Rohini sindhuri- Rupa D War: ಸರ್ಕಾರದ ಅಂಗಳಕ್ಕೆ ರೂಪ- ರೋಹಿಣಿ ರಂಪ! ರೂಪ ಪರ ಬ್ಯಾಟ್ ಬೀಸಿದ ಪ್ರತಾಪ್ ಸಿಂಹ! ಮಧ್ಯ ಪ್ರವೇಶಿಸಿದ ಜಗ್ಗೇಶ್ ಏನಂದ್ರು?

Rohini sindhuri- Rupa D War: ಐಎಎಸ್‌(IAS) ಅಧಿಕಾರಿ ರೋಹಿಣಿ ಸಿಂಧೂರಿ(Rohini Sindhuri) ಹಾಗೂ ಐಪಿಎಸ್(IPS) ಆಫೀಸರ್ ರೂಪ.ಡಿ(Roopa D) ಅವರ ಜಗಳ (Rohini sindhuri- Rupa D War) ಸದ್ಯ ಮುಗಿಯದ ಕಥೆಯಾಗಿದೆ. ಅಧಿಕಾರಿಗಳಿಬ್ಬರ ರಂಪಾಟ ಇದೀಗ ಸರ್ಕಾರದ ಅಂಗಳಕ್ಕೆ ಬಂದಿದೆ. ಸಿಎಂ ಬೊಮ್ಮಾಯಿ(CM Bommai), ಗೃಹ ಸಚಿವ ಆರಗ ಜ್ಞಾನೇಂದ್ರ(Araga Janendra), ರಾಜ್ಯಸಭಾ ಸದಸ್ಯ ಜಗ್ಗೇಶ್(Jaggesh) ಕೂಡ ಈ ಮಹಿಳಾ ನಾರಿಯರ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಸಂಸದ ಪ್ರತಾಪ್ ಸಿಂಹ(Prathap Simha) ರೂಪ ಪರ ಬ್ಯಾಟಿಂಗ್ ಮಾಡಿದ್ದಾರೆ.

ರೊಹಿಣಿ ಸಿಂಧೂರಿ ಅವರು ಮುಖ್ಯ ಕಾರ್ಯದರ್ಶಿ(Chief secretary)ಗೆ ದೂರು ನೀಡಿ, ಮಾಧ್ಯಮದ ಮುಂದೆ ಏನಾಗುತ್ತದೆ ಎಂದು ಕಾದು ನೋಡಿ ಅಂದಿದ್ರು. ಇದರ ಬೆನ್ನಲ್ಲೇ ಐಜಿಪಿ ಡಿ. ರೂಪಾ ಮೌದ್ಗಿಲ್‌ ಅವರು ಕೂಡ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಆಗಿ ರೋಹಿಣಿ ಸಿಂಧೂರಿ ವಿರುದ್ಧ ಮೂರು ಪುಟಗಳ ದೂರು ನೀಡಿದ್ದಾರೆ. ಇವರೂ ಕೂಡ ಮಾಧ್ಯಮಗಳೊಂದಿಗೆ ಮಾತನಾಡಿ ಯಾವ ಶಕ್ತಿ ನನ್ನನ್ನು ತಡೆಯುತ್ತೆ ನೋಡ್ತೀನಿ ಎಂದು ಹೇಳುವ ಮೂಲಕ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.

ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೋಹಿಣಿ ಸಿಂಧೂರಿ, ಡಿ.ರೂಪ ಮೌದ್ಗಿಲ್ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಹೆಚ್ಚಾಗಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಯಾವುದನ್ನೂ ಸುಮ್ಮನೆ ಬಿಡುವುದಿಲ್ಲ, get well soon ಎಂದಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ರೂಪ ರೋಹಿಣಿ ಸಿಂಧೂರಿ ಅವರು ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರು ಎಂದು ಹೇಳಿದ್ದಾರೆ, ಅದಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡುತ್ತಿದ್ದೇನೆ. ರೋಹಿಣಿ ಅವರು ನನ್ನ ಮೇಲೆ ಏನೂ ಆರೋಪ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೀಗ ನಾನು ಅವರ ಮೇಲಿರುವ ಎಲ್ಲಾ ಆರೋಪಗಳ ದಾಖಲೆ ತಂದಿದ್ದೇನೆ. ಸದ್ಯ ನಾನು ಸರ್ಕಾರಕ್ಕೆ ದಾಖಲೆ ಒಪ್ಪಿಸಲು ಬಂದಿದ್ದೇನೆ. ಜಾಲಹಳ್ಳಿ(Jalahalli)ಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗೆ ಸುಮಾರು 2 ಕೋಟಿ ರೂ. ಮೌಲ್ಯದ ಪೀಠೋಪಕರಣಗಳನ್ನು ಇಟಲಿ(Itali)ಯಿಂದ ತರಿಸಿಕೊಳ್ಳಲಾಗಿದೆ. ಬಾಗಿಲಿನ ಹಿಂಜಸ್‌ ಒಂದಕ್ಕೇ ಬರೋಬ್ಬರು 6 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇವುಗಳಲ್ಲದೆ ಅವರ ಖರ್ಚು, ಮನೆ ನಿರ್ವಹಣೆ ಖರ್ಚು ಸೇರಿದಂತೆ ಅವರ ಸಂಬಳದ ಬಗ್ಗೆ ಪ್ರಶ್ನೆ ಮಾಡಿ ದೂರು ನೀಡಿದ್ದೇನೆ. ಜತೆಗೆ ಲೋಕಾಯುಕ್ತಕ್ಕೂ ತನಿಖೆ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ರೋಹಿಣಿ ಸಿಂಧೂರಿ ಸದ್ಯ ಕಮಿಷನರ್ ಆಗಿರುವ ಮುಜರಾಯಿ ಇಲಾಖೆಯಲ್ಲಿ ಹತ್ತು ಕೋಟಿ ರೂಪಾಯಿಗೂ ಅಧಿಕ ಮೊತ್ತದ ಟೆಂಡರ್(Tender) ಒಂದನ್ನು ಕೊಟ್ಟಿದ್ದಾರೆ. ಅಲ್ಲದೆ ಮೈಸೂರಿ(Mysore)ನ ಕಚೇರಿಯ ವಸ್ತುಗಳು ತೆಗೆದುಕೊಂಡು ಹೋಗಿದ್ದಾರೆ. ಇದರ ಬಗ್ಗೆ ವಾಟ್ಸಪ್​ನಲ್ಲಿ ನಡೆಸಿದ ಮಾತುಕತೆಯ ಸ್ಕ್ರೀನ್​ಶಾಟ್​(Screen shot) ಇದೆ. ಇದೆಲ್ಲದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದೇನೆ. ಆದರೆ ಅವರ ಮೇಲೆ ಇಷ್ಟೆಲ್ಲ ಆರೋಪಗಳಿದ್ದರೂ ಯಾವುದೇ ಕ್ರಮ ಆಗುತ್ತಿಲ್ಲ. ಬೆಂಬಲವಾಗಿ ಅವರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ಆಗಬೇಕು. ಸರ್ವೀಸ್ ಕಂಡಕ್ಟ್ ಬಗ್ಗೆ ತನಿಖೆ ಮಾಡಬೇಕು ಎಂದು ಡಿ.ರೂಪ ಕೋರಿಕೆ ಸಲ್ಲಿಸಿದ್ದಾರೆ.

