ವಿದ್ಯಾರ್ಥಿಗಳೇ ವರ್ಷಕ್ಕೆ 1.6ಲಕ್ಷ ವಿದ್ಯಾರ್ಥಿ ವೇತನ | ಈಗಲೇ ಅಪ್ಲೈ ಮಾಡಿ
ಇಂದು ಪುಸ್ತಕ ಹಿಡಿಯಬೇಕಿದ್ದ ಅದೆಷ್ಟೋ ಕೈಗಳು ಕೆಲಸದ ಕಡೆಗೆ ಮುಖ ಮಾಡುತ್ತಿದೆ. ಹೀಗಾಗಿ, ಓದುವ ಆಸಕ್ತಿ ಹೊಂದಿದವರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ಅನೇಕ ಶಿಕ್ಷಣ ಸಂಸ್ಥೆಗಳು ನೆರವಾಗುತ್ತಿವೆ. ಇದೀಗ, ಆರ್ಥಿಕವಾಗಿ ಹಿಂದುಳಿದ ಜೊತೆಗೆ ಶಿಕ್ಷಣ ಮುಂದುವರೆಸಲು ಪ್ರೋತ್ಸಾಹಧನ ನೀಡುವ ಉದ್ದೇಶದಿಂದ ಅಮೆಜಾನ್ ಸಂಸ್ಥೆಯು ಸ್ಕಾಲರ್ ಶಿಪ್ ನೀಡಲು ಮುಂದಾಗಿದೆ.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಅಮೆಜಾನ್ (Amazon Scholarship) ಸಂಸ್ಥೆಯು ಹೊಸ ವಿದ್ಯಾರ್ಥಿವೇತನವನ್ನು ಬಿಡುಗಡೆಮಾಡಿದೆ. ವಾರ್ಷಿಕ 40,000 ರೂ ವಿದ್ಯಾರ್ಥಿ ವೇತನ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಇದರ ಮುಖ್ಯವಾದ ಧ್ಯೇಯವಾಗಿದೆ.
ಆರ್ಥಿಕವಾಗಿ (Economic) ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗೂ (Students) ಕೂಡ ಇದರಿಂದ ಸದುಪಯೋಗ (Benifits) ದೊರೆಯಲಿದೆ. ಭಾರತೀಯ ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಈ ವಿದ್ಯಾರ್ಥಿ ವೇತನ ಪ್ರಯೋಜನ ದೊರೆಯಲಿದೆ. INR 1,60,000 (ಪದವಿಯಾಗುವವರೆಗೆ ವರ್ಷಕ್ಕೆ INR 40,000) ಲಭ್ಯವಾಗಲಿದೆ.
ಅಮೆಜಾನ್ ವಿದ್ಯಾರ್ಥಿವೇತನ ಅರ್ಹತೆ ಹೀಗಿದೆ:
ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ಶಾಖೆಗಳಲ್ಲಿ BE/BTech ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿನಿಯರು ಇದಕ್ಕೆ ಅಪ್ಲೈ ಮಾಡಬಹುದಾಗಿದೆ. ಪ್ರಸ್ತುತ ಪದವಿಯ ಮೊದಲ ವರ್ಷದಲ್ಲಿ ಓದುತ್ತಿರಬೇಕು. ಕುಟುಂಬದ ವಾರ್ಷಿಕ ಆದಾಯ INR 3,00,000 ಕ್ಕಿಂತ ಕಡಿಮೆ ಇರಬೇಕು. ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶವನ್ನು ತೆಗೆದುಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು ಹೀಗಿವೆ:
10 ನೇ ತರಗತಿ ಮತ್ತು 12 ನೇ ತರಗತಿಯ ಅಂಕಪಟ್ಟಿ, ಕಾಲೇಜಿನಿಂದ ಪ್ರಮಾಣಪತ್ರ , ಶ್ರೇಣಿಯ ಪ್ರಮಾಣಪತ್ರ, ಸೀಟು ಹಂಚಿಕೆಗೆ ಕೌನ್ಸೆಲಿಂಗ್ ಪತ್ರ, ಕುಟುಂಬದ ಆದಾಯ ಪ್ರಮಾಣಪತ್ರ ಅಥವಾ ಸಂಬಳದ ಸ್ಲಿಪ್ (3 ತಿಂಗಳವರೆಗೆ) ಅಥವಾ ಐಟಿ ರಿಟರ್ನ್ ಫಾರ್ಮ್, ಕಾಲೇಜಿನಿಂದ ಅಂದಾಜು ವೆಚ್ಚಗಳ ಹೇಳಿಕೆ, ಬೋಧನೆ/ಹಾಸ್ಟೆಲ್/ಮೆಸ್ ಪಾವತಿಸಿದ ರಸೀದಿಗಳು ಬೇಕಾಗುತ್ತವೆ.
