ಈಸಿಯಾಗಿ ಮನೆಯಲ್ಲಿಯೇ ಮಾಡಿ ಫ್ರೆಂಚ್ ಫ್ರೈಸ್!

ಒಂದಷ್ಟು ಜನರಿಗೆ ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯುವ ಕ್ರೇಜ್ ಇರುತ್ತೆ. ಇನ್ನು ಕೆಲವರಿಗೆ ಹೊರಗೆ ಹೋಗಿ ನಾನಾರೀತಿಯ ತಿಂಡಿ ತಿನಿಸುಗಳನ್ನು ತಿನ್ನುವ ಹವ್ಯಾಸ ಇರುತ್ತೆ. ಇನ್ನು ಸ್ವಲ್ಪ ಜನರಿಗೆ ಎಲ್ಲಿ ಕೂಡ ಹೋಗದೇ ಮನೆಯಲ್ಲಿಯೇ ಇದ್ದು ನಾನಾರೀತಿಯ ಖಾದ್ಯವನ್ನು ಮಾಡಿ ತಿನ್ನುವ ಅಭ್ಯಾಸ ಇರುತ್ತೆ. ನಿಮಗಾಗಿ ಈ ರೆಸಿಪಿ.

ಫ್ರೆಂಚ್ ಫ್ರೈಸ್ ಅಂದ್ರೆ ಸಾಮಾನ್ಯವಾಗಿ ಜನರಿಗೆ ಇಷ್ಟ ಇರುತ್ತೆ. ಅದರಲ್ಲೂ ಮಕ್ಕಳಿಗೆ ಈ ಹೆಸ್ರು ಕೇಳಿದ್ರೆ ಬಾಯಲ್ಲಿ ನೀರೂರುವುದು ಖಂಡಿತಾ. ಮಳೆಗಾಲದಲ್ಲಿ ಹೊರಗೆ ಹೋಗೋದೇ ಆರೋಗ್ಯಕರವಾಗಿ ಮನೆಯಲ್ಲಿಯೇ ಈಸಿಯಾಗಿ ಫ್ರೆಂಚ್ ಫ್ರೈಸ್ ಮಾಡುವುದು ಹೇಗೆ ಅಂತ ತಿಳಿಯೋಣ ಬನ್ನಿ.

ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆಲೂಗೆಡ್ಡೆ. ಚೆನ್ನಾಗಿ ತೊಳೆದು ಸಿಪ್ಪೆ ತೆಗಿರಿ. ನಂತರ ಸ್ವಲ್ಪ ದಪ್ಪಗೆ, ಉದ್ದವಾಗಿ ಕಟ್ ಮಾಡಿ. ಚಿತ್ರದಲ್ಲಿ ನೀಡಲಾದ ಆಕಾರದಲ್ಲಿ ಕಟ್ ಮಾಡಿಕೊಳ್ಳಿ. ಕಟ್ ಮಾಡಿದ ಆಲೂಗೆಡ್ಡೆಯನ್ನು ನೀರಿನಲ್ಲಿ ಸ್ವಲ್ಪ ಹೊತ್ತು ಬಿಡಿ. ಯಾಕೆಂದ್ರೆ ಹದವಾಗಿ ಫ್ರೆಂಚ್ ಫ್ರೈಸ್ ಬರಬೇಕೆಂದರೆ ನೆನೆಸಿಡಿ. ಬಾಣಲೆಗೆ ಅಡುಗೆ ಎಣ್ಣೆಯನ್ನು ಹಾಕಿ. ಇದು ಸ್ವಲ್ಪ ಹೊಟ್ಟು ಚೆನ್ನಾಗಿ ಕುದಿಯಬೇಕು. ಇದೀಗ ಆಲೂಗೆಡ್ಡೆಯ ತುಂಡುಗಳನ್ನು ಎಣ್ಣೆಗೆ ಹಾಕುವ ಸಮಯ. ಚೆನ್ನಾಗಿ ಫ್ರೈ ಮಾಡಿ,ಸುಡಲು ಬಿಡಬೇಡಿ. ಫ್ರೈ ಆದ ನಂತರ ಬಾಣಲೆಯಿಂದ ತೆಗೆಯಿರಿ. ಒಂದು ಬೌಲ್ ನಲ್ಲಿ ಖಾರ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಅದನ್ನು ಫ್ರೈ ಮಾಡಿದ ತುಂಡುಗಳ ಮೇಲೆ ಉದುರಿಸಿ. ನಿಮ್ಮ ಫೇವರೆಟ್ ಸಾಸ್ ಜೊತೆ ಫ್ರೆಂಚ್ ಫ್ರೈಸ್ ತಿನ್ನಿ.

ಆರೋಗ್ಯಕರ ಹಾಗೂ ಕಮ್ಮಿ ಖರ್ಚಿನಲ್ಲಿ ಮನೆಯಲ್ಲಿಯೇ ಮಾಡಿ ತಿಂದು ಆನಂದಿಸಿ.

Leave A Reply

Your email address will not be published.