈಕಂಬ,ಸುತೀಶ್ ಕಾರ್ಕಳ, ವಿದ್ಯಾರ್ಥಿ ಪ್ರಮುಖರಾಗಿ ಕಾರ್ತಿಕ್ ಕುಂಟಾಡಿ, ಗೋರಕ್ಷಾ ಪ್ರಮುಖ್ ರಾಗಿ ಮೆಲ್ಕಮ್ ಅವಿನಾಶ್ ರವರು ಆಯ್ಕೆಗೊಂಡರು.