ಅರ್ಧಕ್ಕರ್ಧ ಇಳಿದ ತರಕಾರಿ ಸೊಪ್ಪಿನ ಬೆಲೆ | ಮಳೆ‌ಕಡಿಮೆಯೇ ದರ ಇಳಿಕೆಗೆ ಕಾರಣ!

ತರಕಾರಿ ಸೇವಿಸಿದಷ್ಟು ನಮ್ಮ ಆರೋಗ್ಯಕ್ಕೆ ಉತ್ತಮ ಆದರೆ ತರಕಾರಿಯ ಬೆಲೆ ಹಬ್ಬದ ಸಮಯದಲ್ಲಿ ಕೈಗೆಟುಕದ ದರದಲ್ಲಿ ಇತ್ತು.ಈಗಾಗಲೇ ನವರಾತ್ರಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತರಕಾರಿಗಳ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಕುಸಿತ ಕಂಡಿದೆ. ಹಾಗೂ ಕೆಲವೊಂದು ಬಾರಿ ತೀವ್ರ ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಏರಿಕೆಯತ್ತ ಮುಖ ಮಾಡಿದ್ದ ತರಕಾರಿ, ಸೊಪ್ಪಿನ ದರ ಈಗ ಇಳಿಕೆಯಾಗುತ್ತಾ ಸಾಗಿದ್ದು, ಹಣ್ಣುಗಳ ಬೆಲೆ ಹೆಚ್ಚಳದತ್ತ ಮುಖ ಮಾಡಿದೆ.

ಎಂ.ಜಿ. ಮಾರುಕಟ್ಟೆಯ ವ್ಯಾಪಾರಿಗಳ ಅಭಿಪ್ರಾಯದ ಪ್ರಕಾರ ಕಳೆದ ವಾರ ಏರಿಕೆಯಾಗಿದ್ದ ತರಕಾರಿ ಬೆಲೆ ಈ ವಾರ ಕಡಿಮೆಯಾಗಿದೆ. ಮಳೆ ನಿಂತ ನಂತರ ತರಕಾರಿ ಬೆಲೆ ಹೆಚ್ಚಳವಾಗಿದ್ದು, ಧಾರಣೆ ಸಾಕಷ್ಟು ಪ್ರಮಾಣದಲ್ಲಿ ಇಳಿದಿದೆ. ಮುಂದಿನ ಒಂದೆರಡು ವಾರಗಳಲ್ಲಿ ಮತ್ತಷ್ಟು ತಗ್ಗಲಿವೆ ಎಂದು ತಿಳಿಸಿದ್ದಾರೆ.

ಬಹುತೇಕ ತರಕಾರಿಗಳ ಬೆಲೆ ಅರ್ಧದಷ್ಟು ಇಳಿಕೆಯಾಗಿದ್ದು, ಬೀನ್ಸ್‌ ಬೆಲೆ ಅರ್ಧದಷ್ಟು ತಗ್ಗಿದ್ದು ಕೆ.ಜಿ.ಗೆ ರೂ. 30 ರಿಂದ 20ಕ್ಕೆ ಕುಸಿದಿದೆ, ಗೆಡ್ಡೆಕೋಸು ದರ ಗಣನೀಯವಾಗಿ ಕಡಿಮೆಯಾಗಿದ್ದು ಕೆ.ಜಿ. ರೂ. 40 ರಿಂದ 30 ಕ್ಕೆ ಕುಸಿದಿದೆ. ಸದಾ ಕಡಿಮೆ ಬೆಲೆಗೆ ಸಿಗುತ್ತಿದ್ದ ಮೂಲಂಗಿ ಸಹ ದುಬಾರಿಯಾಗಿತ್ತು. ಪ್ರಸ್ತುತ ಕೆಜಿಗೆ 30 ರಿಂದ 15 ಕ್ಕೆ ತಲುಪಿದೆ. ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದ ಹಸಿರು ಮೆಣಸಿನ ಕಾಯಿ, ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು ಕೆಜಿಗೆ 60 ರಿಂದ 50 ಕ್ಕೆ ಇಳಿದಿದೆ.