ಬ್ಯಾಂಕ್ ಖಾತೆ ವಿವರಗಳ ದೃಢೀಕರಣಕ್ಕಾಗಿ ಬ್ಯಾಂಕ್ ಪಾಸ್ ಬುಕ್ ನಕಲು ಬೇಕಾಗಿವೆ.ಇ-ಆಧಾರ್ ಅಥವಾ ನಿಮ್ಮ ಮೂಲ ಆಧಾರ್ನ ಸ್ಕ್ಯಾನ್ ಮಾಡಿದ ಪ್ರತಿ, ಅಮೆಜಾನ್ ಫ್ಯೂಚರ್ ಇಂಜಿನಿಯರ್ ವಿದ್ಯಾರ್ಥಿವೇತನ 2023 ಅಪ್ಲಿಕೇಶನ್ ಪ್ರಕ್ರಿಯೆಗೆ ಬೇಕಾಗುವ ಅಗತ್ಯ ದಾಖಲೆಗಳು ಬೇಕಾಗಿವೆ.
ಪ್ರತಿ ವರ್ಷವೂ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಅದೇ ರೀತಿ, ಮುಂಬರುವ ವರ್ಷ 2023ರಲ್ಲೂ ಕೂಡ ಈ ವಿದ್ಯಾರ್ಥಿವೇತನ ಲಭ್ಯವಿದ್ದು ನೀವು ಅಧಿಕೃತ ವಿದ್ಯಾರ್ಥಿ ವೇತನದ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲ್ಲಿ ನೀಡಿರುವ ಮಾಹಿತಿ ಅನುಸಾರ ನೀವು ಅಪ್ಲೈ ಮಾಡಬಹುದಾಗಿದೆ.
ನೀವು ಮೊದಲು ವಿದ್ಯಾರ್ಥಿವೇತನದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಆ ಬಳಿಕ, ನಿಮ್ಮ ಪರದೆಯ ಮೇಲೆ ಮುಖಪುಟ ತೆರೆಯುತ್ತದೆ. ಮುಖಪುಟದಲ್ಲಿರುವ ಆನ್ಲೈನ್ ಅನ್ವಯಿಸು ಬಟನ್ ಅನ್ನು ನೀವು ಕ್ಲಿಕ್ ಮಾಡಬೇಕು. ಅರ್ಜಿ ನಮೂನೆಯೊಂದಿಗೆ ಹೊಸ ಪುಟವು ನಿಮ್ಮ ಪರದೆಯ ಮೇಲೆ ತೆರೆಯುತ್ತದೆ. ಅಲ್ಲಿ ನೀವು ನಿಮಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಬೇಕಾಗುತ್ತದೆ.
ಸಂಸ್ಥೆಯು ಪ್ರಸ್ತುತಪಡಿಸಿದ ಪ್ರತಿಷ್ಠಿತ ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಯಶಸ್ವಿಯಾಗಿ ಭರ್ತಿ ಮಾಡಬೇಕು. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ಸಂಪರ್ಕ ಸಂಖ್ಯೆ ನಮೂದಿಸಿದ ಬಳಿಕ ಸರಿಯಾದ ಮೇಲ್ ಐಡಿ ನೀಡಬೇಕು.