ಈ ಸಿಮ್‌ ನ ಗ್ರಾಹಕರಿಗೇ ಭರ್ಜರಿ ಗುಡ್‌ ನ್ಯೂಸ್‌ | ಏನ್‌ ಆಫರ್ಸ್‌ ಗುರೂ

ಹೇಳಿ ಕೇಳಿ ಇದು ಡಿಜಿಟಲ್ ಯುಗ… ಮೊಬೈಲ್ ಎಂಬ ಮಾಯಾವಿಯ ಅನ್ವೇಷಣೆಯ ಬಳಿಕ ಎಲ್ಲೆಡೆ ಬಳಕೆಯ ವಿಚಾರದಲ್ಲಿ ಮಹತ್ತರ ಬದಲಾವಣೆಯಾಗಿ, ಈಗ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿರುದರಿಂದ ಇಂಟರ್ನೆಟ್ ಬಳಕೆ ಕೂಡ ವೇಗವಾಗಿ ಏರಿಕೆ ಕಾಣುತ್ತಿದೆ. ಈ ನಡುವೆ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಜಿದ್ದಿಗೆ ಬಿದ್ದಂತೆ ಹೊಸ ಹೊಸ ಆಫರ್ ಗಳನ್ನು ಜನರಿಗೆ ಪರಿಚಯಿಸುತ್ತಿದೆ. ಈ ನಡುವೆ ಬಿಎಸ್ಎನ್ಎಲ್ ಕೂಡ ಆಫರ್ ನೀಡಿದ್ದು, ಇದೀಗ, ವೊಡಫೋನ್ ಐಡಿಯಾ ಕೂಡ ತನ್ನ ಗ್ರಾಹಕರಿಗಾಗಿ 2 ರೀಚಾರ್ಜ್​ ಪ್ಲಾನ್​ಗಳನ್ನು ಪರಿಚಯಿಸಿದ್ದು, ಹೊಸವರ್ಷಕ್ಕೆ ಭಾರೀ ಅಗ್ಗದ ರೀಚಾರ್ಜ್​ ಪ್ಲ್ಯಾನ್ ಬಿಡುಗಡೆ ಮಾಡಲಾಗಿದೆ.

ಭಾರತೀಯ ಟೆಲಿಕಾಂ ಕಂಪನಿಗಳಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡಿರುವ ವೊಡಫೋನ್ ಐಡಿಯಾ ಕಂಪನಿ (VI Company) ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದ್ದು, ಹೀಗಾಗಿ ಹೊಸ ಪ್ಲ್ಯಾನ್​ಗಳನ್ನು (Recharge Plan) ಪರಿಚಯಿಸಿದೆ. ವೊಡಫೋನ್ ಮತ್ತು ಐಡಿಯಾ ಈ ಎರಡು ಕಂಪನಿಗಳು ವಿಲೀನವಾದ ಬಳಿಕ ಈ ಟೆಲಿಕಾಂ ಕಂಪನಿ ಹಲವಾರು ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದೆ.

ವೊಡಫೋನ್ ಐಡಿಯಾದ ಇದೀಗ ತನ್ನ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಎರಡು ರೀಚಾರ್ಜ್​ ಪ್ಲಾನ್​ಗಳನ್ನು ಪರಿಚಯಿಸಿದ್ದು, ಇವೆರಡೂ ಡೇಟಾ ವೋಚರ್​ ಪ್ಲಾನ್​ಗಳಾಗಿವೆ. ಕೈಗೆ ಎಟಕುವ ದರದಲ್ಲಿ ವೊಡಫೋನ್ ಐಡಿಯಾ ಬಂಪರ್ ಆಫರ್ ನೀಡಲು ಮುಂದಾಗಿವೆ. ವೊಡಫೋನ್ ಐಡಿಯಾ 25 ರೂಪಾಯಿ ಮತ್ತು 55 ರೂಪಾಯಿಯ ರೀಚಾರ್ಜ್​ ಪ್ಲಾನ್​ಗಳನ್ನು ಬಿಡುಗಡೆ ಮಾಡಿದೆ.

ವೊಡಫೋನ್ ಐಡಿಯಾ ಟೆಲಿಕಾಂ ಕಂಪನಿ ಡೇಟಾ ವೋಚರ್​ ಪ್ಲ್ಯಾನ್​ಗಳನ್ನೂ ಬಿಡುಗಡೆ ಮಾಡಿದ್ದು, ಅದರಲ್ಲಿ ಮುಖ್ಯವಾಗಿದ್ದು ವಿಐ 19ರೂ, ವಿಐ 29ರೂ, ವಿಐ 75ರೂ, ವಿಐ 108ರೂ ಹಾಗೂ ವಿಐ 151ರೂಪಾಯಿಗಳ ಡೇಟಾ ವೋಚರ್‌ ಪ್ಲ್ಯಾನ್​ಗಳು ಹೆಚ್ಚು ಗಮನ ಸೆಳೆದಿವೆ.

