ಗುತ್ತಿಗಾರು | ಅಶಕ್ತ ಕುಟುಂಬದ ನೆರವಿಗೆ ನಿಂತ ಕೊರೊನಾ ತುರ್ತು ಕಾರ್ಯಪಡೆ

ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲ ಕುಕ್ಕೆತ್ತಿ ಹಾಗೂ ಕಂಚಾರತಿ ಎಂಬ ಬಡ ವೃದ್ಧ ಅಶಕ್ತ ಮಹಿಳೆಯರು ವಾಸವಿರುವ ಮನೆಯ ಮೇಲ್ಛಾವಣಿಯ ದುರಸ್ತಿ ಕಾರ್ಯವನ್ನು ಕೊರೊನಾ ತುರ್ತು ಕಾರ್ಯಪಡೆಯ ಸದಸ್ಯರುಗಳಿಂದ ಮಾಡಲಾಯಿತು.

ಈ ಕಾರ್ಯದಲ್ಲಿ ಕೊರೊನಾ ಕಾರ್ಯಪಡೆ ಸದಸ್ಯರುಗಳಾದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಚ್ಯುತ ಗುತ್ತಿಗಾರು ಗ್ರಾ .ಪ .ಸದಸ್ಯರಾದ ಶ್ರೀ ಜಯಪ್ರಕಾಶ್ ಮೊಗ್ರ ಮತ್ತು ಶ್ರೀ ರಾಕೇಶ್ ಮೆಟ್ಟಿನಡ್ಕ, ಶ್ರೀ ಲೋಕೇಶ್ವರ ಡಿ ಆರ್ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ನಾಲ್ಕೂರು ಒಕ್ಕೂಟದ ಅಧ್ಯಕ್ಷರಾದ ಶ್ರೀ ಸತೀಶ್ ಬೊಂಬುಳಿ ,ಶ್ರೀ ಮಹೇಶ್ ಸಾಲ್ತಾಡಿ ,ಶ್ರೀ ಕೇಶವ ಕಾಂತಿಲ ಶ್ರೀ ಶೂರಪ್ಪ ಕಮಿಲ ,ಶ್ರೀ ಶಿವರಾಮ ನೆಕ್ಲಾಜೆ ಇವರುಗಳು ಮನೆ ದುರಸ್ತಿ ಕಾರ್ಯದ ಯಶಸ್ಸಿಗೆ ಕೈ ಜೋಡಿಸಿದರು.

ಊಟೋಪಚಾರದ ವ್ಯವಸ್ಥೆಯಲ್ಲಿ ಪಾಲ್ಗೊಂಡು ಶ್ರೀ ಉಷಾಜಯರಾಮ ಮುತ್ಲಾಜೆ — ಬಳ್ಳಕ್ಕ ಮತ್ತು ಮನೆಯವರು ಸಹಕರಿಸಿದರು.

Leave A Reply

Your email address will not be published.