Ramya Krishna: ಹೀರೋಯಿನ್ ಆಗಬೇಕು ಅಂದರೆ ಎಲ್ಲವನ್ನು ಮತ್ತು ಎಲ್ಲರನ್ನೂ ಒಪ್ಪಿಕೊಂಡು ಸಹಿಸಿಕೊಳ್ಳಲೇಬೇಕು: ರಮ್ಯಾ ಕೃಷ್ಣ ಅಚ್ಚರಿ ಸ್ಟೇಟ್ಮೆಂಟ್

Ramya Krishna: ಚಿತ್ರರಂಗದಲ್ಲಿ ಈಗಾಗಲೇ ಮೂರುವರೆ ದಶಕ ಪೂರೈಸಿರುವ ರಮ್ಯಾ ಕೃಷ್ಣ (Ramya Krishna) ಅವರಿಗೆ ಇವತ್ತು ಕೂಡ ಚಿತ್ರರಂಗದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಅದರಲ್ಲೂ ತೀರಾ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ಬಣ್ಣ ಹಚ್ಚಿರುವ ಈಕೆ ಸಾಕಷ್ಟು ಅನುಭವಗಳನ್ನು ಹೊಂದಿದ್ದಾರೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: IPL-2024: ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ : ಸ್ಯಾಟ್ಸನ್ ಇನ್ನಿಂಗ್ಸ್ ವ್ಯರ್ಥ

ಈಕೆ ನೀಲಾಂಬರಿ, ಕೃಷ್ಣ ರುಕ್ಮಿಣಿ, ಗಡಿಬಿಡಿ ಗಂಡ, ಮಾಂಗಲ್ಯಂ ತಂತುನಾನೇನ, ಬಾ ಬಾರೋ ರಸಿಕ, ಏಕಾಂಗಿ, ಸ್ನೇಹ, ರಕ್ತ ಕಣ್ಣೀರು, ಮಾಣಿಕ್ಯ.. ಹೀಗೆ ಹತ್ತಾರು ಚಿತ್ರ, ವೈವಿಧ್ಯಮಯ ಪಾತ್ರದ ಮೂಲಕ ಮೂರು ತಲೆಮಾರಿನ ಹೀರೋಗಳ ಜೊತೆ ನಟಿಸುತ್ತಾ ಬಂದಿರುವ ಅಪರೂಪದ ನಟಿ.

ಇದನ್ನೂ ಓದಿ: Menstrual Pain: ಮುಟ್ಟಿನ ನೋವು ತಡೆಯಲಾರದೆ ಪೈನ್‌ ಕಿಲ್ಲರ್‌ ಸೇವನೆ; ಕೋಮಾಗೆ ಜಾರಿದ ಯುವತಿ

ರಮ್ಯಾ ಕೃಷ್ಣ ಅವರು ದಕ್ಷಿಣ ಭಾರತದ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಅಲ್ಲದೆ ಬಾಲಿವುಡ್‌ನಲ್ಲಿಯೂ ಕೂಡ ರಮ್ಯಾಕೃಷ್ಣ ಹೆಸರು ಓಡಾಡುತ್ತಿದೆ. ಹೀಗಿರುವಾಗ ರಮ್ಯಾ ಕೃಷ್ಣ ಹಿಂದೆ ಒಮ್ಮೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದ ಮಾತು ಈಗ ದೇಶದೆಲ್ಲೆಡೆ ಮತ್ತೊಮ್ಮೆ ಜೀವ ಪಡೆದುಕೊಂಡಿದೆ. ಕಾಸ್ಟಿಂಗ್ ಕೌಚ್ ಸಮಸ್ಯೆ ಇಂದು ನಿನ್ನೆಯದಲ್ಲ, ಈ ಸಮಸ್ಯೆ ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲ ಬೇರೆ ಬೇರೆ ಕ್ಷೇತ್ರದಲ್ಲಿಯೂ ಇದೆ ಎಂದು ಹೇಳಿದ್ದರು. ಚಿತ್ರರಂಗದ ಸೆಲೆಬ್ರಿಟಿಗಳು ಹೆಚ್ಚಾಗಿ ಪರದೆಯ ಮೇಲೆ ಕಾಣಿಸಿಕೊಳ್ಳುವುದರಿಂದ ಬಹುತೇಕರಿಗೆ ಸಿನಿಮಾದವರ ವಿಚಾರದಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಎಂದಿದ್ದರು. ಇನ್ನು ರಮ್ಯಾ ಕೃಷ್ಣ ಚಿತ್ರರಂಗದಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕ-ನಿರ್ಮಾಪಕರ ಅಥವಾ ಹೀರೋಗಳ ಜೊತೆ ಕೆಲವೊಮ್ಮೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತೆ ಎಂದಿದ್ದರು. ಇಲ್ಲದೇ ಇದ್ದರೆ ಬಣ್ಣದ ಕನಸು ಕಟ್ಟಲು ಅಸಾಧ್ಯ ಎಂದರು. ಇನ್ನೂ ನಾನು ತುಂಬಾ ಲಕ್ಕಿ. ನನಗ್ಯಾವತ್ತು ಹೊಂದಾಣಿಕೆ ಮಾಡಿಕೊಳ್ಳುವ ಪ್ರಮೇಯ ಬಂದಿಲ್ಲ ಎಂದು ಕೂಡ ರಮ್ಯಾ ಕೃಷ್ಣ ಹೇಳಿದ್ದರು. ಆದರೆ ಸುಮಾರು 07 ವರ್ಷದ ಹಿಂದೆ ರಮ್ಯಾ ಕೃಷ್ಣ ಹಂಚಿಕೊಂಡಿದ್ದ ಈ ಅಭಿಪ್ರಾಯದ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈಗ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ .

Leave A Reply

Your email address will not be published.