EPFO Pension Rules : ನಿಮಗೆ ತಿಳಿದಿದೆಯೇ? PF 10 ವರ್ಷದ ಸೇವೆಯ ನಂತರ ಪಿಂಚಣಿಗೆ ಇರುವ ನಿಯಮ ಯಾವುದೆಂದು?

ಕಳೆದು ಹೋದ ದಿನಗಳಿಗೆ ಚಿಂತಿಸಿ ಫಲ ಇಲ್ಲ. ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಎಚ್ಚರ ವಹಿಸಿ.

ಹೌದು ನೀವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಜೊತೆಗೆ ನೀವು 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದರೆ ನೀವು ಸಹ ಪಿಂಚಣಿಗೆ ಅರ್ಹರಾಗುತ್ತೀರಿ.

ಪಿಎಫ್ ಪಿಂಚಣಿಯು ಖಾತರಿ ಪಡಿಸುವಿಕೆ :
• ಇಪಿಎಫ್ ಪಿಂಚಣಿ ಯೋಜನೆಗೆ ಸಕ್ರಿಯ ಕೊಡುಗೆಯೊಂದಿಗೆ 10 ವರ್ಷಗಳ ಅವಧಿ.
• 58 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
• ಕಡಿಮೆ ದರದಲ್ಲಿ ಇಪಿಎಸ್ ಪಿಂಚಣಿಯಿಂದ ಹಿಂಪಡೆಯಲು ನೀವು ಕನಿಷ್ಠ 50 ವರ್ಷ ವಯಸ್ಸನ್ನು ಕಡ್ಡಾಯವಾಗಿ ತಲುಪಿರಬೇಕು.

ಮುಖ್ಯವಾಗಿ ಇಪಿಎಫ್‌ಒ ನಿಯಮಗಳ ಪ್ರಕಾರ, 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಯಾವುದೇ ಉದ್ಯೋಗಿಯು ಅಥವಾ ಕಾರ್ಮಿಕರು ಕೆಲಸವನ್ನು ಪೂರ್ಣಗೊಳಿಸಿದ ನಂತರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಈ ಒಂದು ಷರತ್ತನ್ನು ಪೂರೈಸುವ ಉದ್ಯೋಗಿ ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಇಪಿಎಫ್‌ಒ ನಿಯಮಗಳು ಹೇಳುತ್ತವೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಹಾಗೂ ಕಾರ್ಮಿಕರ ಸಂಬಳದ ಹೆಚ್ಚಿನ ಭಾಗವು ಭವಿಷ್ಯ ನಿಧಿಗೆ ಹೋಗುತ್ತದೆ. ಪ್ರತಿ ತಿಂಗಳು ಈ ಭಾಗವನ್ನು ಸಂಬಳದಿಂದ ಕಡಿತಗೊಳಿಸಿ ಉದ್ಯೋಗಿಯ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.

