5 Day Work Week: ಇನ್ಮುಂದೆ ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ ಕೇವಲ 5 ದಿನ ಕೆಲಸ!

5 Day Work Week: ವಾರದಲ್ಲಿ 5 ದಿನಗಳ ಕೆಲಸ ನಿರ್ವಹಿಸಲು ಬ್ಯಾಂಕ್ ನೌಕರರ ಬೇಡಿಕೆಗೆ ಶೀಘ್ರದಲ್ಲೇ ಅನುಮೋದನೆ ದೊರಕಲಿದೆ . ಹೌದು, ಬಿಎ ಮತ್ತು ಬ್ಯಾಂಕ್ ಯೂನಿಯನ್ ಬ್ಯಾಂಕ್‌ ಉದ್ಯೋಗಿಗಳಿಗೆ ವಾರದಲ್ಲಿ 2 ರಜೆ ನೀಡುವುದರ ಬಗ್ಗೆ ಒಪ್ಪಿಕೊಂಡಿದೆ. ಆದರೆ ಅಂತಿಮ ನಿರ್ಧಾರವು ಸರ್ಕಾರದ ಮೇಲಿದೆ.

ಇದನ್ನೂ ಓದಿ: Kedarnath Temple: ಕೇದರನಾಥ್ ಯಾತ್ರಿಕರಿಗೆ ಶುಭ ಸುದ್ದಿ : ಕೇದಾರನಾಥ ಧಾಮ್  ಮೇ 10ರಿಂದ ಭಕ್ತರ ದರ್ಶನಕ್ಕೆ ಮುಕ್ತ

ಈ ಕುರಿತಾಗಿ ಈಗಾಗಲೇ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಮತ್ತು ನೌಕರರ ಸಂಘಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಸದ್ಯ ಈ ಬೇಡಿಕೆಗೆ ಸರ್ಕಾರದ ಅನುಮೋದನೆ ಮಾತ್ರ ಬಾಕಿ ಉಳಿದಿದ್ದು, 2024ರ ಲೋಕಸಭಾ ಚುನಾವಣೆಯ ನಂತರ ಅದನ್ನು ಪಡೆಯಲು ಬ್ಯಾಂಕ್ ಅಧಿಕಾರಿಗಳು ಬಯಸಿದ್ದಾರೆ. ಮುಖ್ಯವಾಗಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್‌ನಂತಹ ಬ್ಯಾಂಕ್ ಉದ್ಯೋಗಿ ಸಂಘಗಳು ಶನಿವಾರದ ರಜೆಯೊಂದಿಗೆ 5 ದಿನಗಳ ಕೆಲಸದ ವಾರಕ್ಕೆ (5 Day Work Week) ಒತ್ತಾಯಿಸುತ್ತಿವೆ. ಇದು ಗ್ರಾಹಕರ ಸೇವೆಯ ಸಮಯವನ್ನು ಕಡಿಮೆ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಇದಕ್ಕೂ ಮೊದಲು ಡಿಸೆಂಬರ್ 2023 ರಲ್ಲಿ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ನಡುವೆ ಎಂಒಯುಗೆ ಸಹಿ ಹಾಕಲಾಯಿತು. ಇದು ಸರ್ಕಾರಿ ಮತ್ತು ಖಾಸಗಿ ಸಾಲದಾತರು ಮತ್ತು ಬ್ಯಾಂಕ್ ಒಕ್ಕೂಟಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Aditi Rao Hydari: ಈ ಕಾರಣದಿಂದಲೇ ನಾವು ನಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದೇವೆ : ಅಚ್ಚರಿಯ ಹೇಳಿಕೆ ನೀಡಿದ ಅದಿತಿ ರಾವ್ ಹೈದರಿ

ಒಪ್ಪಂದವು ಸರ್ಕಾರದ ಅನುಮೋದನೆಗೆ ಒಳಪಟ್ಟು 5-ದಿನದ ಕೆಲಸದ ವಾರದ ಪ್ರಸ್ತಾಪವನ್ನು ಒಳಗೊಂಡಿತ್ತು. ಮಾರ್ಚ್ 8, 2024 ರಂದು, 9 ನೇ ಜಂಟಿ ಟಿಪ್ಪಣಿಗೆ IBA ಮತ್ತು ಬ್ಯಾಂಕ್ ಯೂನಿಯನ್‌ಗಳು ಸಹಿ ಹಾಕಿದವು.

ಐಬಿಎ ಮತ್ತು ಬ್ಯಾಂಕ್ ಯೂನಿಯನ್ ಈ ಬಗ್ಗೆ ಒಪ್ಪಿಗೆ ನೀಡಿದ್ದರೂ, ಅಂತಿಮ ನಿರ್ಧಾರ ಸರ್ಕಾರದ ಮೇಲಿದೆ. ಈ ಪ್ರಸ್ತಾವನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಯೊಂದಿಗೂ ಚರ್ಚಿಸಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರದಿಂದ ಯಾವುದೇ ಅಧಿಕೃತ ಗಡುವು ಇನ್ನೂ ಘೋಷಣೆಯಾಗಿಲ್ಲ.

Leave A Reply

Your email address will not be published.