IPL-2024: ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ : ಸ್ಯಾಟ್ಸನ್ ಇನ್ನಿಂಗ್ಸ್ ವ್ಯರ್ಥ

IPL 2024:  Delhi Capitals vs Rajasthan Royals: ಐಪಿಎಲ್-2024ರಲ್ಲಿ ರಾಜಸ್ಥಾನ್ ರಾಯಲ್ಸ್ (Rajastan Royals)ಸತತ ಎರಡನೇ ಸೋಲನ್ನು ಅನುಭವಿಸಿದೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (Arun Jaitley stadium) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ 20 ರನ್ನಳಿಂದ ಸೋತಿತು. 222 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ರಾಜಸ್ಥಾನ ( Rajastan Royals) ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್ ಗಳಿಗೆ ಸೀಮಿತವಾಯಿತು.

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯ ದಿನದಂದು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್

ರಾಜಸ್ಥಾನ ಬ್ಯಾಟ್ಸ್ ಮನ್ ಗಳ ಪೈಕಿ ನಾಯಕ ಸಂಜು ಸ್ಯಾಮ್ಯನ್(Sanju Samsun) 86 ರನ್ ಗಳೊಂದಿಗೆ ಅದ್ಭುತ ಇನ್ನಿಂಗ್ಸ್ (Innings) ಆಡಿದರೂ ಆದರೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಉಳಿದ ಬ್ಯಾಟ್ಸ್ ಮನ್ ಗಳ ದೊಡ್ಡ ಇನ್ನಿಂಗ್ಸ್ ಕೊರತೆಯಿಂದಾಗಿ ರಾಜಸ್ಥಾನ ಸೋಲನುಭವಿಸಿತು.

ಇದನ್ನೂ ಓದಿ: Menstrual Pain: ಮುಟ್ಟಿನ ನೋವು ತಡೆಯಲಾರದೆ ಪೈನ್‌ ಕಿಲ್ಲರ್‌ ಸೇವನೆ; ಕೋಮಾಗೆ ಜಾರಿದ ಯುವತಿ

ಡೆಲ್ಲಿ ಬೌಲರ್‌ಗಳಲ್ಲಿ( Delhi bowler )ಕುಲದೀಪ್ ಯಾದವ್( kuldeep yadav), ಖಲೀಲ್ ಅಹ್ಮದ್(kalifa ahamad) ಮತ್ತು ಮುಖೇಶ್ ಕುಮಾರ್(Mukesh Kumar )ತಲಾ ಎರಡು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್(Akshar Patel)ಮತ್ತು ರೆಸಿಖ್ ದಾರ್ ಸಲಾಂ ತಲಾ ಒಂದು ವಿಕೆಟ್ ಪಡೆದರು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್( Delhi Capitals) ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.

ಆರಂಭಿಕರಾದ ಜಾಕ್ ಫೇಸರ್ ಮೆಕ್‌ ಕುರ್ಕ್ (20 ಎಸೆತಗಳಲ್ಲಿ 50) ಮತ್ತು ಅಭಿಷರ್ ಪೊರೆಲ್ (65) ಡೆಲ್ಲಿ ಬ್ಯಾಟ್ಸ್‌ ಮನ್ಗಳಲ್ಲಿ( Delhi Capitals)ಗರಿಷ್ಠ ಸ್ಕೋರರ್‌ಗಳಾಗಿದ್ದರು. ಇವರಿಬ್ಬರ ಜತೆಗೆ ಟ್ರಿಸ್ಟಾನ್ ಸ್ವಲ್ಸ್ ಕೊನೆಯಲ್ಲಿ ಮಿಂಚಿದರು.

20 ಎಸೆತಗಳನ್ನು ಎದುರಿಸಿದ ಸ್ಟಬ್ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 41 ರನ್ ಗಳಿಸಿದರು. ರಾಜಸ್ಥಾನ್ ಬೌಲರ್‌ಗಳಲ್ಲಿ ರವಿಚಂದ್ರನ್ ಅಶ್ವಿನ್(ravichandran ashvin)ತಲಾ ಮೂರು ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್(Delhi Capitals)ತಂಡವು 12 ಅಂಕಗಳೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಅಲ್ಲದೆ ಪ್ಲೇಆಫ್ (play-off) ಕನಸನ್ನು ಜೀವಂತವಿರಿಸಿಕೊಳ್ಳುವಲ್ಲಿ ರಿಷಭ್ ಪಂತ್ ಪಡೆ (Rishabh panth) ಯಶಸ್ವಿಯಾಗಿದೆ.

Leave A Reply

Your email address will not be published.