ಮಸೀದಿ ಎದುರು ಬಾವುಟ ಕಟ್ಟುವಾಗ ಮಾರಾಮಾರಿ | ಎರಡು ಕೋಮುಗಳ ನಡುವೆ ಬಡಿದಾಟ, ದೂರು ಪ್ರತಿದೂರು ದಾಖಲು

ಶೃಂಗೇರಿ ಪಟ್ಟಣದ ವೆಲ್‌ಕಂ ಗೇಟ್‌ ಮಸೀದಿ ಎದುರು ಬಾವುಟ ಕಟ್ಟುವ ವಿಚಾರವಾಗಿ ಮಂಗಳವಾರ ಎರಡು ಕೋಮುಗಳ ನಡುವೆ ಹೊಡೆದಾಟ ನಡೆದಿದ್ದು, ಈ ಸಂಬಂಧ ಎರಡೂ ಕಡೆಯವರಿಂದ ದೂರು ಹಾಗೂ ಪ್ರತಿದೂರು ನೀಡಲಾಗಿದೆ.

ಸೋಮವಾರದಿಂದ ಜಿಲ್ಲೆಯಾದ್ಯಂತ ಶ್ರೀರಾಮ ಸೇನೆ ವತಿಯಿಂದ ದತ್ತಮಾಲ ಅಭಿಯಾನ ಆರಂಭವಾಗಿದ್ದು, ಪಟ್ಟಣದಲ್ಲಿಯೂ ಶ್ರೀ ರಾಮಸೇನೆ ಕಾರ್ಯಕರ್ತರು ದತ್ತಮಾಲೆ ಧರಿಸಿ, ಬ್ಯಾನರ್‌, ಬಟಿಂಗ್ಸ್‌ ಕಟ್ಟುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಘಟನೆ ನಡೆದಿದೆ.

ವೆಲ್‌ಕಂ ಗೇಟ್‌ ಮಸೀದಿ ಮುಂಭಾಗದಲ್ಲಿ ಕೇಸರಿ ಬಾವುಟ ಮತ್ತು ಬಟಿಂಗ್ಸ್‌ಗಳನ್ನು ಕಟ್ಟಲಾಗಿದ್ದು, ಈ ವಿಚಾರವಾಗಿ ಪಟ್ಟಣ ಪಂಚಾಯಿತಿ ಸದಸ್ಯ ರಫಿಕ್‌ ಅಹಮದ್‌ ಮತ್ತು ಶ್ರೀರಾಮ ಸೇನೆ ಮುಖಂಡ ಅರ್ಜುನ್‌ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಮಾತು ಹೊಡೆದಾಟಕ್ಕೆ ನಾಂದಿಯಾಗಿದೆ.

ಈ ಪ್ರಕರಣದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣೆಯಲ್ಲಿ ಎರಡು ಕೋಮುಗಳ ದೂರು, ಪ್ರತಿದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪ ಎಎಸ್‌ಪಿ ಗುಂಜನ್‌ ಆರ್ಯ ಭೇಟಿ ನೀಡಿ ಈ ಪ್ರಕರಣದ ಕುರಿತಂತೆ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.