Viral video: ಪ್ರೀ ವೆಡ್ಡಿಂಗ್ ಶೂಟಿಂಗ್ ನಲ್ಲಿ ಬೈಕ್ ಸ್ಟಂಟ್ ಮಾಡಿದ ನವ ಜೋಡಿ; ಮುಂದೇನಾಯ್ತು?? ನೀವೇ ನೋಡಿ|
ಮದುವೆ ಎರಡು ಜೀವಗಳ ಸಂಬಂಧಗಳ ಬೆಸೆಯುವ ಕೊಂಡಿಯಂತೆ: ಆ ಸುಂದರ ಕ್ಷಣಗಳನ್ನು ಜೀವನಪರ್ಯಂತ ಮೆಲುಕು ಹಾಕಲು ಫೋಟೊಗಳನ್ನು ಸೆರೆ ಹಿಡಿಯುವುದು ಸಾಮಾನ್ಯ.
ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬ ಬೆಸುಗೆ ಮಹತ್ತರ ಘಟ್ಟವಾಗಿದ್ದು, ಅದರಲ್ಲೂ ಇತ್ತೀಚೆಗೆ ಪ್ರೀ – ವೆಡ್ಡಿಂಗ್ , ಪೋಸ್ಟ್ ವೆಡ್ಡಿಂಗ್ ಶೂಟ್ಗಳು ಹೆಚ್ಚು ಟ್ರೆಂಡ್ ಆಗಿದೆ.
ಅದಕ್ಕಾಗಿ ಪ್ರಕೃತಿಯ ರಮ್ಯ ತಾಣಗಳನ್ನು ಗುರುತಿಸಿ, ಕಡಲ ತೀರದ ಬಳಿಯೋ ಇಲ್ಲವೇ ಐಷಾರಾಮಿ ಹೋಟೆಲ್ ಗಳಲ್ಲಿ ಫೋಟೋ ತೆಗೆಸಿಕೊಂಡು ಸಂಭ್ರಮಿಸುವುದು ಸಾಮಾನ್ಯ. ಆದರೆ, ಈ ನಡುವೆ ಜೋಡಿಯೊಂದು ವಿಭಿನ್ನವಾಗಿ ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಾರೆ.
ಪ್ರೀ ವೆಡ್ಡಿಂಗ್ ಫೋಟೋ ಶೂಟ್‍ಗೆ ಬೈಕ್ ಸ್ಟಂಟ್ ಮಾಡುವ ಮೂಲಕ ವಿಭಿನ್ನ ಶೈಲಿಯಲ್ಲಿ ಫೋಟೊ ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟ್ರೆಂಡ್ ಆಗುತ್ತಿದೆ.
ಜೋಡಿಗಳಿಬ್ಬರು ಮದುವೆಗೆ ಧರಿಸಿರುವ ಬಟ್ಟೆಯನ್ನು ಧರಿಸಿ ಬೈಕ್‍ವೊಂದರಲ್ಲಿ ಕುಳಿತಿದ್ದು, ನಂತರ ಗಾಳಿಯಲ್ಲಿ ಬೈಕ್ ಹಾರಿಸಿದ್ದು, ಅದು ಕಾರಿನ ಮೇಲೆ ಹಾರಿದೆ. ಇದರ ಜೊತೆಗೆ ಕೆಲವು ಸ್ಟಂಟ್‍ಗಳನ್ನು ಕೂಡ ಮಾಡಿದ್ದಾರೆ.
ಈ ರೀತಿ ಸ್ಟಂಟ್ ಮಾಡಲು ಕ್ರೇನ್‍ನ ಸಹಾಯ ಪಡೆದಿದ್ದು, ಸದ್ಯ ಈ ವೀಡಿಯೋ ತುಣುಕುಗಳು ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ವೀಡಿಯೋಕ್ಕೆ ನೆಟ್ಟಿಗರು ಬಿನ್ನ ಬಿನ್ನ ಕಾಮೆಂಟ್‍ಗಳನ್ನು ಹಾಕುತ್ತಿದ್ದಾರೆ.
ಏನೇ ಆಗಲಿ ಮದುವೆ ಎಂಬ ಹೊಸ ಮೈಲಿಗಲ್ಲನ್ನು ತುಳಿಯುತ್ತಿರುವ ಹೊಸ ಜೋಡಿ ತಮ್ಮದೇ ಶೈಲಿಯಲ್ಲಿ ಫೋಟೊ ತೆಗೆಸಿಕೊಂಡು ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.