ಈ ಕಾರಿನ ಬೆಲೆ ಬೈಕಿನಷ್ಟೇ ! ಆದರೆ ಮೈಲೇಜ್‌ ಏನ್‌ ಸೂಪರ್‌ ಕೊಡುತ್ತೆ ಗುರು!!

Maruti Suzuki Alto : ಕಾರು (car) ಖರೀದಿ ಮಾಡಬೇಕಾದರೆ ಉತ್ತಮ ಗುಣಮಟ್ಟದ ಕಾರನ್ನು ಆಯ್ಕೆ ಮಾಡುತ್ತೇವೆ. ಹಾಗೇ ಅಗ್ಗದ ಬೆಲೆಯ ಕಾರಾಗಿದ್ದರೆ ಒಳ್ಳೆಯದಿತ್ತು ಎಂದೆನಿಸುತ್ತದೆ. ಆದರೆ ಎಲ್ಲಾ ಕಾರುಗಳು ಅತ್ಯುತ್ತಮ ಫೀಚರ್ ಇದ್ದು, ಕಡಿಮೆ ಬೆಲೆಗೆ ಲಭ್ಯವಾಗೋದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಹಲವಾರು ಕಾರು ಕಂಪನಿಗಳು ತಮ್ಮ ಸ್ಥಾನವನ್ನು ಬಾಚಿಕೊಂಡಿದೆ. ಅದರಲ್ಲಿ ಮಾರುತಿ ಸುಜುಕಿಯೂ ಒಂದು. ಹೌದು, ಮಾರುತಿ ಸುಜುಕಿ (Maruti Suzuki) ದೇಶದ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಹೊಂದಿದೆ. ಸದ್ಯ ಕಾರು ಖರೀದಿಸಲು ಬಯಸುವವರಿಗೆ ಮಾರುತಿ ಸುಜುಕಿಯ ಆಲ್ಟೊ (Maruti Suzuki Alto) ಉತ್ತಮ ಆಯ್ಕೆಯಾಗಿದ್ದು, ಬುಲೆಟ್‌ (bullet)ನಷ್ಟೇ ಬೆಲೆಗೆ ಈ ಕಾರನ್ನು ಖರೀದಿ ಮಾಡಬಹುದಾಗಿದೆ.

ಮಾರುತಿ ಸುಜುಕಿಯ ಆಲ್ಟೊ ಸಾಕಷ್ಟು ಜನಪ್ರಿಯತೆ ಪಡೆದಿದ್ದು,
ಜನಸಾಮಾನ್ಯರ ಕಾರು ಎಂದೇ ಖ್ಯಾತಿ ಗಳಿಸಿದೆ. ಜನವರಿಯಲ್ಲಿ, ಕಂಪನಿಯು ಆಲ್ಟೊದ 21,411 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ಆಲ್ಟೊ 800 (Alto800) ಮತ್ತು ಆಲ್ಟೊ ಕೆ10 (Alto K10) ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. ಹಾಗೇ ಈ ಕಾರುಗಳ ಬೆಲೆ 3.53 ಲಕ್ಷ ಮತ್ತು 3.99 ಲಕ್ಷ ಆಗಿದೆ.

ಕಂಪನಿ ಕಳೆದ ವರ್ಷ ಆಲ್ಟೊ ಕೆ10 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಈ ಕಾರು ಭಾರೀ ಸದ್ದು ಮಾಡಿದೆ.
ಇದು Std (O), LXi, VXi, ಮತ್ತು VXi+ ಎಂಬಂತೆ 4 ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಆಲ್ಟೋ
6 ಬಣ್ಣಗಳಲ್ಲಿ ಲಭ್ಯವಿದ್ದು, ಕಂಪನಿ ಇತ್ತೀಚೆಗೆ ಕಪ್ಪು ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ. ಆಲ್ಟೊ ಕೆ10 1000cc ಪೆಟ್ರೋಲ್ ಎಂಜಿನ್‌ ಹೊಂದಿದ್ದು, CNG ಕಿಟ್‌ ಕೂಡ ಇದ್ದು, ಈ ಕಾರು 33km ಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ. ಸದ್ಯ ಈ ಕಾರಿನ ಟಾಪ್ ಎಂಡ್ ಮಾಡೆಲ್ ಎಕ್ಸ್ ಶೋ ರೂಂ ಬೆಲೆ 5.95 ಲಕ್ಷ ರೂ. ಆಗಿದೆ.

ಈ ಕಾರು ಗ್ರಾಹಕರಿಗೆ ಭಾರೀ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗೆಯೇ ಈ ಕಾರು Apple CarPlay ಮತ್ತು Android Auto ಗೆ ಬೆಂಬಲದ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ ಮತ್ತು ಡಿಜಿಟೈಸ್ಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಅಲ್ಲದೆ, ಹ್ಯಾಚ್‌ಬ್ಯಾಕ್ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ ಮತ್ತು ಮಾನ್ಯುವೆಲ್ ರೂಪದಲ್ಲಿ ಅಡ್ಜಸ್ಟೇಬಲ್ ORVM ಗಳನ್ನು ಕೂಬ ಪಡೆಯುತ್ತದೆ. ಜೊತೆಗೆ ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ನಂತಹ ಸುರಕ್ಷತಾ ವೈಶಿಷ್ಟ್ಯಗಳು ಲಭ್ಯವಿದೆ.

Leave A Reply

Your email address will not be published.