SSLC Result: ಫಲಿತಾಂಶ ದಿನಾಂಕ ಘೋಷಣೆ ಮಾಡಿದ ಶಿಕ್ಷಣ ಇಲಾಖೆ

SSLC Result: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆ- 1ರ ಫಲಿತಾಂಶವನ್ನು ಮೇ 9ರಂದು ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳಿದೆ. ಮೌಲ್ಯ ಮಾಪನ ಪೂರ್ಣಗೊಂಡಿದ್ದು, ಫಲಿತಾಂಶದ ಕ್ರೋಡೀಕರಣ ಪ್ರಗತಿಯಲ್ಲಿದೆ. ಮೇ 9ರಂದು ಪ್ರಕಟಿಸಲು ಮಂಡಳಿ ನಿರ್ಧರಿಸಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶವು ಬೆಳಿಗ್ಗೆ 10.30 ಕ್ಕೆ ಆನ್‌ಲೈನ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಇಲಾಖೆ ಘೋಷಣೆ ಮಾಡಿದೆ.

10 ನೇ ತರಗತಿಯ ಫಲಿತಾಂಶಗಳನ್ನು ಮೇ 9, 2024 ರಂದು ಬೆಳಿಗ್ಗೆ 10.30 ಕ್ಕೆ ಘೋಷಿಸಲಾಗುತ್ತದೆ. ರಾಜ್ಯದಾದ್ಯಂತ 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಎಲ್ಲಾ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಅಸೆಸ್ಮೆಂಟ್ ಬೋರ್ಡ್ ನ 10 ನೇ ತರಗತಿ ಫಲಿತಾಂಶಗಳನ್ನು ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಪರಿಶೀಲಿಸಬಹುದು. kseab.karnataka.gov.in ನಲ್ಲಿ ನೇರ ಲಿಂಕ್ ಅನ್ನು ಸಹ ನೋಡಬಹುದು.

SSLC ಪರೀಕ್ಷೆಯು ಮಾರ್ಚ್ 25 ರಂದು ಪ್ರಾರಂಭವಾಗಿ, ಏಪ್ರಿಲ್ 6, 2024 ರಂದು ಕೊನೆಗೊಂಡಿತು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳನ್ನು ಏಪ್ರಿಲ್ 8, 2024 ರಂದು ನಡೆಸಲಾಯಿತು. ಸುಮಾರ್ ೮ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದುನಾಳೆ ಅವರೆಲ್ಲರ ಭವಿಷ್ಯ ನಿರ್ಧಾರ ಆಗುವ ಕ್ಷಣ. ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ.25ರಿಂದ ಏ.6ರವರೆಗೆ ನಡೆದಿತ್ತು. 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು. 2,750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಚೆಕ್‌ ಮಾಡಲು ವೆಬ್‌ಸೈಟ್‌ಗಳು:

https://kseab.karnataka.gov.in

https://karresults.nic.in

https://sslc.karnataka.gov.in

Leave A Reply

Your email address will not be published.