ಕಡಬ | ಕಾಡಾನೆ ದಾಳಿಯಿಂದ ಕೃಷಿಗೆ ಹಾನಿ

ಕಡಬ : ಕಡಬ ತಾಲೂಕಿನ ಐನೆಕಿದು ಗ್ರಾಮದ ಕೆದಿಲ ಗಿರಿಯಪ್ಪ ಗೌಡ , ರವಿಕೆದಿಲ ಹಾಗೂ ದೇವರಾಜ್ ಕೆದಿಲ ಇವರ ತೋಟಕ್ಕೆ ಕಾಡಾನೆ ನುಗ್ಗಿದೆ.

ತೋಟದಲ್ಲಿ ಬೆಳೆದಿದ್ದ ಕೃಷಿಗೆ ಬಹಳಷ್ಟು ಹಾನಿಯುಂಟು ಮಾಡಿದ ಆನೆ ಮನಬಂದಂತೆ ತೋಟದಲ್ಲಿ ಓಡಾಡಿದೆ. ಬಾಳೆ ,ಅಡಿಕೆ, ತೆಂಗು ಹಾಗೂ ನೀರಿನ ಪೈಪ್ ಸೇರಿ 50 ಸಾವಿರದಷ್ಟು ನಾಶವಾಗಿರಬಹುದೆಂದು ಅಂದಾಜಿಸಲಾಗಿದೆ.

ಮೊದಲೇ ಕೊರೊನಾ ಆತಂಕದಲ್ಲಿದ್ದ ಜನರು ಕಾಡಾನೆ ದಾಳಿ ಕಂಡು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

Leave A Reply

Your email address will not be published.