KGID ಆನ್ಲೈನ್ ಸೇವೆ ಆರಂಭ – ರಾಜ್ಯ ಸರಕಾರಿ ನೌಕರರಿಗೆ ಮುಖ್ಯವಾದ ಮಾಹಿತಿ

ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಅವಧಿ ಪೂರೈಕೆ ಪ್ರಕರಣಗಳನ್ನು ಇನ್ನು ಮುಂದೆ ಕಡ್ಡಾಯವಾಗಿ ತಂತ್ರಾಂಶದಲ್ಲಿ ಆನ್ ಲೈನ್ ಮೂಲಕ ಇತ್ಯರ್ಥ ಮಾಡಲು ವಿಮಾ ಇಲಾಖೆ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಇನ್ನು ಮುಂದೆ ಆಫ್ ಲೈನ್ ಮೂಲಕ ಮಾಡುವ ಹಾಗೇ ಇಲ್ಲ. ಸಾಲ ಮಂಜೂರಾತಿ ಹಾಗೂ ಅವಧಿ ಪೂರೈಕೆ ಪ್ರಕರಣಗಳನ್ನು ಆಫ್ ಲೈನ್ ಮೂಲಕ ಮಾಡುವ ಹಾಗೇ ಇಲ್ಲ ಹಾಗೂ ಭೌತಿಕವಾಗಿ ಕಡತದಲ್ಲಿ ನಿರ್ವಹಿಸುತ್ತಿದ್ದ ಪ್ರಕ್ರಿಯೆಗಳನ್ನು ನಿಲ್ಲಿಸತಕ್ಕದ್ದು ಎಂದು ಸೂಚನೆ ನೀಡಿದ್ದಾರೆ.

ಆನ್ ಲೈನ್ ನಲ್ಲಿ ಅನುಮೋದಿಸುವ ಮುನ್ನ ಲೆಕ್ಕಾಚಾರದ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವೇ ಹಣ ಪಾವತಿಗೆ ತಂತ್ರಾಂಶದಲ್ಲಿ ಅನುಮೋದಿಸುವುದು. ಹೆಚ್ಚುವರಿಯಾಗಿ ಹಣ ಪಾವತಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿ ಜವಾಬ್ದಾರನಾಗಿರುತ್ತಾರೆ ಎಂದು ವಿಮಾ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರು ಕೆಜಿಐಡಿ ಮಾಹಿತಿಯನ್ನು ಆನ್ ಲೈನ್ ಮೂಲಕವೇ ಮಾಡಬಹುದಾಗಿದೆ. ಕರ್ನಾಟಕ ಸರ್ಕಾರ ವಿಮಾ ಇಲಾಖೆ(KGID) ವ್ಯವಸ್ಥೆ, ಸರ್ಕಾರಿ ನೌಕರರಿಗೆ ಆನ್ ಲೈನ್ ವ್ಯವಸ್ಥೆ ಕಲ್ಪಿಸಿದೆ. ಇದಕ್ಕಾಗಿ https://kgidonline.karnataka.gov.in ಎನ್ನುವಂತ ಆನ್ ಲೈನ್ ವೆಬ್ ಸೈಟ್ ಬಿಡುಗಡೆ ಮಾಡಲಾಗಿದ್ದು, ರಾಜ್ಯ ಸರ್ಕಾರಿ ನೌಕರರ ಕೆಜಿಐಡಿ ಮಾಹಿತಿ, ಈಗ ಆನ್ ಲೈನ್ ನಲ್ಲೂ ಲಭ್ಯವಾಗಲಿದೆ.

Leave A Reply

Your email address will not be published.