Bigg Boss 16 : ಬಿಗ್ ಬಾಸ್ ಮನೆಗೆ ಬಂದ ಛೋಟಾ ಪ್ಯಾಕೆಟ್ ಬಡಾ ಧಮಾಕ | ಅಬ್ದು ರೋಝಿಕ್ ಬಗ್ಗೆ ಇಲ್ಲಿದೆ ವಿಶೇಷ ಮಾಹಿತಿ !!!

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಟಿವಿ ಶೋಗಳಲ್ಲಿ ಬಿಗ್ ಬಾಸ್ ಒಂದಾಗಿದ್ದು, ಇತ್ತೀಚಿನ ಸೀಸನ್ ಅಧಿಕೃತವಾಗಿ ಪ್ರಾರಂಭವಾಗುವ ಮೊದಲು ಎಲ್ಲರ ಗಮನಸೆಳೆದಿರುವ ಬಿಗ್ ಬಾಸ್ ಜನರ ನೆಚ್ಚಿನ ಮನರಂಜನಾ ಕಾರ್ಯಕ್ರಮವಾಗಿದೆ. ಕಳೆದ ಹದಿಮೂರು ವರ್ಷಗಳಿಂದ ಹೋಸ್ಟ್ ಮಾಡಿದ ಬಹುನಿರೀಕ್ಷಿತ ಸಲ್ಮಾನ್ ಖಾನ್ ಇತ್ತೀಚಿನ ಸೀಸನ್‌ಗೆ ಹೋಸ್ಟ್ ಆಗಿ ಮರಳಿದ್ದಾರೆ.

ಕಳೆದ ಬಾರಿ ‘ಹಿಂದಿ ಬಿಗ್ ಬಾಸ್​​’ಗೆ ಕಾಡಿನ ಥೀಮ್ ನೀಡಲಾಗಿ, ತೇಜಸ್ವಿ ಪ್ರಕಾಶ್ ಅವರು ಕಳೆದ ಸೀಸನ್​ ವಿನ್ನರ್ ಆದರೆ, ಪ್ರತೀಕ್ ಸೆಹಜ್​ಪಾಲ್​ ಅವರು ರನ್ನರ್​ ಅಪ್​ ಆಗಿದ್ದಾರೆ. ಈ ಶೋ ಮುಗಿದ ಬಳಿಕ ತೇಜಸ್ವಿ ಪ್ರಕಾಶ್ ಸಾಕಷ್ಟು ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದ್ದಾರೆ.

ಯಾರು ಬಿಗ್ ಬಾಸ್ ಮನೆಯಲ್ಲಿ ಜಾಗ ಪಡೆಯುತ್ತಾರೆ ಎಂಬ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಅಖಾಡದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುವುದು ಜಗಜ್ಜಾಹಿರಾತಾಗಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ನಡೆಸಿಕೊಡುವ ಬಿಗ್ ಬಾಸ್ ಶೋನ 16ನೇ (Bigg Boss 16 ) ಸೀಸನ್‌ಗೆ ಗ್ರ್ಯಾಂಡ್‌ ಓಪನಿಂಗ್‌ (Grand Opening) ಸಿಕ್ಕಿದ್ದು, 16 ಸ್ಪರ್ಧಿಗಳು ಒಂಟಿ ಮನೆಗೆ ಎಂಟ್ರಿ ನೀಡಿ ಲಾಕ್‌ ಆಗಿದ್ದಾರೆ.

