Mangaluru: ಸರಕಾರಿ ಉಪ ಕಾರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

Mangaluru: ಬೈಕಂಪಾಡಿಯಲ್ಲಿರುವ ಸರಕಾರಿ ಉಪ ಕಾರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2024-25ನೇ ಸಾಲಿನ ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ ಎಸೆಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪಿಯುಸಿ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನೇರವಾಗಿ ದ್ವಿತೀಯ ವರ್ಷದ ಡಿಪ್ಲೊಮಾ ಕೋರ್ಸುಗಳ ಪ್ರವೇಶಾತಿಗೆ ಅರ್ಹರಾಗಿರುತ್ತಾರೆ. ಡಿಪ್ಲೊಮಾ ಇನ್‌ಟೂಲ್ ಆ್ಯಂಡ್ ಡೈ ಮೇಕಿಂಗ್ ವಿಭಾಗದಲ್ಲಿ 60 ವಿದ್ಯಾರ್ಥಿಗಳು, ಡಿಪ್ಲೊಮಾ ಇನ್ ಪ್ರಿಶಿಷನ್ ಮ್ಯಾನುಫ್ಯಾಕ್ಟರಿಂಗ್ ವಿಭಾಗದಲ್ಲಿ 30 ವಿದ್ಯಾರ್ಥಿಗಳು, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಮಿಷಿನ್ ಲರ್ನಿಂಗ್ ವಿಭಾಗದಲ್ಲಿ 60 ವಿದ್ಯಾರ್ಥಿಗಳಿಗೆ ಅವಕಾಶವಿದೆ.

ಇದನ್ನೂ ಓದಿ: ಸಿಕಂದರ್ ಸಿನಿಮಾದಲ್ಲಿ ರಶ್ಮಿಕಾಗೆ ಸಂಭಾವನೆ ಎಷ್ಟು ಗೊತ್ತೇ?ಸಕ್ಸಸ್ ಮೆಟ್ಟಿಲೇರುತ್ತಿರುವ ರಶ್ಮಿಕಾ ಡಿಮ್ಯಾಂಡ್ ಊಹಿಸಲು ಸಾಧ್ಯವಿಲ್ಲ! 

ಕೋರ್ಸ್‌ಗಳ ಅಧ್ಯಯನ ಮಾಡುವಾಗ 1 ವರ್ಷದ ಇಂಟರ್ನ್‌ಶಿಪ್ ತರಬೇತಿ ಜೊತೆಗೆ ವಿದ್ಯಾರ್ಥಿಗಳಿಗೆ ಮಾಸಿಕ 15,000 ರೂ.ನಿಂದ 20,000 ರೂ.ವರೆಗೆ ಶಿಷ್ಯ ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ನಗರದ ಬೈಕಂಪಾಡಿಯಲ್ಲಿರುವ ಕೈಗಾರಿಕಾ ವಲಯದ, ಪ್ಲಾಟ್ ನಂಬರ್ 7ಇ-ಯಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಮೊ.ಸಂ: 9008263660, 9535423533, 9481265587, 9741667257, 9483920114, 0824-2408003 ಸಂಪರ್ಕಿಸುವಂತೆ ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ: ಲವರ್ ಜೊತೆ ಹೊಸ ಭಂಗಿಯಲ್ಲಿ ಸಂಭೋಗ; 26 ಪ್ರಾಯದ ಡ್ಯಾನ್ಸರ್ ದಾರುಣ ಸಾವು

Leave A Reply

Your email address will not be published.