VA Post: 1000 ‘ವಿಲೇಜ್ ಅಕೌಂಟೆಂಟ್’ ಹುದ್ದೆಗೆ ಅರ್ಜಿ ಹಾಕಿದವರಿಗೆ ಸರ್ಕಾರದಿಂದ ಮಹತ್ವದ ಮಾಹಿತಿ!!

Share the Article

VA Post: 1000 ಗ್ರಾಮ ಆಡಳಿತಾಧಿಕಾರಿ(Village Accountant)ಹುದ್ದೆಗಳಿಗೆ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಡಿದೆ. ಈ ಬಗ್ಗೆ ಸರ್ಕಾರ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದೆ.

ಹೌದು, 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಸುಮಾರು 5,70,982 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಹಾಕಿದವರ ಸಂಖ್ಯೆ 9 ಲಕ್ಷಕ್ಕೂ ಹೆಚ್ಚು, ಆದರೆ ಮೂರು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸದ ಕಾರಣ, ಇನ್ನು ಕೆಲವು ಸಮಸ್ಯೆ ಹಿನ್ನೆಲೆ ಅರ್ಜಿ ರಿಜೆಕ್ಟ್ ಸಹ ಆಆಗಿವೆ ಎಂದು ಸರ್ಕಾರ ತಿಳಿಸಿದೆ.

ಪರೀಕ್ಷೆ ಯಾವಾಗ?
1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಸೆಪ್ಟೆಂಬರ್ 29, ಅಕ್ಟೋಬರ್ 27 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 29 ಕ್ಕೆ ಮತ್ತು ಎರಡನೇ ಹಂತದಲ್ಲಿ ಅಕ್ಟೋಬರ್ 27 ರಂದು ಪರೀಕ್ಷೆ ನಡೆಸಲಾಗುತ್ತಿದೆ.

ಎಷ್ಟು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ?
ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮೊದಲ ಹಂತದ ಪರೀಕ್ಷೆ ಸೆಪ್ಟೆಂಬರ್ 29 ಹಾಗೂ ದ್ವಿತೀಯ ಹಂತದ ಪರೀಕ್ಷೆ ಅಕ್ಟೋಬರ್ 27ರಂದು ಎಲ್ಲಾ ಜಿಲ್ಲೆಗಳಲ್ಲೂ ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

Leave A Reply