Maruti Suzuki : ಮಾರುತಿ ಸುಜುಕಿಯಿಂದ ಬ್ರೀಜಾ ಸಿಎನ್‌ಜಿ ಬಿಡುಗಡೆ!

Maruti suzuki : ಭಾರತದಲ್ಲಿ (india )ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಕೂಡ ಒಂದಾಗಿದೆ. ಇದೀಗ ಟಾಪ್‌ ವೇರಿಯಂಟ್‌ನಲ್ಲಿ ಎಲೆಕ್ಟ್ರಾನಿಕ್‌ ಸನ್‌ರೂಫ್, ಕೀಲೆಸ್‌ ಪುಶ್‌ ಸ್ಟಾರ್ಟ್‌ ಸೇರಿದಂತೆ ಅನೇಕ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

 

ಹೌದು, ಮಾರುತಿ ಸುಜುಕಿ (Maruti suzuki) ತನ್ನ ಬ್ರೀಜ಼ಾ ಕಾರಿನ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಕಾರಿನ ಆರಂಭಿಕ ಬೆಲೆಯನ್ನು ಎಕ್ಸ್‌ ಶೋರೂಂ 9.14 ಲಕ್ಷ ರೂ. ಆಗಿದೆ.

ಮುಖ್ಯವಾಗಿ LXi, VXi, ZXi ಹಾಗೂ ZXi ಡ್ಯುಯಲ್ ಟೋನ್ ಎಂಬ ನಾಲ್ಕು ಅವತಾರಗಳಲ್ಲಿ ಬ್ರೀಜ಼ಾ ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಮಾರುತಿ ಸುಜ಼ುಕಿ, ಈ ಮೂಲಕ ಭಾರತದಲ್ಲಿ ತನ್ನ 14ನೇ ಸಿಎನ್‌ಜಿ ಉತ್ಪನ್ನವನ್ನು ಹೊರತರುತ್ತಿದೆ.

ಬ್ರೀಜ಼ಾ ಸಿಎನ್‌ಜಿ ವೈಶಿಷ್ಯತೆ ಗಳು :
ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್‌ಮಿಶನ್ ಹಾಗೂ ಸಿಎನ್‌ಜಿ ಸಿಲಿಂಡ್‌ನೊಂದಿಗೆ ಬ್ರೀಜ಼ಾ ಸಿಎನ್‌ಜಿ ಕಾರು 25.1ಕಿಮೀ ಮೈಲೇಜ್ ನೀಡಬಲ್ಲದು.

ಈ ಮಾದರಿಯು ಅಲಾಯ್‌ ಚಕ್ರಗಳು, ಎಲೆಕ್ಟ್ರಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇಯೊಂದಿಗೆ 7-ಇಂಚಿನ ಸ್ಮಾರ್ಟ್‌ಪ್ಲೇ ಪ್ರೋ ಇನ್ಫೋಟೇನ್ಮೆಂಟ್ ವ್ಯವಸ್ಥೆ, ಆಂಡ್ರಾಯ್ಡ್ ಆಟೋ ಮತ್ತು ಕೀರಹಿತ ಪುಶ್ ಸ್ಟಾರ್ಟ್ ಫೀಚರ್‌ಗಳನ್ನು ಬ್ರೀಜ಼ಾ ಸಿಎನ್‌ಜಿ ಹೊಂದಿದೆ.

ಮಾರುತಿಯ ಎಸ್‌-ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಈ ಕಾರಿನಲ್ಲಿ ಇಂಟಿಗ್ರೇಟೆಡ್ ಪೆಟ್ರೋಲ್ ಮತ್ತು ಸಿಎನ್‌ಜಿ ಇಂಧನ ಲಿಡ್, ಡೆಡಿಕೇಟೆಡ್ ಸಿಎನ್‌ಜಿ ಡ್ರೈವ್‌ ಮೊಡ್‌, ಡಿಜಿಟಲ್ ಮತ್ತು ಅನಲಾಗ್ ಸಿಎನ್‌ಜಿ ಇಂಧನ ಗೇಜ್‌ಗಳು ಹಾಗೂ ಇಲ್ಯುಮಿನೇಟೆಡ್ ಇಂಧನ ಬದಲಾವಣೆ ಸ್ವಿಚ್‌ಗಳೂ ಸಹ ಇವೆ.

ಮುಖ್ಯವಾಗಿ 1.5ಲೀ ಕೆ ಸರಣಿಯ ಪೆಟ್ರೋಲ್ ಇಂಜಿನ್ ಮೂಲಕ 5,500 ಆರ್‌ಪಿಎಂ ದರದಲ್ಲಿ 86.6 ಬಿಎಚ್‌ಪಿ ಯಷ್ಟು ಶಕ್ತಿ ಮತ್ತು 4,200 ಆರ್‌ಪಿಎಂ ದರದಲ್ಲಿ 121.5 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಈ ಕಾರಿನ ಇಂಜಿನ್ ಹೊಂದಿದೆ.

ಇದನ್ನೂ ಓದಿ : ಹೋಂಡಾ ಕಂಪನಿಯಿಂದ ಬಿಗ್‌ ಅಪ್ಡೇಟ್‌!ಭಾರತದಲ್ಲಿ ಬರಲಿದೆ ಈ ಸ್ಕೂಟರ್!‌

Leave A Reply

Your email address will not be published.