Tirupati : ಕಾಲ್ತುಳಿತದ ಬೆನ್ನಲ್ಲೇ ತಿರುಪತಿಯಲ್ಲಿ ಮತ್ತೊಂದು ಘೋರ ದುರಂತ – ಬೆಚ್ಚಿಬಿದ್ದ ಭಕ್ತ ಸಮೂಹ!!

Tirupati : ಇತ್ತೀಚಿಗಷ್ಟೇ ತಿರುಮಲ ತಿರುಪತಿಯಲ್ಲಿ ಭಕ್ತರ ನಡುವೆ ಭಾರಿ ಕಾಲು ತುಳಿತ ಉಂಟಾಗಿ ಆರು ಮಂದಿ ಭಕ್ತರು ಸಾವನ್ನಪ್ಪಿದ್ದರು. ಈ ಕಾಲ್ತುಳಿತ ಪ್ರಕರಣ ನಂತರ ತಿರುಪತಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಸಂಕ್ರಾಂತಿ ಒಂದು ದಿನ ಪೂರ್ವದಲ್ಲೇ ಸೋಮವಾರ ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿದೆ.
ಹೌದು, ತಿರುಪತಿಯಲ್ಲಿ ಕಾಲ್ತುಳಿತದ ಘಟನೆ ಮಾಸುವ ಮುನ್ನವೇ ಲಡ್ಡು ವಿತರಣೆ ಕೌಂಟರ್ 45ರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡದಿಂದಾಗಿ ಲಡ್ಡು ಪಡೆಯುತ್ತಿದ್ದ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ. ಮೂಲಗಳ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕೌಂಟರ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಲಡ್ಡು ವಿತರಣೆ ಕೌಂಟರ್‌ನಲ್ಲಿದ್ದ ಕಂಪ್ಯೂಟರ್ ಗಳಿಗೆ ಸಂಪರ್ಕ ಕಲ್ಪಿಸಿದ್ದ ವೈಯರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೆಂಕಿ ನಿಯಂತ್ರಣಕ್ಕೆ ತರಲಾಗಿದೆ.
ಅಂದಹಾಗೆ ದರ್ಶನ ಮುಗಿಸಿ ಲಡ್ಡುವನ್ನು ಪಡೆಯಲು ಭಕ್ತಾದಿಗಳು ಕೌಂಟರ್ ಬಳಿ ತೆರಳಿದ್ದರು. ಈ ವೇಳೆ ಬೆಂಕಿ ಹರಡುತ್ತಿದ್ದಂತೆ ಭಕ್ತರು ಭಯಭೀತರಾಗಿ ಸ್ಥಳದಿಂದ ಓಡಿಹೋದರು. ಅದಕ್ಕೆ ಸಿಬ್ಬಂದಿ ತಕ್ಷಣ ಪ್ರತಿಕ್ರಿಯಿಸಿದರು. ಇದು ಅಪಾಯವನ್ನುಂಟುಮಾಡುವ ಮೊದಲು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
Comments are closed.