ವಿಐ 25 ರೂಪಾಯಿ ಡೇಟಾ ವೋಚರ್ ಪ್ಲ್ಯಾನ್
ವೊಡಫೋನ್ ಐಡಿಯಾದ ಡೇಟಾ ವೋಚರ್​ ಪ್ಲ್ಯಾನ್​ಗಳಲ್ಲಿ 25 ರೂಪಾಯಿಯ ಡೇಟಾ ವೋಚರ್​ ಪ್ಲಾನ್ ಕೂಡ ಒಂದಾಗಿದೆ. ಈ ರೀಚಾರ್ಜ್​ 24 ಗಂಟೆಗಳ ಮಾನ್ಯತೆ ಪಡೆದಿದೆ. ರೀಚಾರ್ಜ್​ ಮೂಲಕ 1.1 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಈ ರೀಚಾರ್ಜ್​ ಮೂಲಕ 7 ದಿನಗಳವರೆಗೆ ಮ್ಯೂಸಿಕ್​ ಅನ್ನು ಕೇಳಬಹುದಾಗಿದೆ.

ವೊಡಫೋನ್ ಐಡಿಯಾದ 55 ರೂಪಾಯಿ ರೀಚಾರ್ಜ್​ ಪ್ಲ್ಯಾನ್
ವೊಡಫೋನ್ ಐಡಿಯಾ ಟೆಲಿಕಾಂ ಕಂಪನಿ ನೂತನವಾಗಿ ಪರಿಚಯಿಸಿರುವ ಎರಡು ಪ್ಲ್ಯಾನ್ ಗಳಲ್ಲಿ ವಿಐ 55 ರೂಪಾಯಿ ಪ್ಲ್ಯಾನ್ ಕೂಡ ಆಗಿದೆ. ಇದು 4ಜಿ ಡೇಟಾ ವೋಚರ್ ಪ್ಲ್ಯಾನ್ ಆಗಿದ್ದು ಇದರಲ್ಲಿ ಒಟ್ಟು 3.3 ಜಿಬಿ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ. ಈ ಯೋಜನೆಯು ಒಟ್ಟು 7 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಈ ಯೋಜನೆಯು ಒಂದು ತಿಂಗಳವರೆಗೂ ಜಾಹೀರಾತು ಇಲ್ಲದೆ ಮ್ಯೂಸಿಕ್‌ ಅನ್ನು ಕೇಳುವ ಅವಕಾಶವನ್ನು ನೀಡಲಾಗಿದೆ.

ವೊಡಫೋನ್ ಐಡಿಯಾ ಕೆಲವು ಪ್ರೀಪೇಯ್ಡ್​ ಯೋಜನೆಗಳನ್ನೂ ಬಿಡುಗಡೆ ಮಾಡಿದ್ದು, ಈ ಮೂಲಕ ಗ್ರಾಹಕರು ಇನ್ನಷ್ಟು ಡೇಟಾ, ಕರೆ ಸೌಲಭ್ಯಗಳನ್ನು ಪಡೆಯಬಹುದು. ಇದರೊಂದಿಗೆ ಅನ್ಲಿಮಿಟೆಡ್​ ಉಚಿತ ಅನಿಯಮಿತ ಕರೆ ಜೊತೆಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸೌಲಭ್ಯ ಸಹ ಪಡೆಯಬಹುದಾಗಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ. ಇದರೊಂದಿಗೆ ವಿಐ ಮೂವೀಸ್​ ಹಾಗೂ ವಿಐ ಕ್ಲಾಸಿಕ್‌ ಆ್ಯಪ್ಸ್​ಗಳು ಕೂಡ ಲಭ್ಯವಾಗಲಿವೆ.

ವಿಐ 2999 ರೂಪಾಯಿ ಪ್ರೀಪೇಯ್ಡ್​ ರೀಚಾರ್ಜ್​ ಪ್ಲ್ಯಾನ್​
ವಿಐ ಟೆಲಿಕಾಂ ಕಂಪನಿಯ 2,999ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್‌ ವಾರ್ಷಿಕ ವ್ಯಾಲಿಡಿಟಿ ಯೋಜನೆಯಾಗಿದ್ದು, ಈ ರೀಚಾರ್ಜ್​ ಪ್ಲ್ಯಾನ್​ 365 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿವೆ. ಈ ಯೋಜನೆಯು ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ ಒಟ್ಟು 850 ಜಿಬಿ ಡೇಟಾ ಪ್ರಯೋಜನವನ್ನು ಬಳಸುವ ಅವಕಾಶವಿದೆ. ಪ್ರತಿ ದಿನ 2.33 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಪ್ಲ್ಯಾನ್​ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಅನ್ಲಿಮಿಟೆಡ್​ ಉಚಿತ ಡೇಟಾ ಸೌಲಭ್ಯ ಕೂಡ ದೊರೆಯಲಿದೆ.

Leave A Reply

Your email address will not be published.