ಇನ್ನು ಕ್ಯಾರೆಟ್‌, ಆಲೂಗಡ್ಡೆ, ಬೆಂಡೆಕಾಯಿ, ಬದನೆಕಾಯಿ, ಹೂ ಕೂಸು, ತೊಂಡಟೆಕಾಯಿ, ಹಾಗಲಕಾಯಿ ದರ ಕಡಿಮೆಯಾಗಿದ್ದು ನುಗ್ಗೆಕಾಯಿ ಕೆ.ಜಿ.100 ರೂ ದಾಟಿದೆ, ಈರುಳ್ಳಿ ಧಾರಣೆ ನಿಧಾನವಾಗಿ ಏರಿಕೆಯತ್ತ ಸಾಗಿದೆ. ಸೌತೆಕಾಯಿ ಸಹ ಅಲ್ಪ ಹೆಚ್ಚಳವಾಗಿದೆ. ವಾರದಿಂದ ವಾರಕ್ಕೆ ಕುಸಿಯುತ್ತಲೇ ಇದ್ದ ಟೊಮೆಟೊ ಈ ವಾರ ಸಹ ಅದೇ ಬೆಲೆಯಲ್ಲಿ ಮುಂದುವರೆದಿದೆ. ಹಾಗೂ ಕೆಜಿಗೆ 30 ರೂ ಇದ್ದ ಟೊಮೆಟೊ 15 ರೂಪಾಯಿಗೆ ಮಾರಾಟವಾಗುತ್ತಿದೆ, ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಕಷ್ಟಕರ ಎಂಬಂತಹ ವಾತಾವರಣ ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ .

ಸೊಪ್ಪು ತರಕಾರಿ ಬಗ್ಗೆ ಕೇಳಿದರೆ ಪಾಲಕ್‌ ಬಿಟ್ಟರೆ ಉಳಿದ ಸೊಪ್ಪು ಧಾರಣೆ ಕುಸಿದಿದ್ದು, ಸಬ್ಬಕ್ಕಿ ಸೊಪ್ಪು ಆರ್ಧದಷ್ಟು ಕಡಿಮೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ಗೆ 40 ರಿಂದ 30 ಕ್ಕೆ ಕುಸಿದಿದೆ, ಸಬ್ಬಕ್ಕಿ 40ರಿಂದ 30 ಕ್ಕೆ ಇಳಿದಿದೆ. ಮತ್ತು ಮೆಂತ್ಯ ಸೊಪ್ಪು, ಪಾಲಕ್‌ ಸೊಪ್ಪು, ಕಟ್ಟಿಗೆ 25ಕ್ಕೆ ಮಾರಕಟ್ಟೆಯಲ್ಲಿ ಮಾರಾಟ ವಾಗುತ್ತಿದೆ.

ಅದಲ್ಲದೆ ಕಳೆದ ಎರಡು ವಾರಗಳಿಂದ ಬೇಳೆ ಕಾಳುಗಳ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಈ ವಾರ ಹೆಚ್ಚಿನ ವ್ಯತ್ಯಾಸವಾಗಿಲ್ಲ, ಬಹುತೆಕ ಸ್ಥಿರವಾಗಿರುವುದು ಎಂ.ಜಿ.ಮಾರುಕಟ್ಟೆಯಲ್ಲಿಕಂಡು ಬಂತು.

ಆದರೆ ಹಣ್ಣುಗಳ ಬೆಲೆ ಮತ್ತಷ್ಟು ದುಬಾರಿಯಾಗುತ್ತಲೇ ಸಾಗಿದ್ದು ಸೇಬು, ಕಿತ್ತಳೆ ಬಿಟ್ಟರೆ ಹಣ್ಣುಗಳ ದರ ಹೆಚ್ಚಳವಾಗಿದೆ. ಕಲ್ಲಂಗಡಿ, ಪಪ್ಪಾಯ ಹಣ್ಣು ಕೆಜಿ.ಗೆ 40 ರೂ ತಲುಪಿದ್ದು, ದಾಳಿಂಬೆ ಮೂಸಂಬಿ, ಸಪೋಟ ಸಹ ದುಬಾರಿಯಾಗಿವೆ. ಬಾಳೆ ಹಣ್ಣಿನ ಬೆಲೆಯೂ ಇಳಿಕೆಯಾಗುತ್ತಿಲ್ಲ. ದ್ರಾಕ್ಷಿ ಸಹ ಮತ್ತಷ್ಟು ದುಬಾರಿಯಾಗಿದೆ.

ಅದಲ್ಲದೆ ಏರಿಳಿತ ಕಂಡಿದ್ದ ಖಾದ್ಯ ತೈಲ ಈ ವಾರ ಹೆಚ್ಚಿನ ವ್ಯತ್ಯಾಸ ಕಂಡಿಲ್ಲ, ಸನ್‌ಪ್ಲವರ್‌ ಕೆ.ಜಿ.ಗೆ 155, ಪಾಮಾಯಿಲ್‌ ಕೆಜಿ ಗೆ 101-105 ಕಡಲೆಕಾಯಿ ಎಣ್ಣೆ ಕೆ.ಜಿ 155 ರಿಂದ 160 ಕ್ಕೆ ಮಾರಾಟವಾಗುತ್ತಿದೆ.

ಒಟ್ಟಿನಲ್ಲಿ ಎಂ.ಜಿ.ಮಾರುಕಟ್ಟೆಯಲ್ಲಿ ಮಾರುಕಟ್ಟೆ ವ್ಯಾಪಾರ ಬಲು ಜೋರಾಗಿ ಸಾಗುತ್ತಿದೆ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.