ವಿಶೇಷತೆಯಿಂದ ಕೂಡಿರುವ ಬಿಗ್ ಬಾಸ್ ಈ ಬಾರಿಯೂ ಕೂಡ ‘ಹಿಂದಿ ಬಿಗ್​ ಬಾಸ್​ 16’ ತುಂಬ ಡಿಫರೆಂಟ್​ ಆಗಿರಲಿದ್ದು, ಹೊಸ ಪ್ರೋಮೋದಲ್ಲಿ ಈ ವರ್ಷದ ಕಾರ್ಯಕ್ರಮ ಪೂರ್ತಿ ಭಿನ್ನವಾಗಿರಲಿದೆ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ. ಹಿಂದಿಯ ಬಿಗ್‌ ಬಾಸ್‌ 16ನೇ ಸೀಸನ್‌ (Bigg Boss Season 16) ಅಕ್ಟೋಬರ್ 1ರಂದು ಪ್ರಾರಂಭವಾದ ಜನಪ್ರಿಯ ರಿಯಾಲಿಟಿ ಶೋ (Reality show) ಇದರ ಕುರಿತಾದ ಪ್ರೆಸ್‌ ಮೀಟಿಂಗ್‌ ಗ್ರ್ಯಾಂಡ್‌ ಆಗಿ ನೆರವೇರಿದ್ದು, ಮೊದಲ ಸ್ಪರ್ಧಿಯನ್ನು ನಿರೂಪಕ, ನಟ ಸಲ್ಮಾನ್ ಖಾನ್ ಗ್ರಾಂಡ್ ಆಗಿ ವೆಲ್‌ ಕಮ್‌ ಮಾಡಿದ್ದಾರೆ.

ತಜಕಿಸ್ತಾನಿ ಗಾಯಕರಾಗಿರುವ ವಿಶ್ವದ ಅತ್ಯಂತ ಚಿಕ್ಕ ಪ್ರಾಯದ ಗಾಯಕ ಎಂಬ ದಾಖಲೆ ಹೊಂದಿರುವ ಅಬ್ದು ರೋಝಿಕ್ ಸೋಷಿಯಲ್​ ಮೀಡಿಯಾದಲ್ಲಿ ಹೆಸರು ಗಳಿಸಿರುವ ಗಾಯಕರಾಗಿದ್ದು, ‘ಓಹಿ ದಿಲಿ ಜೋರ್’ ಎಂಬ ತಾಜಿಕ್ ರ್‍ಯಾಪ್ ಹಾಡಿನ ಮೂಲಕ ಸಖತ್‌ ಫೇಮಸ್‌ ಆಗಿದ್ದ ಈತ ಒಂಟಿ ಮನೆಯಲ್ಲಿ ಮನರಂಜನೆ ಮೂಲಕ ರಂಜಿಸಿ ಗೆಲ್ಲಲು ಬಂದಿದ್ದಾರೆ.

ಬಿಗ್ ಬಾಸ್ 16 ರ ಮೊದಲ ಸ್ಪರ್ಧಿಯಾಗಿ ಮೊಟ್ಟ ಮೊದಲು ಸಲ್ಮಾನ್ ಖಾನ್ ಜೊತೆ ವೇದಿಕೆ ಹಂಚಿಕೊಂಡಿದ್ದು, 19ರ ಹರೆಯದ ಛೋಟಾ ಮ್ಯಾನ್ ಆಗಿರುವ ತಜಕಿಸ್ತಾನ್ ಗಾಯಕ ಅಬ್ದು ರೋಝಿಕ್ (Abdu Rozik) ಈ ಸೀಸನ್ 16ರ ಅಧಿಕೃತ ಸ್ಪರ್ಧಿ ಎಂದು ಘೋಷಿಸಲಾಗಿದೆ. ಗಾಯಕ Avlod Media ಎಂಬ ಯೂಟ್ಯೂಬ್ ಚಾನಲ್ ಮೂಲಕ ಸಖತ್‌ ಫೇಮಸ್‌ ಆಗಿರುವ ಛೋಟಾ ಮ್ಯಾನ್ ತಮ್ಮ ಚಾನಲ್‌ 580k ಚಂದಾದಾರರನ್ನು ಹೊಂದಿರುವ ಹಿರಿಮೆ ಯನ್ನು ಹೊಂದಿದ್ದಾರೆ. ಅಬ್ದು ರೋಜಿಕ್ ರವರಿಗೆ ಇನ್ಸ್ಟಾಗ್ರಾಮ್‌ ನಲ್ಲೂ ಕೂಡ 3.5 ಮಿಲಿಯನ್ ಫಾಲೋವರ್ಸ್‌ ಗಳಿದ್ದಾರೆ.

