Atal Setu Bridge: ಅಟಲ್ ಸೇತು ಕುರಿತು ವಿಡಿಯೋ ಮಾಡಿದ ರಶ್ಮಿಕಾ ಮಂದಣ್ಣ : ರಶ್ಮಿಕಾ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಮೋದಿ

Share the Article

Atla Setu Bridge: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ (Mumbai ) ನಿರ್ಮಿಸಲಾಗಿರುವ ದೇಶದ ಅತಿ ಉದ್ದದ ಸಮುದ್ರ ಸೇತುವೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್(MTIL) ನಲ್ಲಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಪ್ರಯಾಣಿಸಿದ್ದು, ಈ ವೇಳೆ  ಅಟಲ್ ಸೇತುವೆ(Atal Setu Bridge)  ಮೇಲೆ ಹೋಗುವಾಗ ಕಾರಿನಲ್ಲಿ ಕುಳಿತು ವಿಡಿಯೋ ಮಾತನಾಡುತ್ತಿರುವುದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ(Prime minister Narendra Modi) ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Rape Case: ಟಿವಿ ನಿರೂಪಕಿ ಮೇಲೆ ಅರ್ಚಕನಿಗೆ ಕಣ್ಣು- ದೇವಸ್ಥಾನಕ್ಕೆ ಬಂದಾಗ ತೀರ್ಥದಲ್ಲಿ ನಿದ್ರೆ ಮಾತ್ರೆ ಹಾಕಿ ಮಾಡೇಬಿಟ್ಟ ರೇಪ್ !!

ಜನರ ಬದುಕನ್ನು ಸುಧಾರಿಸಿ, ಅವರ ಬದುಕನ್ನು ಬೆಳೆಯುವುದರಲ್ಲಿ ಹೆಚ್ಚಿನ ತೃಪ್ತಿ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee) ಅವರ ಗೌರವಾರ್ಥವಾಗಿ MTIL ಗೆ ಅಟಲ್ ಸೇತು(Atal setu) ಎಂದು ಹೆಸರಿಸಲಾಯಿತು ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: Gold Price: ಚಿನ್ನದ ದರದಲ್ಲಿ ಇಳಿಕೆ !!

“ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈ ಈ ಎಲ್ಲಾ ಪ್ರಯಾಣಗಳು ಅದ್ಭುತವಾಗಿದೆ ಮತ್ತು ಉತ್ತಮ ಮೂಲಸೌಕರ್ಯದಿಂದಾಗಿ ಇದು ಸಾಧ್ಯವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶ ಉತ್ತಮ ಪ್ರಗತಿ ಸಾಧಿಸಿದೆ. ಈ ಸೇತುವೆಯು ಏಳು ವರ್ಷಗಳಲ್ಲಿ ಪೂರ್ಣಗೊಂಡಿದೆ ಎಂದು ನನಗೆ ಇತ್ತೀಚೆಗೆ ತಿಳಿದುಬಂದಿದೆ. ಈ 20 ಕಿಲೋಮೀಟ‌ರ್ ಪ್ರಯಾಣ ಅದ್ಭುತವಾಗಿದೆ ನಾನು ಇದನ್ನು ಮೊದಲು ನೋಡಿದಾಗ ನಾನು ಮೂಕವಿಸ್ಮಿತಳಾದೆ. ಈ ಯುವ ಭಾರತವು ಅತ್ಯಂತ ವೇಗವಾಗಿ ಮತ್ತು ಚುರುಕಾಗಿ ಚಲಿಸುತ್ತಿದೆ ಈಗ ನಾವು ಅಭಿವೃದ್ಧಿಗೆ ಮತ ಹಾಕಬೇಕಾಗಿದೆ ಎಂದ ರಶ್ಮಿಕ ಮಂದಣ್ಣ(Rasmika mandanna) ಹೇಳಿದ್ದಾರೆ .ಇದೀಗ ಈ ದೃಶ್ಯಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTILL) ಗೆ ಚಾಲನೆ ನೀಡಿದ್ದು ಗೊತ್ತೇ ಇದೆ. ಇದು ದೇಶದ ಅತಿ ಉದ್ದದ ಸೇತುವೆ ಯಾಗಿದ್ದು, ಅಟಲ್ ಸೇತುವಿನ ಒಟ್ಟು ಉದ್ದ 21.8 ಕಿಮೀ ಮತ್ತು ಅದರಲ್ಲಿ 16 ಕಿಮೀಗಿಂತ ಹೆಚ್ಚು ಅರಬ್ಬಿ ಸಮುದ್ರದಲ್ಲಿದೆ ಎಂಬುದು ಗಮನಾರ್ಹ.

Leave A Reply