Fake brand garments: ನಕಲಿ ಬ್ರ್ಯಾಂಡ್ ಬಟ್ಟೆ ತಯಾರಿಸುತ್ತಿದ್ದ ಖದೀಮರ ಗ್ಯಾಂಗ್ ಅರೆಸ್ಟ್!

Fake brand garments: ವಿದೇಶಿ ಬ್ಯಾಂಡ್‌ಗಳ ನಕಲಿ ಲೇಬಲ್‌ಗಳನ್ನು (Fake brand garments) ಬಳಸಿಕೊಂಡು ಬಟ್ಟೆ ತಯಾರು ಮಾಡುತ್ತಿದ್ದ ಗಾರ್ಮೆಂಟ್ ಸಂಸ್ಥೆಯ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ನಕಲಿ ಲೇಬಲ್‌ಗಳನ್ನು ಬಳಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬರ್ಬೆರಿ ಮತ್ತು ಪೋಲೋ ರಾಲ್ಫ್ ಲಾರೆನ್ ಎಂಬ ಪ್ರಸಿದ್ಧ ಬ್ಯಾಂಡ್‌ಗಳ ನಕಲಿ ಲೇಬಲ್‌ಗಳನ್ನು ಹಾಕಿ ಬಟ್ಟೆಗಳನ್ನು ದುಷ್ಕರ್ಮಿಗಳು ತಯಾರಿಸುತ್ತಿದ್ದರು. ಈ ಬಗ್ಗೆ ಬ್ಯಾಂಡ್ ಕಂಪನಿಗಳ ಪರವಾಗಿ ಅಧಿಕಾರ ಪಡೆದ ಶ್ರೀನಿವಾಸ್ ಎಂಬುವವರು ಮಾದನಾಯಕನಹಳ್ಳಿ ಠಾಣೆ ಯಲ್ಲಿ ದೂರು ನೀಡಿದ್ದರು.
ಅದರಂತೆ ಇದೀಗ ಪೊಲೀಸರು ತೋಟದಗುಡ್ಡದಹಳ್ಳಿಯಲ್ಲಿರುವ ಸಂಗಮ್ ಅಪೆರಲ್ಸ್ ಎಂಬ ಗಾರ್ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ವಿವಿಧ ಕಂಪೆನಿಯ ಸುಮಾರು ಸಾವಿರಾರು ನಕಲಿ ಲೇಬಲ್ ಗಳು ಪತ್ತೆಯಾಗಿದೆ.
ಸದ್ಯ ನಕಲಿ ಬ್ಯಾಂಡ್ ಹೆಸರಿನಲ್ಲಿ ಬಟ್ಟೆ ತಯಾರು ಮಾಡುತ್ತಿದ್ದ ಆಶ್ರಫ್, ಶರ್ಪ್ ಉದ್ದೀನ್ ಮತ್ತು ಸರವಣ ಎಂಬಾತನನ್ನು ಪೊಲೀಸರು ಬಂಧಿಸಿದ್ದು, 24 ಸಾವಿರ ನಕಲಿ ಲೇಬಲ್ ಹಾಕಿದ ಬಟ್ಟೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Comments are closed.