Subrahmanya Temple: ಕುಕ್ಕೆಯಲ್ಲಿ ಶೀಘ್ರವೇ ಭಕ್ತರಿಗೆ ದೊರಕಲಿದೆ ಬೆಳಗಿನ ಉಪಾಹಾರ

Share the Article

Subrahmanya Temple: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಭಕ್ತರಿಗೆ ಬೆಳಗಿನ ಉಪಾಹಾರ ನೀಡುವ ಬಗ್ಗೆ ದೇಗುಲದ ನೂತನ ವ್ಯವಸ್ಥಾಪನಾ ಸಮಿತಿ ಯೋಜನೆ ರೂಪಿಸಿದೆ.

ಈ ಕುರಿತು ಸಭೆಯಲ್ಲಿ ಚರ್ಚೆ ಮಾಡಿ, ಶೀಘ್ರ ಭಕ್ತರಿಗೆ ಬೆಳಗ್ಗಿನ ಹೊತ್ತು ಉಪಾಹಾರ ನೀಡುವ ಕುರಿತು ನಿರ್ಧಾರ ಮಾಡಲಾಗುತ್ತದೆ. ಮೆನು, ಸಮಯದ ಕುರಿತು ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರವನ್ನು ಮಾಡಲಾಗುತ್ತದೆ. ನಂತರ ಈ ಹೊಸ ಯೋಜನೆ ಅನುಷ್ಠಾನಕ್ಕೆ ಬರುತ್ತದೆ.

ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ಪ್ರಸಾದವನ್ನು ಈಗಾಗಲೇ ದೇವಸ್ಥಾನದಲ್ಲಿ ವಿತರಣೆ ಮಾಡಲಾಗುತ್ತಿದೆ. ಬೆಳಗಿನ ಉಪಾಹಾರ ಯೋಜನೆಯಿಂದ ಭಕ್ತರಿಗೆ ಉಪಯೋಗವಾಗಲಿದೆ.

Comments are closed.