ಬರೋಬ್ಬರಿ 20 ವರ್ಷದಿಂದ ಪ್ರತಿದಿನ ಮಗಳ ಫೋಟೋ ತೆಗೆದ ತಂದೆ | ಕಾರಣ ಕೇಳಿದರೆ ಖುಷಿ ಪಡ್ತೀರಾ!!!

ಸುಂದರವಾದ ಉಡುಪು ಧರಿಸಿದ್ದಾಗ ಎಲ್ಲರಿಗೂ ಫೋಟೋ ತೆಗಿಸಿಕೊಳ್ಳಬೇಕು ಎಂದೆನಿಸುತ್ತದೆ. ಇನ್ನೂ ಕೆಲವರು ಫೋಟೋ ತೆಗೆಸಲೆಂದೇ ತುಂಬಾ ಚೆನ್ನಾಗಿ ರೆಡಿ ಆಗುತ್ತಾರೆ. ಇಂದಿನ ದಿನಗಳಲ್ಲಿ ಸಣ್ಣ ಮಕ್ಕಳ ಫೋಟೋ ಕ್ಲಿಕ್ಕಿಸಿ ಅದನ್ನು ಫ್ರೇಮ್ ಆಗಿ ಅಥವಾ ವಾಲ್‌ ಪೇಪರ್‌ ಆಗಿ ಇಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳ ಫೋಟೋವನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 20 ವರ್ಷದಿಂದ ಸೆರೆ ಹಿಡಿದು ಆ ಫೋಟೋಗಳನ್ನು ಭದ್ರವಾಗಿಟ್ಟಿದ್ದಾನೆ.

ಇಂದಿನ ದಿನಗಳಲ್ಲಿ ಮಕ್ಕಳ ಬಾಲ್ಯವನ್ನು ಮೊಬೈಲ್‌ ಮೂಲಕ ಫೋಟೋವಾಗಿ ಸೆರೆ ಹಿಡಿಯುವುದು ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೆ ಹಲವರು ತಮ್ಮ ಮಕ್ಕಳ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಡಚ್ಚ್‌ ದೇಶದ ಸಿನಿಮಾ ನಿರ್ದೇಶಕ ಫ್ರಾನ್ಸ್ ಹಾಫ್ಮೀಸ್ಟರ್ ಎಂಬಾತ ತನ್ನ ಮುದ್ದಾದ ಮಗಳ ಫೋಟೋವನ್ನು, ಆಕೆ ಹುಟ್ಟಿದ ದಿನದಿಂದ ಇದುವರೆಗೆ ಸೆರೆ ಹಿಡಿದಿದ್ದಾರೆ.

ಮಗಳ ಹೆಸರು ಲೊಟ್ಟೆ. ಆಕೆಗೆ ಈಗ 20 ವರ್ಷವಾಗಿದ್ದು, ಅಷ್ಟೂ ವರ್ಷದಿಂದ ಸೆರೆ ಹಿಡಿದ ಫೋಟೋವನ್ನು ಫ್ರಾನ್ಸ್ ಹಾಫ್ಮೀಸ್ಟರ್ ಈಗ ಟೈಮ್ ಲ್ಯಾಪ್ಸ್‌ ಮೂಲಕ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಆಪ್ಲೋಡ್‌ ಮಾಡಿದ್ದಾರೆ.

ಇನ್ನೂ ಈ ವೀಡಿಯೋದಲ್ಲಿ ಲೊಟ್ಟೆ ಮಗುವಾಗಿದ್ದಾಗ , ಬಾಲ್ಯ, ಯೌವನದ ಹಲವಾರು ಮುದ್ದಾದ ಫೋಟೋಗಳು ಸೆರೆಯಾಗಿವೆ. 20 ವರ್ಷ ಪ್ರತಿದಿನ ತೆಗೆದ ಫೋಟೋಗಳಲ್ಲಿ ಮಗುವಾಗಿದ್ದಾಗ, ಬಾಲ್ಯ, ಯೌವನದ ಹಂತದಲ್ಲಿ ಆಕೆಯ ಮುಖ ಬದಲಾದ ಫೋಟೋಗಳನ್ನು ಈ ವಿಡಿಯೋದಲ್ಲಿ ಹಾಕಿದ್ದಾರೆ. ಹಾಗೇ ರೆಡ್ಡಿಟ್‌ ನಲ್ಲಿ ಈ ವಿಡಿಯೋ ಆಪ್ಲೋಡ್‌ ಆಗಿದ್ದು, ಇದೀಗ ವೈರಲ್‌ ಆಗುತ್ತಿದೆ.

Leave A Reply

Your email address will not be published.