Rain Alert: ಅಬ್ಬರಿಸಿದ ಮಳೆರಾಯ; ಸಿಡಿಲು ಬಡಿದು 12 ಜನರ ಸಾವು
Rain Alert: ಸಿಡಿಲು ಬಡಿದು ಮೂವರು ಮಕ್ಕಳು ಸೇರಿ 12 ಮಂದಿ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ವಾ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: Operation Mistake: ನಾಲ್ಕು ವರ್ಷದ ಬಾಲಕಿಯ ಬೆರಳಿಗೆ ಚಿಕಿತ್ಸೆ ಮಾಡುವ ಬದಲು ನಾಲಗೆಗೆ ಅಪರೇಷನ್ ಮಾಡಿದ ವೈದ್ಯರು
”ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತಿರುವ ಮುಂಗಾರು ಪೂರ್ವ ಮಳೆಗೆ ಮುರ್ಷಿದಾಬಾದ್ ಮಾಲ್ವಾ ಜಿಲ್ಲೆಯಲ್ಲಿ ವ್ಯಾಪಕ ಹಾನಿಯುಂಟಾಗಿದೆ. ಗುರುವಾರ ಮಧ್ಯಾಹ್ನ ಸಿಡಿಲು ಬಡಿದು 12 ಜನ ಸಾವಿಗೀಡಾಗಿದ್ದಾರೆ,” ಎಂದು ಮಾಲ್ಟಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಕುಮಾರ್ ಮಾದವ್ ತಿಳಿಸಿದರು.
ಇದನ್ನೂ ಓದಿ: Mangaluru: ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನ
ಘಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಕ್ಕೆ ತಲಾ 2ಲಕ್ಷ ರೂ.ಪರಿಹಾರ ಘೋಷಿಸಿದರು. ದುರ್ಘಟನೆಯಲ್ಲಿ ಗಾಯಗೊಂಡಿದ್ದ ಹಲವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ.
ಮುಂದಿನ ಕೆಲವು ದಿನಗಳವರೆಗೆ ಕೇರಳದಲ್ಲಿ ಮಳೆ ಬಿರುಸುಗೊಳ್ಳುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 18ರಿಂದ 20ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಮೇ 18, ಪಟ್ಟಣಂತಿಟ್ಟ, ಅಲಪುಳ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಮೇ 19 ಹಾಗೂ ಇನ್ನುಳಿದ ಏಳು ಜಿಲ್ಲೆಗಳಲ್ಲಿ ಮೇ 20ರಂದು ಆರೆಂಜ್ ಅಲರ್ಟ್’ ಘೋಷಿಸಿಲಾಗಿದೆ.
ಆಂಧ್ರಪದೇಶದ ಹಲವು ಭಾಗಗಳಲ್ಲಿ ಮೇ 17 ರಿಂದ 20 ರವರೆಗೆ ಗುಡುಗು, ಮಿಂಚು ಸೇರಿದಂತೆ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಇಲಾಖೆಯು ಮುನ್ಸೂಚನೆ ನೀಡಿದೆ.
[…] […]