ಇವರಿಬ್ಬರ ಜಟಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಡಿ. ರೂಪಾ ಎತ್ತಿರುವ ಪ್ರಶ್ನೆಗಳು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿವೆ. ಹೀಗಾಗಿ ಆರೋಪಗಳಿಗೆ ಸಂಬಂಧಿಸಿದಂತೆ ವಾಸ್ತವ ಏನು ನಡೆದಿದೆ ಎಂಬುದರ ಬಗ್ಗೆ ಪತ್ರಕರ್ತರು ಸತ್ಯಶೋಧನೆ ಮಾಡಬೇಕಿದೆ. ಆರೋಪಗಳ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕು. ತನಿಖೆ ಮಾಡಲು ಮೊದಲು ಒಂದು ಕಮಿಟಿ ಮಾಡುವಂತೆ ಪತ್ರಕರ್ತರು ಸರ್ಕಾರಕ್ಕೆ ತಿಳಿಸಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.

ಅಲ್ಲದೆ ಕೋವಿಡ್ ಸಮಯದಲ್ಲಿ ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಒಂದೇ ದಿನ 24 ಮಂದಿ ಮೃತಪಟ್ಟಿದ್ದರು. ಅಂದು ಮೈಸೂರಿನ ಮೇಲೆ ಆರೋಪ ಬಂತು. ಬಳಿಕ ಆಕ್ಸಿಜನ್ ಒದಗಿಸುವ ಜವಾಬ್ದಾರಿಯನ್ನು ಉಸ್ತುವಾರಿ ಸಚಿವರು ಹಾಗೂ ಸಂಸದನಾದ ನಾನು ವಹಿಸಿಕೊಂಡೆವು. ಜಿಲ್ಲೆಯಲ್ಲಿ ಕೋವಿಡ್‍ಗೆ ಅನೇಕರು ಮೃತಪಟ್ಟಿದ್ದರು. ಆಗ ಸುಮ್ಮನೆ ವೀಡಿಯೋ ಕಾನ್ಫರೆನ್ಸ್ ಮಾಡಿ ಕಾಲಹರಣ ಮಾಡುವ ಬದಲು ತಪಾಸಣೆ ಮಾಡಬೇಕು ಎಂದು ಹೇಳಿದಾಗ ನಮ್ಮ ಮೇಲೆಯೇ ಆರೋಪಗಳು ಕೇಳಿ ಬಂದ್ದಿದ್ದವು ಎಂದು ನೆನಪಿಸಿಕೊಂಡರು.

ಇನ್ನು ಇದರ ಬೆನ್ನಲ್ಲೇ ಬೆನ್ನಲ್ಲೇ ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh), ಅಧಿಕಾರಿಗಳಿಬ್ಬರು ತಮ್ಮ ಘನತೆ ಕಾಪಾಡುವಂತೆ ಪ್ರಧಾನಿ ಮೋದಿ (Narendra Modi) ಸಲಹೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ಐಪಿಎಸ್ ಮತ್ತು ಐಎಎಸ್ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯುತ ಹುದ್ದೆಗಳು. ಸರ್ಕಾರಕ್ಕಾಗಿ ಸೇತುವೆಯಂತೆ ಕೆಲಸ ಮಾಡಬೇಕು. ಮಾಧ್ಯಮದಲ್ಲಿ ವೈಯಕ್ತಿಕ ದ್ವೇಷವನ್ನು ವ್ಯಕ್ತಪಡಿಸಬಾರದು. ಇದರೊಂದಿಗೆ ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರಿಗೆ ಮನವಿ ಮಾಡುತ್ತೇನೆ. ಡಿ.ರೂಪಾ ಹಾಗೂ ರೋಹಿಣಿ ಸಿಂಧೂರಿ ಅವರಿಬ್ಬರೂ ಸಾರ್ವಜನಿಕವಾಗಿ ತಮ್ಮ ಘನತೆ ಕಾಪಾಡುವಂತೆ ಸಲಹೆ ನೀಡಬೇಕು ಮನವಿ ಮಾಡಿದ್ದಾರೆ.

Leave A Reply

Your email address will not be published.