ಅಬ್ದು ರೋಝಿಕ್ ಮೂಲತಃ ತಜಕಿಸ್ತಾನ್ ಗಾಯಕರಾಗಿ ಗುರುತಿಸಿ ಕೊಂಡಿದ್ದು, ಮೊದಲ ಸ್ಪರ್ಧಿಯನ್ನು ಸಲ್ಮಾನ್‌ ಖಾನ್‌ ಪರಿಚಯಿಸಿ ಮೊದಲು ಪ್ರೇಕ್ಷಕರಿಗೆ ಕೆಲವು ಹಾಡುಗಳನ್ನು ಹಾಡಲು ಕೇಳಿಕೊಂಡಿದ್ದಾರೆ. ವೇದಿಕೆಯಲ್ಲಿ ಅಬ್ದು ‘ಮೈನೆ ಪ್ಯಾರ್ ಕಿಯಾ ಚಿತ್ರದ ದಿಲ್ ದೀವಾನಾ’ ಹಾಡನ್ನು ಹಾಡುವ ಮೂಲಕ ಸಲ್ಮಾನ್ ಮತ್ತು ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಬ್ದು ರೋಝಿಕ್ ಸಲ್ಮಾನ್ ಒಟ್ಟಿಗೆ ಕೆಲಸ ಮಾಡಿರುವ ಸ್ಪರ್ಧಿಯಾಗಿದ್ದು, “ಕಿಸಿ ಕಾ ಭಾಯ್ ಕಿಸಿ ಕಿ ಜಾನ್ “ಎಂಬ ಸಲ್ಲು ಭಾಯ್‌ ನ ಮುಂಬರುವ ಭಾರತೀಯ ಹಿಂದಿ ಭಾಷೆಯ ಆಕ್ಷನ್ ಹಾಸ್ಯ ಚಲನಚಿತ್ರದ ಭಾಗವಾಗಿದ್ದಾರೆ.

ರಿಯಾಲಿಟಿ ಶೋಗೆ ಸೇರುವ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿರುವ ಅಬ್ದು, “ನನಗೆ ತುಂಬಾ ಸಂತೋಷವಾಗಿದೆ. ನಾನು ಮನೆಯೊಳಗೆ ಹೋಗಲು ಉತ್ಸುಕನಾಗಿದ್ದು, ಎಲ್ಲರೊಂದಿಗೆ ಪ್ರೀತಿಯಿಂದ ಇರಲು ಪ್ರಯತ್ನಿಸುತ್ತೇನೆ, ಆದರೆ ದಯವಿಟ್ಟು ನನ್ನೊಂದಿಗೆ ಜಗಳವಾಡಬೇಡಿ” ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ. ಇದರ ಜೊತೆಗೆ ತನಗೆ ವೋಟ್‌ ಮಾಡುತ್ತಾ, ಬೆಂಬಲ ನೀಡಿ ಎಂದು ವೀಕ್ಷಕರಿಗೆ ಕೇಳಿಕೊಂಡಿದ್ದಾರೆ.

ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಲ್ಮಾನ್ ಖಾನ್ ರೊಂದಿಗೆ ಫೋಟೊ ಹಾಕಿಕೊಂಡು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಅವಕಾಶ ಕೊಟ್ಟ ಭಾಯಿ ಸಲ್ಲುಗೆ ಧನ್ಯವಾದ ಅರ್ಪಿಸಿ, ಸಂತೋಷ ವ್ಯಕ್ತಡಿಸಿದ್ದಾರೆ.

Leave A Reply

Your email address will not be published.