10 ವರ್ಷಗಳ ನಂತರ ಯಾರು ಪಿಂಚಣಿಗೆ ಅರ್ಹರೆಂದರೆ ಇಪಿಎಫ್‌ಒ ನಿಯಮಗಳ ಪ್ರಕಾರ: ಖಾಸಗಿ ಕಂಪನಿಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಉದ್ಯೋಗಿ ಪಿಂಚಣಿಗೆ ಅರ್ಹರಾಗುತ್ತಾರೆ. ಇದರಲ್ಲಿ ನೌಕರನ ಏಕೈಕ ಷರತ್ತು ಎಂದರೆ 10 ವರ್ಷಗಳ ಕೆಲಸದ ಅವಧಿಯನ್ನು ಪೂರ್ಣಗೊಳಿಸಬೇಕು. 9 ವರ್ಷ 6 ತಿಂಗಳ ಕೆಲಸದ ಅವಧಿಯನ್ನು 10 ವರ್ಷಗಳು ಎಂದು ಪರಿಗಣಿಸಲಾಗುತ್ತದೆ. ಆದರೆ ಕೆಲಸದ ಅವಧಿಯು 9 ವರ್ಷಗಳಿಗಿಂತ ಕಡಿಮೆಯಿದ್ದರೆ, ಅದನ್ನು 9 ವರ್ಷಗಳವರೆಗೆ ಮಾತ್ರ ಎಂದು ಗಮನಹರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಇಪಿಎಫ್‌ಒ ನಿಯಮಗಳ ಪ್ರಕಾರ:
ಉದ್ಯೋಗಿಯ ಮೂಲ ವೇತನ ಮತ್ತು ಡಿಎಯ ಶೇಕಡಾ 12ರಷ್ಟು ಪ್ರತಿ ತಿಂಗಳು ಪಿಎಫ್ ಖಾತೆಗೆ ಹೋಗುತ್ತದೆ. ಅದರಲ್ಲಿ ಉದ್ಯೋಗಿಯ ಸಂಬಳದಿಂದ ಕಡಿತಗೊಳಿಸಲಾದ ಸಂಪೂರ್ಣ ಭಾಗವು ಇಪಿಎಫ್‌ಗೆ ಹೋಗುತ್ತದೆ. ಆದರೆ ಉದ್ಯೋಗದಾತ ಕಂಪನಿಯ ಷೇರುಗಳ 8.33% ನೌಕರರ ಪಿಂಚಣಿ ಯೋಜನೆಗೆ (ಇಪಿಎಸ್) ಮತ್ತು 3.67%ರಷ್ಟು ಪ್ರತಿ ತಿಂಗಳು ಇಪಿಎಫ್ ಕೊಡುಗೆಗೆ ಹೋಗುತ್ತದೆ. ಈ ಹಣ ಪಿಂಚಣಿಯ ರೂಪದಲ್ಲಿ ಪಿಎಫ್ ಖಾತೆಗೆ ಜಮಾ ಆಗುತ್ತದೆ.

ಇಪಿಎಫ್‌ಒ ನಿಯಮಗಳ ಪ್ರಕಾರ:
10 ವರ್ಷಗಳ ನಡುವಿನ ಎಲ್ಲಾ ಉದ್ಯೋಗಗಳನ್ನು ಮಾಹಿತಿಯ ದಾಖಲೆಗಳನ್ನು ಸೇರಿಸುವ ಮೂಲಕ ಕೆಲಸದ ಅವಧಿಯನ್ನು ಪೂರ್ಣಗೊಳಿಸಿದವರು ಮಾತ್ರ 10 ವರ್ಷದ ಪಿಂಚಣಿಗೆ ಅರ್ಹರಾಗಿರುತ್ತಾರೆ. ಆದರೆ ಉದ್ಯೋಗಿ ತನ್ನ ಯುಎಎನ್(UAN) ಸಂಖ್ಯೆಯನ್ನು ಬದಲಾಯಿಸಬೇಕಾಗಿಲ್ಲ. ಅಂದರೆ, ಒಟ್ಟು 10 ವರ್ಷಗಳ ಸೇವೆಯ ಅವಧಿಗೆ ಕೇವಲ ಒಂದು UAN ಮಾತ್ರ ಇರಬೇಕು. ಒಂದು ನಿಮ್ಮ ಯುಎಎನ್ ಸಂಖ್ಯೆಗಳು ಒಂದುಕ್ಕಿಂತ ಜಾಸ್ತಿ ಇದ್ದರೆ ಜಾಲ್ತಿ ಇರುವ ಖಾತೆಗೆ ವರ್ಗಾಯಿಸಲು ಅವಕಾಶವಿದ್ದು ಅಗತ್ಯ ದಾಖಲೆಗಳು ಸರಿಯಾಗಿರಬೇಕೆಂದು ಇಪಿಎಫ್‌ಒ ನಿಯಮ ಹೇಳುತ್ತದೆ. ಒಂದು ವೇಳೆ ನಿಮ್ಮ ಪಿಎಫ್ ಖಾತೆಯಲ್ಲಿ ಹೆಸರು, ಬ್ಯಾಂಕ್ ದಾಖಲೆ, ಇತರೆ ಕೆವೈಸಿ ವ್ಯತ್ಯಾಸಗಳು ಕಂಡು ಬಂದರೆ ಖಾತೆಯನ್ನು ನೀವೆ ಪಿಎಫ್ ಕಚೇರಿಯಿಂದ ಸರಿಪಡಿಸಿಕೊಳ್ಳಬೇಕಾಗುತ್ತದೆ. ಮತ್ತೊಂದೆಡೆ, ಉದ್ಯೋಗದಲ್ಲಿ ಬದಲಾವಣೆಯಾದರೆ, ಉದ್ಯೋಗಿಗಳು ಬೇರೆ ಕಂಪನಿಗೆ ಹೋದಾಗ ತಮ್ಮ ಯುಎಎನ್ ಸಂಖ್ಯೆಯನ್ನು ಬದಲಾಯಿಸದಂತೆ ನೋಡಿಕೊಳ್ಳಬೇಕಾಗುತ್ತದೆ. ಉದ್ಯೋಗಿಗಳು ತಮ್ಮ ಯುಎಎನ್ ಸಂಖ್ಯೆಯನ್ನು ಹಾಗೆಯೇ ಇರಿಸಿಕೊಳ್ಳಬೇಕಾಗುತ್ತದೆ.

