Bhama Family: ಭಾಮಾ ದಾಂಪತ್ಯ ಜೀವನಕ್ಕೊಂದು ಬ್ರೇಕ್! ಇನ್ಸ್ಟಾಗ್ರಾಮ್ ನಲ್ಲಿ ಸ್ಪಷ್ಟನೆ!

Bhama family: ಶೈಲೂ ಚಿತ್ರದಲ್ಲಿ ಕನ್ನಡಿಗರ ಮನ ಗೆದ್ದಿರುವ ನಟಿ ಭಾಮಾ ಸಂಸಾರದಲ್ಲಿ (Bhama family) ಬಿರುಕು ಮೂಡಿರುವ ಮಾಹಿತಿ ಹೊರಬಿದ್ದಿದೆ. ಭಾಮಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೊದಲಾಸಲ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ನೀಡಿ ನಂತರ ಕನ್ನಡ ಮಾತ್ರವಲ್ಲದೇ ಕೇರಳ ಮೂಲದ ನಟಿಯಾಗಿರುವ ಭಾಮಾ ಮಲಯಾಳಂನಲ್ಲಿ ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳುನಲ್ಲಿಯು ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಭಾಮಾ ಅವರು ಕೊನೆಯದಾಗಿ 2018 ರಲ್ಲಿ ಬಿಡುಗಡೆಯಾದ ಮಲಯಾಳಂ ಚಲನಚಿತ್ರ ‘ಖಿಲಾಫತ್’ ನಲ್ಲಿ ಕಾಣಿಸಿಕೊಂಡರು.

https://www.instagram.com/p/C6ibx0cvx-m/?igsh=YzljYTk1ODg3Zg==

ಇದನ್ನೂ ಓದಿ: Dreams Astrology: ಕನಸಿನಲ್ಲಿ ದೆವ್ವಗಳು ಕಾಣಿಸಿಕೊಳ್ಳುತ್ತಾ? ಅದರ ಅರ್ಥ ಹೀಗಂತೆ!

ಭಾಮಾ ಅವರು 2020ರ ಜನವರಿಯಲ್ಲಿ ಅರುಣ್‌ ಎಂಬ ಉದ್ಯಮಿಯನ್ನು ಮದುವೆಯಾದರು. ಬಳಿಕ ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದು,2021ರಲ್ಲಿ ಭಾಮಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ಇದೀಗ ಭಾಮಾ ಅವರು ತಮ್ಮ ಗಂಡನಿಂದ ಬೇರೆಯಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆರಂಭದಲ್ಲಿ ಇದೆಲ್ಲ ಕೇವಲ ಕಟ್ಟುಕತೆ ಮಾತ್ರ ಎಂದು ಹೇಳಲಾಗಿತ್ತು. ಆದರೆ, ಕೊನೆಗೂ ಸ್ವತಃ ಭಾಮಾ ಅವರೇ ಡಿವೋರ್ಸ್ ವಿಚಾರವನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: IPL-T20 Chahal: ಕ್ರಿಕೆಟ್ ಇತಿಹಾಸದಲ್ಲಿಯೇ ಯಜುವೇಂದ್ರ ಚಹಾಲ್  ಅಪರೂಪದ ದಾಖಲೆ : ಗೊತ್ತಾದ್ರೆ ಶಾಕ್ ಆಗ್ತೀರ

ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮಗಳೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡು, ನಾನೀಗ ಸಿಂಗಲ್ ಮದ‌ರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಡಿವೋರ್ಸ್ ಖಚಿತಪಡಿಸಿದ್ದಾರೆ. ನಾನು ಒಂಟಿ ತಾಯಿಯಾಗಿ ಇರುವವರೆಗೂ ಬಲಶಾಲಿಯಾಗಿರುವುದು ನನ್ನ ಏಕೈಕ ಆಯ್ಕೆಯಾಗಿದೆ. ನಾನು ಇಷ್ಟು ಬಲಶಾಲಿ ಎಂಬುದು ನನಗೇ ತಿಳಿದಿರಲಿಲ್ಲ. ಇನ್ಮುಂದೆ ನಾನು ಮತ್ತು ನನ್ನ ಮಗಳು ಮಾತ್ರ ಎಂದು ಭಾಮಾ ಹೇಳಿದ್ದಾರೆ. ಅದಲ್ಲದೆ ಅರುಣ್ ಇರುವ ಎಲ್ಲ ಫೋಟೋಗಳನ್ನು ಡಿಲೀಟ್‌ ಮಾಡಿದ್ದು, ತಮ್ಮ ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಫೋಟೋಗಳು ಸಹ ಡಿಲೀಟ್ ಮಾಡಲಾಗಿದೆ.

ಇನ್‌ಸ್ಟಾಗ್ರಾಂ ಪೇಜ್‌ನ ಪ್ರೋಫೈಲ್‌ನಲ್ಲಿ ಕಲಾವಿದೆ, ಗಾಯಕಿ ಹಾಗೂ ಗೌರಿಯ ತಾಯಿ ಎಂದು ಬರೆದುಕೊಂಡಿದ್ದು, ಈ ಹಿಂದೆ ತಮ್ಮ ಖಾತೆಯಲ್ಲಿ ತನ್ನ ಹೆಸರಿನ ಜತೆಗೆ ಪತಿಯ ಹೆಸರು ಇತ್ತು ಆದರೆ ಈಗ ಪತಿ ಹೆಸರು ಸಹ ಕೈಬಿಡಲಾಗಿದೆ. ಇನ್ನು ಭಾಮಾ ಅವರು ದುಬೈನಲ್ಲಿ ಗೋಲ್ಡನ್‌ ವೀಸಾ ಪಡೆಯುವ ಸಂದರ್ಭದಲ್ಲೂ ಫೋಟೋಗಳಲ್ಲಿ ಅರುಣ್ ಇರಲಿಲ್ಲ. ಹೀಗಾಗಿ ಭಾಮಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗಿದೆ. ಡಿವೋರ್ಸ್‌ಗೆ ಕಾರಣವೇನು? ಇಬ್ಬರ ನಡುವೆ ಏನಾಯಿತು? ಎಂಬ ನಿಖರ ಮಾಹಿತಿ ತಿಳಿದುಬರಬೇಕಿದೆ.

Leave A Reply

Your email address will not be published.