UAN ಸಂಖ್ಯೆಯ ಆಧಾರದ ಮೇಲೆ ಉದ್ಯೋಗಿಯ 10 ವರ್ಷಗಳ ಅವಧಿಯನ್ನು ನೌಕರರ ಪಿಂಚಣಿ ಯೋಜನೆ ಇಪಿಎಸ್ ಎನ್ನುವುದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಯೋಜನೆಯಾಗಿದ್ದು, ಇದರ ಉದ್ದೇಶ ಸಾಮಾಜಿಕ ಭದ್ರತೆಯಾಗಿದೆ. ಈ ಯೋಜನೆಯು ಸಂಘಟಿತ ವಲಯದಲ್ಲಿ ಕೆಲಸ ಮಾಡುವ ನೌಕರರಿಗೆ 58 ವರ್ಷ ವಯಸ್ಸಿನಲ್ಲಿ ನಿವೃತ್ತಿಯ ನಂತರ ಪಿಂಚಣಿ ಸಿಗುತ್ತದೆ. ಉದ್ಯೋಗಿ ಅಥವಾ ಕಾರ್ಮಿಕರು ಕನಿಷ್ಠ ನಿರಂತರ ಅಥವಾ ನಿರಂತರವಲ್ಲದ ಅಂದರೆ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಅಂದರೆ ಇದರ ಅಡಿಯಲ್ಲಿ ನೌಕರರು 10 ವರ್ಷಗಳ ಕೆಲಸವನ್ನು ಹೊಂದಿರಬೇಕು. ಕೆಲಸದ ಮಧ್ಯದಲ್ಲಿ ಅಂತರವಿದ್ದರೆ ಆ ಅಂತರವನ್ನು ತೆಗೆದು 10 ವರ್ಷ ಕೆಲಸ ಮಾಡಬೇಕು. ಇದಕ್ಕೆ ಕಾರಣವೆಂದರೆ ಕೆಲಸ ಬದಲಾಯಿಸಿದ ನಂತರವೂ ಯುಎಎನ್ ಒಂದೇ ಆಗಿರುತ್ತದೆ ಮತ್ತು ಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಸಂಪೂರ್ಣ ಹಣವು ಅದೇ ಯುಎಎನ್‌ನಲ್ಲಿ ಪ್ರತಿಫಲಿಸುತ್ತದೆ. ಎರಡು ಕೆಲಸಗಳ ನಡುವೆ ಸ್ವಲ್ಪ ಸಮಯದ ಅಂತರವಿದ್ದರೆ, ಅದನ್ನು ತೆಗೆದುಹಾಕುವ ಮೂಲಕ ಅಧಿಕಾರಾವಧಿಯನ್ನು ಪರಿಗಣಿಸಲಾಗುತ್ತದೆ. ಅಂದರೆ, ಹಿಂದಿನ ಕೆಲಸ ಮತ್ತು ಹೊಸ ಕೆಲಸದ ನಡುವಿನ ಅಂತರವನ್ನು ತೆಗೆದುಹಾಕಲಾಗುತ್ತದೆ ಮತ್ತು ಅದನ್ನು ಹೊಸ ಕೆಲಸಕ್ಕೆ ಸೇರಿಸಲಾಗುತ್ತದೆ.

Leave A Reply

Your email address will not be published.